ನಮ್ಮೂರಲ್ಲೆ ಈ ಥರ ಕೇಸ್‌ ಹೆಚ್ಚಾಗುತ್ತಿವೆ | ನನಗೆ ಅವೆಲ್ಲಾ ಗೊತ್ತಿಲ್ಲ ಅಂದರೆ ಅಕೌಂಟ್‌ ಖಾಲಿ ಮಾಡ್ತಾರೆ

 Fraud atm card exchange, withdraws money ,Ayanur, Savalanga, and Hornalli

ನಮ್ಮೂರಲ್ಲೆ ಈ ಥರ ಕೇಸ್‌ ಹೆಚ್ಚಾಗುತ್ತಿವೆ | ನನಗೆ ಅವೆಲ್ಲಾ ಗೊತ್ತಿಲ್ಲ ಅಂದರೆ ಅಕೌಂಟ್‌ ಖಾಲಿ ಮಾಡ್ತಾರೆ
 Fraud atm card exchange, withdraws money ,Ayanur, Savalanga, and Hornalli

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 24, 2025 ‌‌ 

ATM ನಲ್ಲಿ ದುಡ್ಡು ತೆಗೆಯುವುದಕ್ಕೆ ಬೇರೆಯವರ ಸಹಾಯ ಪಡೆಯುತ್ತಿದ್ದೀರಾ!  ಆ ವಿಚಾರದಲ್ಲಿ ಚೂರು ಹುಷಾರಾಗಿರಿ. ಏಕೆಂದರೆ ನೀವು ಎಟಿಎಂನಿಂದ ಹಣ ಬಿಡಿಸಲು ಇನ್ನೊಬ್ಬರಿಗೆ ಕೈಗೆ ನೀಡುವ ಎಟಿಎಂ ಕಾರ್ಡ್‌ನಿಂದಲೂ ನಿಮ್ಮ ಹಣ ನಿಮಗೆ ಗೊತ್ತಿಲ್ಲದಂತೆ ಕಂಡವರ ಪಾಲಾಗುವ ಸಾಧ್ಯತೆ ಇದೆ. ಇದಕ್ಕೆ ಶಿವಮೊಗ್ಗದಲ್ಲಿ ಮತ್ತೊಂದು ಉದಾಹರಣೆ ಸಿಕ್ಕಿದೆ. 

ಶಿವಮೊಗ್ಗದ ಆಯನೂರು ಪೇಟೆಯಲ್ಲಿ ದೇವಪ್ಪ ಎಂಬವರು ಎಟಿಎಂಗೆ ಹಣ ಬಿಡಿಸಲು ಬಂದಿದ್ದಾರೆ. ಮಷಿನ್‌ ಪಷಿನ್‌ ನಮಗೆ ಅರ್ಥವಾಗಲ್ಲ, ಅಂತಾ ಅಲ್ಲಿ ಯಾರಾದರೂ ಹಣ ಬಿಡಿಸಲು ಸಹಾಯ ಮಾಡಲು ಸಿಗ್ತಾರೆ ಎಂದು ಅತ್ತಿತ್ತ ನೋಡುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ದೇವಪ್ಪರಿಗೆ ಅವರ ಅಕೌಂಟ್‌ನಿಂದ ಎಟಿಎಂ ಮೂಲಕ 10 ಸಾವಿರ ಬಿಡಿಸಿಕೊಟ್ಟಿದ್ದಾರೆ. ಆದರೆ ದೇವಪ್ಪರ ATM ಕಾರ್ಡ್‌ ಬದಲಿಗೆ ಬೇರೊಂದು ಕಾರ್ಡ್‌ ದೇವಪ್ಪರಿಗೆ ನೀಡಿದ್ದಾರೆ. 

ತಕ್ಷಣಕ್ಕೆ ಅಂದಾಜಾಗದೆ ದೇವಪ್ಪರು ಸಹ ಅಲ್ಲಿಂದ ತೆರಳಿದ್ದಾರೆ. ಇತ್ತ ಸಹಾಯ ಮಾಡಿದ ವ್ಯಕ್ತಿ, ದೇವಪ್ಪರ ಎಟಿಎಂ ಮೂಲಕ ಹಾರ್ನಳ್ಳಿ ಹಾಗೂ ಸವಳಂಗದ ಎಟಿಎಂ ಸೆಂಟರ್‌ಗಳಲ್ಲಿ ಒಟ್ಟು ನಲವತ್ತು ಸಾವಿರ ರೂಪಾಯಿ ಬಿಡಿಸಿದ್ದಾರೆ. ತಮಗೆ ಕೊಟ್ಟ ಎಟಿಎಂ ಕಾರ್ಡ್‌ ತಮ್ಮದಲ್ಲ ಎಂದು ಕೆಲವೇ ನಿಮಿಷಗಳಲ್ಲಿ ದೇವಪ್ಪರಿಗೆ ಗೊತ್ತಾಗಿದೆ. ಅಷ್ಟರಲ್ಲಿಯೇ ಆರೋಪಿಗಳು ಹಣ ಎಗರಿಸಿದ್ದಾರೆ.

SUMMARY |  Accused exchanges ATM cards and withdraws money in Ayanur, Savalanga, and Hornalli

KEY WORDS |  Fraud atm card exchange, withdraws money ,Ayanur, Savalanga, and Hornalli