ಗುಡ್ ನ್ಯೂಸ್ | ಚಾಲಕರಿಗೆ ಉಚಿತ ಲೇಬರ್ ಕಾರ್ಡ್ ವಿತರಣೆ
Shimoga The Karnataka Construction Workers and Unorganised Workers' Welfare Forum is distributing free labour cards to Shivamogga district drivers on 5th and 6th December.
SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 3, 2024
ಶಿವಮೊಗ್ಗ| ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಚಾಲಕರಿಗೆ, ಇದೇ ಡಿಸೆಂಬರ್ 5 ಮತ್ತು 6 ರಂದು ಉಚಿತವಾಗಿ ಚಾಲಕರ ಲೇಬರ್ ಕಾರ್ಡ್‌ನ್ನು ನೀಡಲಾಗುತ್ತಿದೆ. ಈ ಕುರಿತು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಹೆಚ್ ಸತೀಶ್ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಸುದಿಗೋಷ್ಠಿ ನಡೆಸಿ ಮಾತನಾಡಿದ ಅವರು ಶಿವಮೊಗ್ಗದಲ್ಲಿ ಅನೇಕ ಚಾಲಕರು ಲೇಬರ್ ಕಾರ್ಡ್ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದಕ್ಕೆ ಕಾರಣ, ಅವರಿಗೆ ಲೇಬರ್ ಕಾರ್ಡ್ ನಿಂದ ಏನೇನು ಸೌಲಭ್ಯ ಸಿಗುತ್ತದೆ ಎಂಬ ಮಾಹಿತಿ ಇಲ್ಲ. ಈ ಹಿಂದೆ ಸಹ ನಾವು ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ತೆರಳಿ ಕಾರ್ಮಿಕ ಕಾರ್ಡ್ ನಿಂದ ಸಿಗುವ ಸೌಲಭ್ಯವನ್ನು ತಿಳಿಸಿ, ಚಾಲಕರಲ್ಲಿ ಅರಿವು ಮೂಡಿಸಿದ್ದೇವೆ. ಇದೀಗ ಡಿಸೆಂಬರ್ 5 ಮತ್ತು 6 ರಂದು ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ವತಿಯಿಂದ ಶಿವಮೊಗ್ಗ ಜಿಲ್ಲಾ ಚಾಲಕರಿಗೆ ಉಚಿತವಾಗಿ ಚಾಲಕರ ಲೇಬರ್ ಕಾರ್ಡ್ ನೀಡುವ ಕಾರ್ಯಕ್ರಮವನ್ನು ಶಿವಮೊಗ್ಗದ ದುರ್ಗಿಗುಡಿ 2 ನೇ ಕ್ರಾಸ್ ನಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.
ನಂತರ ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಜಯಪ್ಪ ಮಾತನಾಡಿ. ಎಷ್ಟೋ ಜನ ಚಾಲಕರಿಗೆ ಅಪಘಾತವಾದರೆ 5 ಲಕ್ಷ ಹಣ ಸಿಗುತ್ತೆ ಎಂಬ ಮಾಹಿತಿ ಸಹ ತಿಳಿದಿರುವುದಿಲ್ಲ. ಅದರ ಬಗ್ಗೆ ಸವಿಸ್ತಾರವಾಗಿ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಇದರಲ್ಲಿ ಕ್ಯಾಬ್ ಚಾಲಕರು, ಆಟೋ ಚಾಲಕರು, ಬಸ್ ಚಾಲಕರು, ಲಾರಿ ಚಾಲಕರು, ಸಹ ಇದ್ದಾರೆ. ಇತ್ತೀಚೆಗೆ ಚಾಲಕರೆಂದು ಸುಳ್ಳು ಹೇಳಿ ಲೇಬರ್ ಕಾರ್ಡ್ ಮಾಡಿಸುವವರು ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಚಾಲಕರ ಡಿಎಲ್ ಹಾಗೂ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿ ಲೇಬರ್ ಕಾರ್ಡ್ ನೀಡುತ್ತಿದ್ದೇವೆ ಎಂದರು.
SUMMARY| Shimoga The Karnataka Construction Workers and Unorganised Workers' Welfare Forum is distributing free drivers' labour cards to Shivamogga district drivers on 5th and 6th December.
KEYWORDS| Karnataka Construction Workers and Unorganised Workers, labour cards, Shivamogga, drivers,