ನಗರ ಆಸ್ಪತ್ರೆ ಎದುರಿನ ಮರ ಹತ್ತಿ, ಹಾರುತ್ತೇನೆ ಎಂದ ಗ್ರಾಮ ಪಂಚಾಯಿತಿ ಸದಸ್ಯ! ಕಾರಣ ಏನು ಗೊತ್ತಾ

Shimoga , Gram panchayat member climbs tree  threaten to jump, protests against lack of doctors at Hosanagara taluk nagara hospital  

ನಗರ ಆಸ್ಪತ್ರೆ ಎದುರಿನ ಮರ ಹತ್ತಿ, ಹಾರುತ್ತೇನೆ ಎಂದ ಗ್ರಾಮ ಪಂಚಾಯಿತಿ ಸದಸ್ಯ! ಕಾರಣ ಏನು ಗೊತ್ತಾ
Shimoga , Gram panchayat member climbs tree  threaten to jump, protests against lack of doctors at Hosanagara taluk nagara hospital  

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024

ಶಿವಮೊಗ್ಗ | ಜಿಲ್ಲೆಯ ಹೊಸನಗರ ತಾಲ್ಲೂಕು ನಗರ ಆಸ್ಪತ್ರೆಯ ಅವ್ಯವಸ್ಥೆಯನ್ನ ಖಂಡಿಸಿ ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮರ ಹತ್ತಿ ಕುಳಿತ ಘಟನೆ ಮಂಗಳವಾರ ನಡೆದಿದೆ. ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ ಶೆಟ್ಟಿ ಮರ ಏರಿದವರು. 

ಆಗಾಗ ತಮ್ಮ ಪ್ರತಿಭಟನೆಗಳಿಂದಲೇ ಸುದ್ದಿಯಾಗುವ ಕರುಣಾಕರ ಶೆಟ್ಟಿಯವರು ನಗರ ಆಸ್ಪತ್ರೆಯಲ್ಲಿ ಡಾಕ್ಟರ್‌ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರಷ್ಟೆ ಅಲ್ಲದೆ ಆಸ್ಪತ್ರೆಗೆ ಡಾಕ್ಟರ್‌ನ್ನ ಕೊಡುವಂತೆ ಆಗ್ರಹಿಸಿ ಮರ ಹತ್ತಿ ಕೊಂಬೆಯೊಂದರ ಮೇಲೆ ಕುಳಿತು ದಿಕ್ಕಾರ ಕೂಗಿದರು. ಅಲ್ಲದೆ DHO ಸ್ಥಳಕ್ಕೆ ಬರಲೇಬೇಕು ಅಂತಾ ಪಟ್ಟು ಹಿಡಿದು, ರೆಂಬೆ ಕೆಳೆಗೆ ಕಾಲು ಇಳಿಬಿಟ್ಟು ಕುಳಿತುಬಿಟ್ಟಿದ್ದರು. 

ಇವರ ಪ್ರತಿಭಟನೆ ಬಗ್ಗೆ ತಿಳಿದ ಡಿಹೆಚ್‌ಒ ನಟರಾಜ್‌ ಟಿಹೆಚ್‌ಒ ಸುರೇಶ್‌ ನಾಯ್ಕ್‌ ಸ್ಥಳಕ್ಕೆ ಬಂದು ಪ್ರತಿಭಟನೆ ಕೈ ಬಿಟ್ಟು ಮರದಿಂದ ಇಳಿಯಿರಿ, ಡಾಕ್ಟರ್‌ ನ್ನ ಶೀಘ್ರವೇ ನಗರ ಆಸ್ಪತ್ರೆಗೆ ಒದಗಿಸಲಾಗುವುದು, ಸಿಬ್ಬಂದಿಯನ್ನ ಸಹಿತ ನೇಮಿಸ್ತಿವಿ ಎಂದು ಆಶ್ವಾಸನೆ ಕೊಟ್ಟರು. ಇಷ್ಟಾದ ಮೇಲಷ್ಟೆ ಕರುಣಾಕರ ಶೆಟ್ಟರು ಮರದಿಂದ ಇಳಿದರು. 

 

SUMMARY |  Shimoga , Gram panchayat member climbs tree  threaten to jump, protests against lack of doctors at Hosanagara taluk nagara hospital  

KEY WORDS | Shimoga , Gram panchayat member climbs tree  threaten to jump, protests against lack of doctors at Hosanagara taluk nagara hospital