ಶರೋನನ್ನ ಇಂಚಿಂಚು ಕೊಂದ ಗ್ರೀಷ್ಮಾಳಿಗೆ ಮರಣದಂಡನೆ | ಪ್ರೀತಿ ಕೊಂದ ಕೊಲೆಗಾತಿಯ ರಿಯಲ್‌ ಕಹಾನಿ!

Greeshma Killed Sharon Inch By Inch, Lover Cannot Be Trusted, Kerala Court e Granting Death Sentence

ಶರೋನನ್ನ ಇಂಚಿಂಚು ಕೊಂದ ಗ್ರೀಷ್ಮಾಳಿಗೆ ಮರಣದಂಡನೆ | ಪ್ರೀತಿ ಕೊಂದ ಕೊಲೆಗಾತಿಯ ರಿಯಲ್‌ ಕಹಾನಿ!
Greeshma Killed Sharon Inch By Inch, Lover Cannot Be Trusted, Kerala Court e Granting Death Sentence

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 21, 2025 ‌‌ 

ಕೇರಳ ಕೋರ್ಟ್‌ ಅಪರೂಪದ ಪ್ರಕರಣವೊಂದರಲ್ಲಿ ತನ್ನ ಪ್ರಿಯಕರನನ್ನು ಸಾಯಿಸಿದ ಯುವತಿಯೊಬ್ಬಳಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. 2022ರಲ್ಲಿ ಕೇರಳದಲ್ಲಿ ನಡೆದಿದ್ದ ಪ್ರಕರಣ ಇದಾಗಿದೆ. ಆ ಸಮಯದಲ್ಲಿ ಪ್ರಕರಣ ತೀವ್ರ ಗಂಭೀರ ಸ್ವರೂಪ ಪಡೆದಿಕೊಂಡಿತ್ತಷ್ಟೆ ಅಲ್ಲದೆ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ಏಕೆಂದರೆ ನಡೆದ ಕೃತ್ಯ ನಿಜಕ್ಕೂ ಹಿಂಸೆಯ ಪರಮಾವಧಿಯಾಗಿತ್ತು. ಪ್ರಕರಣದ ವಿವರ ತಿಳಿಯುವ ಮೊದಲು, ತೀರ್ಪನ್ನು ನೀಡುತ್ತಾ ಕೋರ್ಟ್‌ ಹೇಳಿದ ಮಾತನ್ನು ಓದಿಬಿಡಿ "Greeshma killed Sharon inch by inch , ಆತನ ಸಾವು ಬಯಸುವುದಕ್ಕಿಂತ ಹೆಚ್ಚಾಗಿ, ಆತ ಸಾಯುವುದಕ್ಕಿಂತ ಮೊದಲು ಅತಿಹೆಚ್ಚು ನೋವನ್ನು ಅವಳು ನೋಡುವ ಉದ್ದೇಶ ಹೊಂದಿದ್ದಳು. ಈ ಪ್ರಕರಣದಿಂದ ಲವರ್‌ನ್ನು ಎಂದಿಗೂ ನಂಬದಿರಿ ಎಂಬ ಸಂದೇಶ ರವಾನೆಯಾಗಿದೆ, ಪ್ರಣಯದಿಂದ ಬೇರ್ಪಡುವ ಹೊತ್ತಿನಲ್ಲಿ ಯುವತಿಯೊಬ್ಬಳು ತನ್ನ ಬಾಯ್‌ಫ್ರೆಂಡ್‌ನ್ನು ಸುಲಭವಾಗಿ ಟಾರ್ಗೆಟ್‌ ಆಗಿಸಬಳ್ಳಲು ಎಂಬ ಮೆಸೇಜ್‌ ಈ ಪ್ರಕರಣದಿಂದ ಸಮಾಜಕ್ಕೆ ರವಾನೆಯಾಗುತ್ತಿದೆ. ಹಾಗಾಗಿ ಪ್ರಕರಣವನ್ನು ಈಸಿಯಾಗಿ ಪರಿಗಣಿಸಲಾಗದು"

Additional Sessions Court of Neyyattinkara ಕೋರ್ಟ್‌ ಹೀಗೆ 588 ಪುಟಗಳ ತೀರ್ಪು ಬರೆದಿರುವಾಗ ಅದರ ಹಿಂದಿನ ಮಹತ್ವವೂ ಸಹ ಸಮಾಜದ ಅರಿವಿಗೆ ಬರಬೇಕಿದೆ. ಶಿವಮೊಗ್ಗದಿಂದ ಪ್ರಸಾರವಾಗುವ ಮಲೆನಾಡು ಟುಡೆ ಕೇರಳದ ಸಂಗತಿಯೊಂದನ್ನು ವರದಿ ಮಾಡುತ್ತಿರುವ ಉದ್ದೇಶವೂ ಸಹ ದೇಶದ ದೃಢ ನ್ಯಾಯಾಂಗ ವ್ಯವಸ್ಥೆಯ ಗಟ್ಟಿ ಧ್ವನಿಯ ತೀರ್ಪು ಸಮಾಜಕ್ಕೆ ತಲುಪಬೇಕು ಎನ್ನುವುದಷ್ಟೆ. 

ಕೇರಳ ಶರೋನ್‌ ಹತ್ಯೆ ಕೇಸ್‌ 

ಕೇರಳದ ತಿರುವನಂತಪುರದಲ್ಲಿ 2022ರ ಅಕ್ಟೋಬರ್‌ 14 ರಂದು ರೇಡಿಯಾಲಜಿ ವಿದ್ಯಾರ್ಥಿ ಶರೋನ್ ರಾಜ್ ಎಂಬಾತ ಸಾವನ್ನಪ್ಪಿದ್ದ. ಆತನಿಗೆ ವಿಷಪ್ರಾಶನ ಮಾಡಿಸಿ ಸಾಯಿಸಲಾಗಿದೆ ಎಂಬ ಆರೋಪವಿತ್ತು. ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಅನುಮಾನದ ಮೇರೆಗೆ ಶರೋನ್‌ನ ಪ್ರಿಯತಮೆ ಗ್ರೀಷ್ಮಾಳನ್ನು ವಶಕ್ಕೆ ಪಡೆದುಕೊಂಡಿದ್ದರು. ಪೊಲೀಸ್ ವಿಚಾರಣೆಯಲ್ಲಿ ಆಕೆಯ ಕೃತ್ಯ ಬಯಲಾಗಿತ್ತು. 

ಗ್ರೀಷ್ಮಾ ಮತ್ತು ಶರೋನ್ ರಾಜ್ ಯಾರು?

ಗ್ರೀಷ್ಮಾ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯವಳು, ಖಾಸಗಿ ಕಾಲೇಜಿನಲ್ಲಿ ಲಿಟ್ರೇಚರ್‌ ಓದುತ್ತಿದ್ದಳು ಶರೋನ್‌ ರಾಜ್‌ ತಿರುವನಂತಪುರಂ ಜಿಲ್ಲೆಯವನು. ಅಂತಿಮ ವರ್ಷದ ಬಿಎಸ್ಸಿ ರೇಡಿಯಾಲಜಿ ವಿದ್ಯಾರ್ಥಿನಿಯಾಗಿದ್ದ. ಇಬ್ಬರು ಪರಸ್ಪರ ಪ್ರೇಮಿಸಿದ್ದು, ಸುಮಾರು ಒಂದು ವರ್ಷಗಳ ಕಾಲ ಇವರಿಬ್ಬರು ಜೊತೆಗಿದ್ದರು. ಈ ನಡುವೆ ಗ್ರೀಷ್ಮಾರಿಗೆ ಮದುವೆ ಸಂಬಂಧ ಬಂದು, ಎಂಗೇಜ್‌ಮೆಂಟ್‌ ಆಗಿದೆ. ಆನಂತರವೂ ಶರೋನ್‌ ಜೊತೆ ಓಡಾಡಿಕೊಂಡಿದ್ದ ಗ್ರೀಷ್ಮಾ, ಆತನನ್ನು ಸಾಯಿಸುವ ಮೊದಲು ಆತನನ್ನು ಸೆಕ್ಸ್‌ ವಿಷಯದ ಪ್ರಸ್ತಾಪಿಸಿ ತನ್ನ ಮನೆಗೆ ಬರುವಂತೆ ಮಾಡಿದ್ದಳು. ಈ ಬಗ್ಗೆ ಉಲ್ಲೇಖಿಸಿರುವ ಕೋರ್ಟ್‌, ಸಾಮಾನ್ಯವಾಗಿ ಎಂಗೇಜ್‌ ಆದ ಪ್ರೇಮಿಗಳ ಪೈಕಿ ಯಾರೇ ಆದರೆ, ಅವರ ವೈವಾಹಿಕ ಬದುಕಿನ ಹೊಸ ಇಚ್ಚೆಯ ನಡುವೆ ತಮ್ಮ ಪ್ರಣಯದ ಜೊತೆಗಾರರ ಜೊತೆಗೆ ಸೆಕ್ಸ್‌ ಮಾಡಲು ಬಯಸುವುದಿಲ್ಲ ಎಂದಿದೆ. 

ಗ್ರೀಷ್ಮಾ, ಪ್ರೀತಿಸುತ್ತಿದ್ದ ಯುವಕನನ್ನೇ ಕೊಲೆ ಮಾಡಲು ಪ್ಲಾನ್‌ ಮಾಡಿದ್ಯಾಕೆ?

ಇನ್ನೊಬ್ಬರ ಜೊತೆ ವಿವಾಹ ನಿಶ್ಚಯವಾದ ಬಳಿಕ ಗ್ರೀಷ್ಮಾ ಶರೋನ್‌ನಿಂದ ದೂರವಾಗಲು ಬಯಸಿದ್ದಳು. ಆದರೆ ಶರೋನ್‌ ಗ್ರೀಷ್ಮಾಳನ್ನು ಅತಿಯಾಗಿ ಪ್ರೀತಿಸಿದ್ದ. ಆಕೆಯನ್ನೆ ದೇವತೆ ಎಂದುಕೊಂಡಿದ್ದ. ಆತನ ಪ್ರೀತಿಯಿಂದ ದೂರವಾಗಲು ಗ್ರೀಷ್ಮಾ ಆತನನ್ನೆ ಮುಗಿಸುವ ಪ್ಲಾನ್‌ ಮಾಡಿದ್ದಳು. ಈಕೆಯ ವಿಚಾರಕ್ಕೆ ಚಿಕ್ಕಪ್ಪ ಹಾಗೂ ತಾಯಿ ಸಾಥ್‌ ನೀಡಿದ್ದರು ಎನ್ನುತ್ತದೆ ಆರೋಪ. ಕೋರ್ಟ್‌ನ ತೀರ್ಪಿನ ಪ್ರಕಾರ, ತಾಯಿ ಸಾಕ್ಷ್ಯಧಾರಗಳ ಕೊರತೆಯಿಂದ ಖುಲಾಸೆಯಾದರೆ, ಚಿಕ್ಕಪ್ಪನಿಗೆ ಶಿಕ್ಷೆಯಾಗಿದೆ. 

ಹತ್ಯೆ ನಡೆದಿದ್ದು ಹೇಗೆ?

ಶರೋನ್‌ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಗ್ರೀಷ್ಮಾ, ಆತನಿಗೆ ಕಷಾಯ ಮಾಡಿಕೊಟ್ಟಿದ್ದಾಳೆ. ಅದನ್ನು ಕುಡಿದ ಶರೋನ್‌ ಅಸ್ವಸ್ಥಗೊಂಡಿದ್ದ ಅಲ್ಲಿಂದ ಸುಮಾರು 11 ದಿನ ಆಸ್ಪತ್ರೆಯಲ್ಲಿದ್ದ. ಆದರೆ ಪ್ರತಿದಿನ ನರಕಯಾತನೆ ಅನುಭವಿಸಿದ್ದ ಆತನು, ಒಂದರ ನಂತರ ಮತ್ತೊಂದು ಅಂಗ ವೈಫಲ್ಯದಿಂದಾಗಿ ಯಾತನೆ ಅನುಭವಿಸಿ ಕೊನೆಗೆ ಸಾವು ಕಂಡಿದ್ದ. ಸಾವಿಗೂ ಮೊದಲು ತನ್ನ ತಂದೆಯ ಬಳಿ ಆತ, ಗ್ರೀಷ್ಮಾ ನೀಡಿರುವ ಕಷಾಯ ಕುಡಿದು ಬಂದಿದ್ದೆ ಎಂದಿದ್ದ. ಅದಕ್ಕೂ ಮೊದಲು ಈ ವಿಚಾರ ಆತನೂ ಹೇಳಿರಲಿಲ್ಲ. 

ಮೊದಲ ಸಲದ ಸ್ಕೆಚ್‌ ಫೇಲ್‌, ಎರಡನೆಯ ಪ್ರಯತ್ನದಲ್ಲಿ ಗೆದ್ದ ಗ್ರೀಷ್ಮಾ

ಗ್ರೀಷ್ಮಾ ಶರೋನ್‌ನನ್ನು ಕೊಲ್ಲಲೇ ಬೇಕು ಎಂದು ನಿರ್ಧರಿಸಿದ್ದಳು. ಅದಕ್ಕಾಗಿ ಮೊದಲು ಜ್ಯೂಸ್‌ ವೊಂದರಲ್ಲಿ ಓವರ್‌ ಡೋಸ್‌ನಿಂದ ತೊಂದರೆಗೊಳಗಾಬಹುದಾದ ಮಾತ್ರೆಯನ್ನು ಬೆರೆಸಿ ಶರೋನ್‌ಗೆ ಕುಡಿಸಿದ್ದಳು. ಆದರೆ ಶರೋನ್‌ಗೆ ವಾಂತಿಯಾಗಿ ಆತ ಬಚಾವ್‌ ಆಗಿದ್ದ. ಆದರೆ ಎರಡನೇ ಪ್ರಯತ್ನಲ್ಲಿ ಗ್ರೀಷ್ಮಾ ಉದ್ದೇಶ ಈಡೇರಿತ್ತು. ಏಕೆಂದರೆ ಎರಡನೇ ಯತ್ನದಲ್ಲಿ ಗ್ರೀಷ್ಮಾ 100 ಪರ್ಸೆಂಟ್‌ ವಿಷಯುಕ್ತ ಕಳೆನಾಶಕವನ್ನು ಕಷಾಯದಲ್ಲಿ ಮಿಕ್ಸ್‌ ಮಾಡಿದ್ದಳು. ತನ್ನ ತೀರ್ಪಿನಲ್ಲಿ ಈ ಬಗ್ಗೆ ಹೇಳುತ್ತಾ ಕೋರ್ಟ್‌, ಗ್ರೀಷ್ಮಾ ಗೂಗಲ್‌ನಲ್ಲಿ ನೂರಕ್ಕೂ ಹೆಚ್ಚು ಸಲ paracetamol ಹುಡುಕಾಡಿರುವುದು ಆಕೆಯ ಮನಸ್ಸಿನಲ್ಲಿದ್ದ ಉದ್ದೇಶಕ್ಕೆ ಸಾಕ್ಷಿ ಹೇಳುತ್ತಿದೆ ಎಂದಿದೆ. 

ಆತ್ಮಹತ್ಯೆಗೆ ಯತ್ನಿಸಿದ್ದ ಗ್ರೀಷ್ಮಾ

ಈ ನಡುವೆ ಪೊಲೀಸ್‌ ಕಸ್ಟಡಿಯಲ್ಲಿದ್ದ ವೇಳೆ, ಗ್ರೀಷ್ಮಾ ಸಹ ಟಾಯ್ಲೆಟ್‌ನಲ್ಲಿದ್ದ ಲೈಸೋಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆನಂತರ ಈ ವಿಚಾರದಲ್ಲಿ ಮಾಜಿಸ್ಟ್ರೇಟ್‌ ಎದುರು ಅವಳು ಹೇಳಿಕೆ ನೀಡಿದ್ದಳು. ಅಲ್ಲಿ ಆಕೆ ತಪ್ಪೊಪ್ಪಿಕೊಂಡಿದ್ದಳು. ಅದನ್ನು ಮ್ಯಾಜಿಸ್ಟ್ರೇಟ್‌ ಮರಣ ಹೇಳಿಕೆಯನ್ನಾಗಿ ಪರಿಗಣಿಸಿದ್ದು, ಆಕೆಯ ಕೃತ್ಯವನ್ನು ಪರಿಗಣಿಸಿರಲಿಲ್ಲ. ಕೋರ್ಟ್‌ ಇದನ್ನು ಸಹ ಉಲ್ಲೇಖಿಸಿ ಹಾಗೂ ಮ್ಯಾಜಿಸ್ಟ್ರೇಟ್‌ ಸ್ಟೇಟ್ಮೆಂಟ್‌ನ್ನು ಪರಿಗಣಿಸಿ ತೀರ್ಪು ನೀಡಿದೆ. 

ಆಸ್ಪತ್ರೆಯಲ್ಲಿದ್ದರೂ ಶರೋನ್‌ ಕುಟುಂಬಕ್ಕೆ ಸತ್ಯ ಹೇಳದ ಗ್ರೀಷ್ಮಾ

ಇನ್ನೂ ಶರೋನ್‌ ಆಸ್ಪತ್ರೆಯಲ್ಲಿ ನರಳಾಡುತ್ತಿರುವಾಗಲೂ ಗ್ರೀಷ್ಮಾ ಆತನಿಗೆ ತಾನೇನು ಕುಡಿಸಿದೆ ಎಂಬ ಸತ್ಯವನ್ನು ಹೇಳಿರಲಿಲ್ಲ. ಈ ಬಗ್ಗೆ ಶರೋನ್‌ ಸಹೋದರ ಕೋರ್ಟ್‌ಗೆ ಸಾಕ್ಷ್ಯವನ್ನು ನುಡಿದಿದ್ದು ಕೋರ್ಟ್‌ ಅದನ್ನು ಸಹ ಪರಿಗಣಿಸಿ ತೀರ್ಪು ನೀಡಿದೆ. ಪ್ರಕರಣದ ಕುರಿತಾಗಿ 2022 ಅಕ್ಟೋಬರ್‌ 31 ರಂದು ಆಕೆಯನ್ನು ಪೊಲೀಸರು ಬಂಧಿಸಿದ್ದರು. ಆನಂತರ ಪೊಲೀಸರು ತಾಂತ್ರಿಕ ಹಾಗೂ ಸಾಂದರ್ಭಿಕ ಸಾಕ್ಷ್ಯಗಳನ್ನು ಒದಗಿಸಿದ್ದರು. ಈ ನಡುವೆ ದೇಶದೆಲ್ಲೆಡೆ ಇಡೀ ಪ್ರಕಾರಣ ಮಾಧ್ಯಮಗಳ ಮೂಲಕ ದೊಡ್ಡ ಚರ್ಚೆಗೆ ಕಾರಣವಾಗಿತ್ತು. 

ಗ್ರೀಷ್ಮಾ ಕಿಲ್ಸ್‌ ಶರೋನ್‌

ಶರೋನ್‌ನನ್ನು ಗ್ರೀಷ್ಮಾ ಇಂಚಿಂಚಾಗಿ ಕೊಂದಿದ್ದಾಳೆ ಎಂದು ತನ್ನ ತೀರ್ಪಿನಲ್ಲಿಯೆ ಉಲ್ಲೇಖಿಸಿರುವ ಕೋರ್ಟ್‌, ತೀರ್ಪಿನಲ್ಲಿ ಆಕೆ ಕೇವಲ ಒಬ್ಬ ಸ್ನೇಹಿತನನ್ನು ಕೊಲ್ಲಲಿಲ್ಲ. ಆಕೆ ಆ ಮುಗ್ದ ಹುಡುಗಿನಿಂದ ಸಿಕ್ಕ ಪ್ರಾಮಾಣಿಕತೆ, ಶುದ್ದ ಹಾಗೂ ನೈಜವಾದ ಪ್ರೀತಿಯನ್ನು ಕೊಂದಿದ್ದಾಳೆ ಎಂಬ ಸಾಲುಗಳನ್ನು ಹೇಳುತ್ತಾ 588 ಪುಟದಲ್ಲಿ ಹಲವು ಕೇಸ್‌ಗಳ ಉಲ್ಲೇಖದೊಂದಿಗೆ ಅಂತಿಮವಾಗಿ ಗ್ರೀಷ್ಮಾರಿಗೆ ಮರಣದಂಡನೆಯನ್ನು ವಿಧಿಸಿದೆ. ಮರಣದಂಡನೆಯ ಜೊತೆಗೆ, ಗ್ರೀಷ್ಮಾಗೆ ಸೆಕ್ಷನ್ 364 ರ ಅಡಿಯಲ್ಲಿ ಅಪರಾಧಗಳಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ, ಐಪಿಸಿಯ ಸೆಕ್ಷನ್ 328 ರ ಅಡಿಯಲ್ಲಿ ಅಪರಾಧಕ್ಕಾಗಿ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಐಪಿಸಿಯ ಸೆಕ್ಷನ್ 203 ರ ಅಡಿಯಲ್ಲಿ ಅಪರಾಧಕ್ಕಾಗಿ 2 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ವಿಷಯ ಅಂದರೆ, ಕೇರಳದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗುತ್ತಿರುವ ಅತಿಸಣ್ಣ ವಯಸ್ಸಿನ ಮಹಿಳೆ ಗ್ರೀಷ್ಮಾ. ಇದೇ ವಾದವನ್ನು ಮಂಡಿಸಿ ಆಕೆಯ ಮೇಲಿನ ಶಿಕ್ಷೆ ಪ್ರಮಾಣವನ್ನು ಕಡಿಮೆ ಕೋರಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ. 

SUMMARY | Greeshma Killed Sharon Inch By Inch, Lover Cannot Be Trusted, Kerala Court e Granting Death Sentence

KEY WORDS | Greeshma Killed Sharon Inch By Inch, Lover Cannot Be Trusted, Kerala Court e Granting Death Sentence