ಕೆಲಸ ಬೇಕಾದರೆ, ನೀವೆ 20 ಲಕ್ಷ ಕೊಡಿ ಎಂದ ಜ್ಯೊಮೆಟೋ | ವಿಚಿತ್ರ ಆಫರ್‌ನಲ್ಲಿ ಕುತೂಹಲದ ಕಥೆ
Zomato CEO Deepinder Goyal has offered rs 20 lakh to Zomato to work without any support for a year
SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 23, 2024
20 ಲಕ್ಷ ಹಣವನ್ನು ಜೊಮ್ಯಾಟೋ ಸಂಸ್ಥೆಗೆ ನೀಡಿ ಒಂದು ವರ್ಷ ಸಂಬಲವಿಲ್ಲದೆ ಕೆಲಸ ಮಾಡಿ ಎಂದು ಜೊಮ್ಯಾಟೋ ಸಂಸ್ಥೆಯ ಸಿಇಒ ದೀಪಿಂದರ್ ಗೋಯಲ್ ವಿಚಿತ್ರ ಆಪರ್ ಒಂದನ್ನು ಜನರ ಮುಂದಿಟ್ಟಿದ್ದಾರೆ. ಅಂದಹಾಗೆ ಇದರ ಹಿಂದೊಂದು ಕಥೆ ಇದೆ.
ಭಾರತದ ಪುಡ್ ಡೆಲಿವರಿ ಸಂಸ್ಥೆಗಳಲ್ಲಿ ಜೊಮ್ಯೋಟೋ ಕೂಡಾ ಒಂದು. ಈ ಸಂಸ್ಥಯಲ್ಲಿ ಚೀಫ್ ಆಫ್ ಸ್ಟಾಫ್ ಕೆಲಸ ಪಡೆಯ ಬೇಕಾದರೆ 20 ಲಕ್ಷ ನೀಡಿ ಒಂದು ವರ್ಷ ಸಂಬಳ ಇಲ್ಲದೆ ಕೆಲಸಮಾಡಬೇಕು ನಂತರ ಒಂದು ವರ್ಷಕ್ಕೆ 50 ಲಕ್ಷ ಸಂಬಳವನ್ನ ಪಡೆಯಬಹುದು ಎಂದು ಜೊಮ್ಯಾಟೋ ಸಿಇ ಒ ತಿಳಿಸಿದ್ದಾರೆ.
ವಿಷಯ ಕೇಳಿದಾಗ ಬಹುತೇಕ ರಲ್ಲಿ ಈ ಕೆಲಸ ಪಡೆಯಲು 20 ಲಕ್ಷ ಕೊಡಬೇಕಾ ಎಂಬ ಪ್ರಶ್ನೆ ಗಳು ಮೂಡಿ ಅದನ್ನು ನಿರ್ಲಕ್ಷಿಸಿದ್ದಾರೆ. ಆ ಬಳಿಕ ಈ ಕೆಲಸಕ್ಕೆ 24 ಗಂಟೆಯಲ್ಲಿ 18 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ
ಈ ಕೆಲಸಕ್ಕೆ 20 ಲಕ್ಷ ರೂ ಏಕೆ. ಏನಿದು ಕೆಲಸ
ಚೀಫ್ ಆಫ್ ಸ್ಟಾಫ್ ಅಂದರೆ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಹುದ್ದೆ. ಈ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಯಿಂದ ತೆಗದುಕೊಂಡ 20 ಲಕ್ಷ ಹಣವನ್ನು ಜೊಮ್ಯಾಟೋದ ಫೀಡಿಂಗ್ ಸಂಸ್ಥೆಗೆ ನೀಡಲಾಗುತ್ತೆ. ಇಲ್ಲಿ ಆ ಉದ್ಯೋಗಿಗೆ ಒಂದು ವರ್ಷ ಸಂಬಳ ನೀಡುವುದಿಲ್ಲ, ಮೊದಲ ವರ್ಷ ಫಾಸ್ಟ್ ಟ್ರ್ಯಾಕ್ ಲರ್ನಿಂಗ್ ಅನ್ನು ಕಲಿಸಲಾಗುತ್ತದೆ. ಹಾಗೆಯೇ ಇಲ್ಲಿ ಹೆಚ್ಚು ಟ್ಯಾಲೆಂಟ್ ಇರುವ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಅವಕಾಶವಿರುತ್ತದೆ. ಒಂದು ವರ್ಷ ಪೂರೈಸಿದ ನಂತರ ವರ್ಷಕ್ಕೆ 50 ಲಕ್ಷ ಸಂಬಳ ನೀಡಲಾಗುತ್ತೆ ಎಂದು ಕಂಪನಿ ಹೇಳಿಕೊಂಡಿದೆ.
SUMMARY| Zomato CEO Deepinder Goyal has offered rs 20 lakh to Zomato to work without any support for a year
KEYWORDS| Zomato CEO Deepinder Goyal, Zomato, food delivery,