ಹಾಸನ ವ್ಯಕ್ತಿಗೆ ಸಿಕ್ಕ ಧರ್ಮಸ್ಥಳದಲ್ಲಿ ಸಿಕ್ಕ ಶಿರಸಿ ಚಂದ್ರು | ಬಳಿಕ ಶಿವಮೊಗ್ಗದಲ್ಲಿ ನಡೆಯಿತು ಗೋಲ್ಡನ್‌ ಕ್ರೈಂ

Fraud in the name of gold coin, Shiralakoppa Police Station, Hassan, Sirsi, Shimoga, Dharmasthala, Gold Coin Fraud Case

ಹಾಸನ ವ್ಯಕ್ತಿಗೆ ಸಿಕ್ಕ ಧರ್ಮಸ್ಥಳದಲ್ಲಿ ಸಿಕ್ಕ ಶಿರಸಿ ಚಂದ್ರು | ಬಳಿಕ ಶಿವಮೊಗ್ಗದಲ್ಲಿ ನಡೆಯಿತು ಗೋಲ್ಡನ್‌ ಕ್ರೈಂ
Fraud in the name of gold coin, Shiralakoppa Police Station, Hassan, Sirsi, Shimoga, Dharmasthala, Gold Coin Fraud Case

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 22, 2025 ‌‌ 

ಚಿನ್ನದ ನಾಣ್ಯ ಕೊಡುವುದಾಗಿ ಹಾಸನ ಜಿಲ್ಲೆ ವ್ಯಕ್ತಿಯೊಬ್ಬರರಿಗೆ 8 ಲಕ್ಷ ರೂಪಾಯಿ ಮೋಸ ಮಾಡಿರುವ ಪ್ರಕರಣ ಶಿರಾಳಕೊಪ್ಪ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.  ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಿವಾಸಿ ಮೋಸ ಹೋದವರು ನೀಡಿದ ದೂರಿನನ್ವಯ ಕೇಸ್‌ ದಾಖಲಾಗಿದೆ

ಹಾಸನ ಟು ಶಿವಮೊಗ್ಗ

ಇಲ್ಲಿನ ನಿವಾಸಿ ಧರ್ಮಸ್ಥಳಕ್ಕೆ ಹೋಗಿದ್ದಾಗ, ಅಲ್ಲಿನ ಬಸ್‌ನಲ್ಲಿ ವ್ಯಕ್ತಿಯೊಬ್ಬ ಪರಿಚಯ ಆಗಿದ್ದ. ಆತ ತನ್ನನ್ನು ಶಿರಸಿ ಚಂದ್ರು ಎಂದು ಪರಿಚಯಿಸಿಕೊಂಡಿದ್ದ. ಹಾಸನ ನಿವಾಸಿಗೆ ತೋಟದ ಕೆಲಸ ಇದ್ದರೇ ತಿಳಿಸುವಂತೆ ಹೇಳಿದ್ದ ಶಿರಸಿ ಚಂದ್ರು, ಫೋನ್‌ ನಂಬರ್‌ ಸಹ ಪಡೆದಿದ್ದ. ಇದಾದ ಕೆಲದಿನಗಳ ಬಳಿಕ ಚಂದ್ರು, ಹಾಸನ ನಿವಾಸಿಗೆ ಕರೆ ಮಾಡಿ, ಚಿನ್ನದ ಪ್ಲಾನ್‌ ಆರಂಭಿಸಿದ್ದ. ತಮ್ಮ ಮನೆಯ ಪಕ್ಕದಲ್ಲಿರುವ ವೃದ್ಧೆಯೊಬ್ಬರಿಗೆ ಮನೆ ಕಟ್ಟುವಾಗ ಚಿನ್ನದ ನಾಣ್ಯಗಳು ಸಿಕ್ಕಿವೆ. ಯಾರಿಗಾದರೂ ಮಾರಿಸಿಕೊಡಿ ಎಂದು ಚಂದ್ರು ತಿಳಿಸಿದ್ದ. ಅದು ವರ್ಜಿನಲ್ಲಾ ಡೂಪ್ಲಿಕೇಟಾ ನೋಡುವ ಸಲುವಾಗಿ ಹಾಸನದ ನಿವಾಸಿ ಶಿರಾಳಕೊಪ್ಪಕ್ಕೆ ಬಂದಿದ್ದ. ಈ ವೇಳೆ ಒಂದು ನಾಣ್ಯ ಪಡೆದು ತೆರಳಿದ್ದ ಹಾಸನ ನಿವಾಸಿ ಬಳಿಕ ಅದು ಅಸಲಿ ಎಂದು ತಿಳಿದು ಒಂದು ಕೆಜಿ ಚಿನ್ನದ ನಾಣ್ಯ ಬೇಕು ಎಂದಿದ್ದಾನೆ. ಅದಕ್ಕೆ ಒಪ್ಪಿದ ಚಂದ್ರು 800 ಗ್ರಾಮ್‌ ಚಿನ್ನದ ನಾಣ್ಯ ನೀಡುವುದಾಗಿ ಹೇಳಿ ಒಟ್ಟು 8 ಲಕ್ಷಕ್ಕೆ ಡೀಲ್‌ ಕುದುರಿಸಿದ್ದ. ಶಿರಾಳಕೊಪ್ಪದ ಆಸ್ಪತ್ರೆಯೊಂದರ ಹಿಂಬಾಗ ಡೀಲ್‌ ಫಿನಿಶ್‌ ಆಗಿತ್ತು. ಆನಂತರ ಹಾಸನ ನಿವಾಸಿಗೆ ಚಂದ್ರು ಕೊಟ್ಟಿದ್ದು ನಕಲಿ ನಾಣ್ಯ ಎಂದು ಗೊತ್ತಾಗಿ ಇದೀಗ ಪೊಲೀಸರ ಮೊರೆಹೋಗಿದ್ದಾರೆ.

SUMMARY |  Fraud in the name of gold coin, Shiralakoppa Police Station, Hassan, Sirsi, Shimoga, Dharmasthala, Gold Coin Fraud Case

KEY WORDS | Fraud in the name of gold coin, Shiralakoppa Police Station, Hassan, Sirsi, Shimoga, Dharmasthala, Gold Coin Fraud Case