ಗಂಧದ ಚಕ್ಕೆ ಸಾಗಿಸ್ತಿದ್ದವನಿಗೆ ಅರಣ್ಯ ಇಲಾಖೆ ಶಾಕ್ | ಸಂಚಾರಿ ದಳದ ಆಪರೇಷನ್‌ನಲ್ಲಿ ಏನ್ ಸಿಕ್ತು ಗೊತ್ತಾ
In Hosanagara taluk of Shivamogga district, the Forest Mobile Squad arrested a man
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕುನಲ್ಲಿ ಅರಣ್ಯ ಸಂಚಾರಿ ದಳ ಶ್ರೀಗಂಧ ಮರವನ್ನು ಕಡಿದು ಸಾಗಿಸ್ತಿದ್ದವನನ್ನು ಬಂಧಿಸಿದೆ. ಹೊಸನಗರ ತಾಲೂಕು ಕಸಬಾ ಹೋಬಳಿ ಕಚ್ಚಿಗೆಬೈಲ್ ಗ್ರಾಮದಿಂದ ಕಾನಗೋಡು ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಂಧವನ್ನು ಕಡಿದು ತುಂಡು ಮಾಡಿ ಸಾಗಾಣಿಕೆ ಮಾಡುತ್ತಿದ್ದ ಮಾಹಿತಿ ಅರಣ್ಯ ಸಂಚಾರಿ ದಳಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅಧಿಕಾರಿಗಳು ರೇಡ್ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
ಹನೀಫ್ ಬಿನ್ ಯಾಕೂಬ್ ವಯಸ್ಸು 48ವರ್ಷ ಬಂಧಿತ ಆರೋಪಿ. ಇವನಿಂದ 3KG 400ಗ್ರಾಂ ಹಸಿ ಗಂಧದ ಪೀಸ್ ಹಾಗೂ 3ಗರಗಸವನ್ನು ವಶಕ್ಕೆ ಪಡೆಯಲಾಗಿದೆ.
SUMMARY | In Hosanagara taluk of Shivamogga district, the Forest Mobile Squad arrested a man
KEY WORDS | In Hosanagara taluk , Shivamogga district, Forest Mobile Squad , sandalwood theft case