ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಗಡುವು ಮತ್ತೆ ವಿಸ್ತರಣೆ
The state government has extended the deadline for installation of HSRP number plates till December 31.
SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 3, 2024
ರಾಜ್ಯ ಸರ್ಕಾರ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಯ ಗಡುವನ್ನು 2024 ಡಿಸೆಂಬರ್ 31 ರ ವರೆಗೆ ವಿಸ್ತರಿಸಿದೆ.
ಇದುವರೆಗೂ ರಾಜ್ಯಸರ್ಕಾರ ನಂಬರ್ ಪ್ಲೇಟ್ ಅಳವಡಿಕೆಗೆ 4 ಬಾರಿ ಗಡುವನ್ನು ನೀಡಿತ್ತು. ಅಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಹೈಕೋರ್ಟ್ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸದವರ ವಿರುದ್ಧ ಡಿಸೆಂಬರ್ ನಾಲ್ಕರ ವರೆಗೆ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶಿಸಿತ್ತು.
ಆದರೆ ಇನ್ನೂ ರಾಜ್ಯದಲ್ಲಿ 2 ಕೋಟಿ ವಾಹನಗಳ ಪೈಕಿ 55 ಲಕ್ಷ ವಾಹನಗಳು ಮಾತ್ರ ಇದುವರೆಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿವೆ. ಆದ್ದರಿಂದ ಸರ್ಕಾರ ಮತ್ತೆ ಐದನೇ ಬಾರಿಗೆ ಡಿಸೆಂಬರ್ 31 ರ ವರೆಗೆ ಈ ಗಡುವನ್ನು ವಿಸ್ತರಣೆ ಮಾಡಿವೆ.
ಎಪ್ರಿಲ್ 1 2019 ರ ನಂತರ ನೊಂದಣಿಯಾದ ವಾಹನ ಗಳಿಗೆ ಹೆಚ್ ಆರ್ ಪಿ ನಂಬರ್ ಅಳವಡಿಕೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದ್ದು, 2 ಕೋಟಿ ವಾಹನ ಸವಾರರಲ್ಲಿ 1.45 ಕೋಟಿ ಜನ ಇನ್ನೂ ನಂಬರ್ ಪ್ಲೇಟ್ ಅಳವಡಿಸುವಲ್ಲಿ ನಿರ್ಲಕ್ಷ್ಯ ತೋರಿದಂತಿದೆ.
SUMMARY| The state government has extended the deadline for installation of HSRP number plates till December 31.
KEYWORDS| HSRP number plates, state government, extended the deadline, kannadanews,