ಶುಂಠಿಗೆ ಒಳ್ಳೆಯ ರೇಟು ಬರುತ್ತಾ!? ಹೌದಂತೆ!?
Will GINGER price increase in 2025,Will ginger price increase in 2024,Ginger price history graph,Ginger price prediction in India,

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 4, 2025
ಈ ನಡುವೆ ಹಸಿ ಶುಂಠಿ ದರವೂ ಮಾರುಕಟ್ಟೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಬರೆದಿರುವ ಪತ್ರ. ಕೇಂದ್ರ ಸರ್ಕಾರ ಈ ಪ್ರಸ್ತಾವನೆ ಒಪ್ಪಿದಲ್ಲಿ ಶುಂಠಿಯ ದರ ಹೆಚ್ಚಾಗುವ ಸಾಧ್ಯತೆ ಇದೆ ಅಂತಾ ರಾಜ್ಯ ಶುಂಠಿ ಬೆಳೆಗಾರರ ಸಂಘದ ಜಿಲ್ಲಾ ಮುಖಂಡ ಗಿರೀಶ್ ಕುಮಾರ್ ಸಲಹೆ ನೀಡಿದ್ದಾರೆ.
ಇವರು, ಸರ್ಕಾರವು ಪ್ರತಿ ಕ್ವಿಂಟಲ್ ಶುಂಠಿಯನ್ನು ₹2,574ಕ್ಕೆ ಖರೀದಿಸಲು ಒಪ್ಪಿಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.ಹೀಗಾಗಿ ಹಸಿ ಶುಂಠಿ ಧಾರಣೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ರೈತರು ₹ 4,290ಕ್ಕಿಂತ ಕಡಿಮೆ ಬೆಲೆಗೆ ಹಸಿ ಶುಂಠಿಯನ್ನು ಮಾರಾಟ ಮಾಡಬಾರದು ಎಂದು ಸಲಹೆ ನೀಡಿದರು. ಕೇಂದ್ರದಿಂದ ಪ್ರಸ್ತಾವನೆ ಜಾರಿಯಾದರೆ, ರಾಜ್ಯದಲ್ಲಿ ಸಾಕಷ್ಟು ಅನುಕೂಲಕವಾಗಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 1.42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗಿದ್ದು, ಹಲವರು ಶುಂಠಿ ಬೆಲೆಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.