ಗೇಮ್‌ ಚೇಂಜ್‌ ಮಾಡಲು ಗೇಮ್‌ ಚೇಂಜರ್‌ ಒಟಿಟಿಗೆ ಲಗ್ಗೆ | ರಿಲೀಸ್‌ ಯಾವಾಗ

Global Star Ram Charan starrer Game Changer, directed by Shankar, is all set to release on Amazon Prime Video on February 14.

ಗೇಮ್‌ ಚೇಂಜ್‌ ಮಾಡಲು ಗೇಮ್‌ ಚೇಂಜರ್‌ ಒಟಿಟಿಗೆ ಲಗ್ಗೆ  | ರಿಲೀಸ್‌ ಯಾವಾಗ
Game changer enters OTT to change the game

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 24, 2025

ಗ್ಲೋಬಲ್‌ ಸ್ಟಾರ್‌ ರಾಮ್‌ ಚರಣ್‌ ಅಭಿನಯದ ಹಾಗೂ ಶಂಕರ್‌ ನಿರ್ದೇಶನದ ಗೇಂಮ್ ಚೇಂಜರ್‌‌ ಚಿತ್ರ ಇದೇ ಫೆಬ್ರವರಿ 14 ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿದೆ.

ರಾಮ್‌ ಚರಣ್‌ರ ಬಹುನಿರೀಕ್ಷಿತ ಚೇಂಜರ್‌ ಸಿನಿಮಾ ಜನವರಿ 10 ರಂದು ವಿಶ್ವದಾದ್ಯಂತ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಿತ್ತು. ಶಂಕರ್‌ ನಿರ್ದೇಶಿಸಿದ್ದ ಈ ಚಿತ್ರಕ್ಕೆ ಪ್ರೇಕ್ಷಕರು ಬಹು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಹಾಗಯೇ ರಾಮ್‌ ಚರಣ್‌ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತರದಿಂದ ಆದು ಕುಳಿತಿದ್ದರು. ಆದರೆ ಚಿತ್ರ ಬಿಡುಗಡೆಯಾದ ನಂತರ ಗೇಮ್‌ ಚೇಂಜರ್‌ ಚಿತ್ರ ಎಲ್ಲಡೆ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಅಷ್ಟೇ ಅಲ್ಲದೆ ಚಿತ್ರ ಕಲೆಕ್ಷನ್‌ ವಿಚಾರದಲ್ಲಿ ಬಹಳಾ ಹಿಂದುಳಿದಿತ್ತು. ಬರೊಬ್ಬರಿ 450 ಕೋಟಿ ರೂಪಾಯಿಯಲ್ಲಿ ನಿರ್ಮಿಸಲಾದ ಈ ಚಿತ್ರ ಇದುವರೆಗೆ 200 ಕೋಟಿ ರೂಪಾಯಿಗಳನ್ನು ಮಾತ್ರ ಕಲೆಕ್ಷನ್‌ ಮಾಡಿದೆ ಎಂದು ವರದಿಗಳು ತಿಳಿಸಿದೆ. ಸತತ ಸೋಲುಗಳಿಂದ ಕೆಂಗೆಟ್ಟಿದ್ದ ರಾಮ್‌ ಚರಣ್‌ ಹಾಗೂ ನಿರ್ದೇಶಕ ಶಂಕರ್‌ ಈ ಚಿತ್ರದ ಮೂಲಕ ಸಕ್ಸ್‌ಸ್‌ ಪಡೆಯಬಹುದು ಎಂದು ಕೊಂಡಿದ್ದರು ಆದರೆ ಅದು ಸಾಧ್ಯವಾಗಲಿಲ್ಲ

ಇದೀಗ ಗೇಮ್‌ ಚೇಂಜರ್‌ ಚಿತ್ರವನ್ನು ಅಮೇಜಾನ್‌ ಪ್ರೈಮ್‌ 105 ಕೋಟಿ ರೂಪಾಯಿಗಳನ್ನು ಕೊಟ್ಟು ಕೊಂಡುಗೊಂಡಿದ್ದು, ಪ್ರೇಮಿಗಳ ದಿನದಂದು ವೀಕ್ಷಕರು ಒಟಿಟಿಯಲ್ಲಿ ಚಿತ್ರವನ್ನು ವೀಕ್ಷಿಸಬಹುದು.

SUMMARY | Global Star Ram Charan starrer Game Changer, directed by Shankar, is all set to release on Amazon Prime Video on February 14.

KEYWORDS |  Ram Charan, Shankar, Amazon Prime,   February 14, game changer,