BIG NEWS | ಹಣಗೆರೆ ಕಟ್ಟೆ ಲಾಡ್ಜ್ ನಲ್ಲಿ ನಡೆದ ಕೊಲೆ ಕೇಸ್ | 8 ತಿಂಗಳ ನಂತರ ಆರೋಪಿ ಅರೆಸ್ಟ್ | ನಡೆದಿದ್ದೇನು?
Accused in murder case at Hanagere Katte Lodge, Tarikere, Chikkamagaluru district, Hazrat Syed Sadat Dargah Bhootaraya Chowdeshwari Temple, Hanagere Katte, ಹಜರತ್ ಸೈಯದ್ ಸಾದತ್ ದರ್ಗಾ ಭೂತರಾಯ ಚೌಡೇಶ್ವರಿ ದೇವಾಲಯ, ಹಣಗೆರೆ ಕಟ್ಟೆ,Hanagere Katte murder case
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024
ಶಿವಮೊಗ್ಗ ಜಿಲ್ಲೆ ಹಣಗೆರೆಕಟ್ಟೆಯ ಲಾಡ್ಜ್‌ನಲ್ಲಿ ನಡೆದಿದ್ದ ಯುವತಿಯ ಕೊಲೆ ಪ್ರಕರಣದ ಆರೋಪಿಯನ್ನ ಮಾಳೂರು ಪೊಲೀಸ್ ಠಾಣೆಯ ಪೊಲೀಸರು ಬರೋಬ್ಬರಿ 8 ತಿಂಗಳ ಬಳಿಕ ಅರೆಸ್ಟ್ ಮಾಡಿದ್ದಾರೆ. 2024 ರ ಏಪ್ರಿಲ್ 4 ರಂದು ಹಣಗೆರೆ ಕಟ್ಟೆಯ ಲಾಡ್ಜ್ ವೊಂದರಲ್ಲಿ ಯುವತಿಯನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಧಾರ್ಮಿಕ ಕ್ಷೇತ್ರದ ಸನ್ನಿದಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಈ ಪ್ರದೇಶದಲ್ಲಿ ಕಾನೂನು ಬಾಹಿರ ಚುಟವಟಿಕೆ ನಡೆಯುತ್ತಿದೆಯೆ ಎಂಬ ಅನುಮಾನಕ್ಕೂ ಕಾರಣವಾಗಿತ್ತು. ಅಲ್ಲದೆ ಪ್ರಕರಣದಲ್ಲಿ ಯಾವೊಂದು ಸುಳಿವು ಸಹ ಸಿಕ್ಕಿರಲಿಲ್ಲ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೆಲ್ಲಾ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಅಂದಿನ ಮಲೆನಾಡು ಟುಡೆಯ ವರದಿ ಇಲ್ಲಿದೆ ಓದಿ : SHIVAMOGGA | ಲಾಡ್ಜ್ ರೂಮ್‌ನಲ್ಲಿ ಯುವತಿಯ ಬರ್ಬರ ಹತ್ಯೆ! ನಡೆದಿದ್ದೇನು? ಪೊಲೀಸ್ ಅಲರ್ಟ್!
ಆನಂತರ ಕೆಲವು ದಿನಗಳ ತನಿಖೆಯ ಬಳಿಕ ಲಾಡ್ಜ್ ನಲ್ಲಿ ಕೊಲೆಯಾದ ಯುವತಿ ಶಿವಮೊಗ್ಗದ ಬಾಪೂಜಿ ನಗರದ ನಿವಾಸಿ ಉಮಾ ಎಂದು ಗೊತ್ತಾಗಿತ್ತು. ಆ ಬಗ್ಗೆಯು ಮಲೆನಾಡು ಟುಡೆಯು ವರದಿ ಮಾಡಿತ್ತು. ಅದರ ಲಿಂಕ್ ಇಲ್ಲಿದೆ ಹಣಗೆರೆ ಕಟ್ಟೆ ಕೊಲೆ ಕೇಸ್‌ಗೆ ಶಿವಮೊಗ್ಗ ಲಿಂಕ್ | ಮರ್ಡರ್ ಆದ ಯುವತಿ ಯಾರು ಗೊತ್ತಾ? | BIG Exclusive updates
ಪೊಲೀಸರಿಗೆ ಕೊಲೆಯಾದ ಯುವತಿಯ ಬಗ್ಗೆ ಮಾಹಿತಿ ಲಭ್ಯವಾಗಿದ ಬಳಿಕವೂ ಪ್ರಕರಣ ತಾರ್ಕಿಕ ಅಂತ್ಯ ಕಂಡಿರಲಿಲ್ಲ. ಏಕೆಂದರೆ ಪ್ರಕರಣದ ಆರೋಪಿ ಪತ್ತೆಯಾಗಿರಲಿಲ್ಲ. ಇದೀಗ ಆರೋಪಿ ಪತ್ತೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆರೋಪಿಯನ್ನು ಪತ್ತೆ ಮಾಡಿರುವ ಪೊಲೀಸರು ಮಾಳೂರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಇದೀಗ ಮುಂದಿನ ಕಾನೂನು ಪ್ರಕ್ರಿಯೆಗಳನ್ನ ನಡೆಸುತ್ತಿದ್ದಾರೆ. ಇಷ್ಟು ದಿನ ಪೊಲೀಸರ ಕೈಗೆ ಸಿಗದೇ ತಲೆಮೆರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸಿನಿಮಾ ಸ್ಟೈಲ್‌ನಲ್ಲಿ ಹಿಡಿದು ತಂದಿರುವ ಬಗ್ಗೆ ಮಾಹಿತಿ ಇದೆ. ಆದಾಗ್ಯು ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೆ ಸಿಗಬೇಕಿದೆ.
SUMMARY | Accused in murder case at Hanagere Katte Lodge arrested in Tarikere, Chikkamagaluru district
KEY WORDS | Accused in murder case at Hanagere Katte Lodge, Tarikere, Chikkamagaluru district, Hazrat Syed Sadat Dargah Bhootaraya Chowdeshwari Temple, Hanagere Katte, ಹಜರತ್ ಸೈಯದ್ ಸಾದತ್ ದರ್ಗಾ ಭೂತರಾಯ ಚೌಡೇಶ್ವರಿ ದೇವಾಲಯ, ಹಣಗೆರೆ ಕಟ್ಟೆ,Hanagere Katte murder case