ಯಂಗೇಜ್ ಸುಂದರಿಯ ಬಲೆಯಲ್ಲಿ ಹನಿಟ್ರ್ಯಾಪ್‌ನ ಖೆಡ್ಡಾ | ಬೆಂಗಳೂರು ಸ್ಟೋರಿ
Full details of the honeytrap case , Byadarahalli Police Station, Bengaluru

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 19, 2025
ಹೆಣ್ಣು ಮಾಯೆ ಎನ್ನುವುದು ಕಲಿಗಾಲದ ಪೀಕ್‌ನಲ್ಲಿ ಕೆಲವರಿಗೆ ಬೇರೆಯದ್ದೆ ರೀತಿಯಲ್ಲಿ ಅನುಭವಕ್ಕೆ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಯಂಗೇಜ್ ಸುದ್ದಿಯೊಬ್ಬಳ ಸಹವಾಸಕ್ಕೆ ಹೋಗಿ 40+ ಗುತ್ತಿಗೆದಾರನೊಬ್ಬ ಸಂಕಷ್ಟಕ್ಕೆ ಸಿಲುಕಿದ ಘಟನೆಯೊಂದು ಬೆಂಗಳೂರಿನಲ್ಲಿ ವರದಿಯಾಗಿದೆ. ದೈರ್ಯ ಮಾಡಿದರ ಫಲವಾಗಿ ಪೊಲೀಸರ ನೆರವಿನಿಂದ ಗುತ್ತಿಗೆದಾರ ಬಚಾಚ್ ಆಗಿದ್ದಾನಷ್ಟೆ ಅಲ್ಲದೆ, ನಯನಸುಂದರಿ ಅರೆಸ್ಟ್ ಆಗಿದ್ದಾಳೆ.
ಕೇಸ್ ತುಂಬಾನೆ ಸಿಂಪಲ್ ಆಗಿದೆ. ಇದೊಂದು ಹನಿಟ್ರ್ಯಾಪ್ , ಆದರೆ ಬಹಳ ಟ್ವಿಸ್ಟ್‌ಗಳಿವೆ. ಇಲ್ಲಿನ ಕಂಟ್ರಾಕ್ಟರ್ ಒಬ್ಬರಿಗೆ ಸುಂದರಿ ಪರಿಚಯವಾಗಿದ್ದಳು. ಅವಳ ಸೌಂದರ್ಯ ಆತನನ್ನು ಸೆಳೆದಿದೆ, ಸೆಳೆದ ಪರಿಚಯಕೆ ಈಕೆಯ ಸನ್ನೆ ಸೈ ಎಂದಿದೆ. ಇಬ್ಬರ ನಡುವೆ ಸಲುಗೆ ಬೆಳೆದಿದೆ. ಸಲುಗೆ ಮನೆಯವರೆಗೂ ಬರುವಂತೆ ಮಾಡಿದೆ. ಇಲ್ಲಿಗೆ ಮಧ್ಯಂತರ, ಏಕೆಂದರೆ ಸೆಕೆಂಡ್ ಹಾಫ್‌ನಲ್ಲಿ ನಡೆದಿದ್ದು ಬೇರೆ. ಆಕೆಯ ಮನೆಗೆ ಟೀ ನೆಪದಲ್ಲಿ ಬಂದಿದ್ದ ಕಂಟ್ರಾಕ್ಟರ್ ಇನ್ನೇನು ಮಾತು ಆರಂಭಿಸಬೇಕು ಎನ್ನುವಷ್ಟರಲ್ಲಿ ಅವರಿದ್ದ ಮನೆ ರೇಡ್ ಆಗಿದೆ. ಪೊಲೀಸರು ಎಂದುಹೇಳಿಕೊಂಡು ಬಂದವರು, ಅಲ್ಲಿ ಈ ಹಿಂದೆ ನಡೆದಂತಹ ಪ್ರಕರಣಗಳಂತೆ ಗುತ್ತಿಗೆದಾರನನ್ನ ಟ್ರ್ಯಾಪ್ ಮಾಡಿದ್ದಾರೆ. ಡೀಲ್ ಇಟ್ಟಿದ್ದಾರೆ. ಸುಮಾರು ಐದು ಲಕ್ಷದ ಚಿನ್ನ , 29 ಸಾವಿರ ಕ್ಯಾಶ್ ಕಿತ್ತುಕೊಂಡಿದ್ದಾರೆ.
ಈ ಘಟನೆಯಿಂದ ನೊಂದ ಕಂಟ್ರಾಕ್ಟರ್‌ಗೆ ಯಂಗೇಜ್ ಸುಂದರಿ ಬಗ್ಗೆ ಅನುಮಾನ ಬಂದಿರಲಿಲ್ಲ. ಹಾಗಾಗಿ, ನಾವಿಬ್ಬರು ಸೇರಿ ದೂರುಕೊಡೋಣ ಅಂತಾ ಕರೆದಿದ್ದ ಗುತ್ತಿಗೆದಾರ. ಆದರೆ ಸುಂದರಿ ಇದಕ್ಕೆ ಒಪ್ಪಲಿಲ್ಲ. ಬದಲಾಗಿ, ಈ ವಿಚಾರದಲ್ಲಿ ನನ್ನ ಎಳೆದರೆ, ನಿನ್ನ ಮನೆಗೆ ತನ್ನ ಮಗು ಸಮೇತ ಬಂದು ಕೂರುವುದಾಗಿ ಹೇಳಿಬಿಟ್ಟಿದ್ದಳು. ಹಣೆಬರಹದ ಜೊತೆಗೆ ಗೃಹಚಾರವೂ ಮಗ್ಗಲು ಬದಲಿಸಿತೆ ಎಂದುಕೊಂಡ ಕಂಟ್ರಾಕ್ಟರ್, ಕೊನೆಗೆ ಗೆಳಯರ ಸಾಥ್ ತೆಗೆದುಕೊಂಡು ಖುದ್ದು ಬ್ಯಾಡರ್‌ಹಳ್ಳಿ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪರಿಣಾಮ ಪ್ರಕರಣ ಕ್ಲೈಮ್ಯಾಕ್ಸ್ ತಲುಪಿದೆ , ಆಕೆಯನ್ನು ಒಳಗೊಂಡಂತೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರಕರಣದ ಪೂರ್ಣ ಫೋಕಸ್ ಸಿಕ್ಕಿದ್ದು, ಅವಳೆ ಎಲ್ಲದಕ್ಕೂ ಕಾರಣಳು ಎಂಬುದು ಗೊತ್ತಾಗಿದೆ.
SUMMARY | Full details of the honeytrap case registered at Byadarahalli Police Station, Bengaluru
KEY WORDS | Full details of the honeytrap case , Byadarahalli Police Station, Bengaluru