800 ಮಿಲಿ ಚಿನ್ನ ಕೊಟ್ಟು 9 ಲಕ್ಷ ದರೋಡೆ ಕೇಸ್‌ | ಶಿವಮೊಗ್ಗದ ಐವರು ಬನವಾಸಿಯಲ್ಲಿ ಅರೆಸ್ಟ್‌ | ರೋಚಕ ಕೇಸ್

Rs 9 lakh robbery case against 800 ml gold | Five arrested from Banavasi in Shivamogga | An interesting case‌ , ಬನವಾಸಿ ಪೊಲೀಸ್‌ ಸ್ಟೇಷನ್‌, ಉತ್ತರ ಕನ್ನಡ ಎಸ್‌ಪಿ, ಸೊರಬ, ಶಿಕಾರಿಪುರ, ಶಿರಸಿ ಹಾನಗಲ್‌ ರೋಡ್‌

800 ಮಿಲಿ ಚಿನ್ನ ಕೊಟ್ಟು 9 ಲಕ್ಷ ದರೋಡೆ ಕೇಸ್‌ | ಶಿವಮೊಗ್ಗದ ಐವರು ಬನವಾಸಿಯಲ್ಲಿ ಅರೆಸ್ಟ್‌ | ರೋಚಕ ಕೇಸ್
Five arrested from Banavasi in Shivamogga , ಬನವಾಸಿ ಪೊಲೀಸ್‌ ಸ್ಟೇಷನ್‌, ಉತ್ತರ ಕನ್ನಡ ಎಸ್‌ಪಿ, ಸೊರಬ,

SHIVAMOGGA | MALENADUTODAY NEWS | Aug 9, 2024

ಕೇರಳದ ಮೂಲದ ಇಬ್ಬರಿಗೆ ಬಂಗಾರ ನೀಡುವುದಾಗಿ ನಂಬಿಸಿ ದರೋಡೆ ಎಸಗಿದ ಆರೋಪದ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಐವರನ್ನ ಉತ್ತರ ಕನ್ನಡ ಜಿಲ್ಲೆ ಶಿರಸಿ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಈ ಪ್ರಕರಣದ ವಿವರ ಹೀಗಿದೆ

ಬನವಾಸಿ ಪೊಲೀಸ್‌ ಸ್ಟೇಷನ್‌ 

ಕೇರಳದ ವ್ಯಕ್ತಿಯೊಬ್ಬರಿಗೆ ಬಂಗಾರ ನೀಡುವುದಾಗಿ ಶಿವಮೊಗ್ಗ ಜಿಲ್ಲೆಯ ದರೋಡೆ ಕೋರರ ತಂಡವೊಂದು ಆಮೀಷ ಒಡ್ಡಿತ್ತು. ವಿಶೇಷ ಅಂದರೆ ವಿಕಲಚೇತನ ವ್ಯಕ್ತಿಯ ಮೂಲಕ ಕೇರಳದ ವ್ಯಕ್ತಿ ಇಂತಹದ್ದೊಂದು ಟ್ರ್ಯಾಪ್‌ ಮಾಡಿತ್ತು. ವಿಕಲಚೇತನ ವ್ಯಕ್ತಿಯೊಬ್ಬ ಕೇರಳದ ಮಲ್ಲಪುರಂನ ಸಚಿನ್‌ ಎಂಬವರಿಗೆ ಚಿನ್ನ ಸಿಕ್ಕಿದೆ ಅದನ್ನ ನಿಮಗೆ ನೀಡುವುದಾಗಿ ಹೇಳಿದ್ದ. ಆ ಬಳಿಕ 800 ಮಿಲಿ ಚಿನ್ನವನ್ನ ಸ್ಯಾಂಪಲ್‌ ನೀಡಿದ್ದ. ಅದು ಅಸಲಿ ಎಂದು ಸಚಿನ್‌ ತಮ್ಮವರ ಬಳಿ ದೃಢಪಡಿಸಿಕೊಂಡು, ಚಿನ್ನ ಖರೀದಿಗೆ ಮುಂದಾಗಿದ್ದರು. ಒಟ್ಟು ಸುಮಾರು 9 ಲಕ್ಷ ರೂಪಾಯಿಗೆ ಡೀಲ್‌ ಆಗಿತ್ತು. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ



ಶಿರಸಿಯಲ್ಲಿ ಡೀಲ್‌, ದರೋಡೆ

ಆದ ಮಾತುಕತೆಯಂತೆ ಕಳೆದ ಆಗಸ್ಟ್‌ 4 ರಂದು ಶಿರಸಿ-ಹಾನಗಲ್‌ ರಸ್ತೆಯ ಮಳಗಾಂವ ಬಸ್‌ ನಿಲ್ದಾಣ ಹತ್ತಿರ ಚಿನ್ನ ಖರೀದಿಗೆ ಬರುವಂತೆ ಆರೋಪಿಗಳು ಸೂಚಿಸಿದ್ದರು. ಅದರಂತೆ ಸಚಿನ್‌ ತನ್ನ ಸ್ನೇಹಿತರೊಬ್ಬರ ಜೊತೆಗೆ ಮಳಗಾಂವ್‌ಗೆ ಬಂದಿದ್ದರು. ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಆರೋಪಿಗಳು ಬರುವಂತೆ ಸೂಚಿಸಿದ್ದಾರೆ. ಅಲ್ಲಿಗೆ ಹೋದ ಬೆನ್ನಲ್ಲೆ ದರೋಡೆಕೋರರ ತಂಡ, ಸಂತ್ರಸ್ಥರ ಮೇಲೆ ಹಲ್ಲೆ ಮಾಡಿ ಅವರ ಬಳಿ ಇದ್ದ  9. 11 ಲಕ್ಷ ವನ್ನು ಎಗರಿಸಿ ಪರಾರಿಯಾಗಿದ್ದರು.



ಶಿವಮೊಗ್ಗದ ಆರೋಪಿಗಳು ಅರೆಸ್ಟ್‌ 

ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಇದೀಗ ಆರೋಪಿಗಳನ್ನ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಆನವಟ್ಟಿಯ ನಾಗಪ್ಪ ದೊಡ್ಡರಾಮಣ ಕೊರಚರ, ಅವಿನಾಶ ಕೊಟ್ರೇಶ ಕೊರಚರ, ನಿಸ್ಸಾರ್ ಅಹ್ಮದ್ ಮಹಮ್ಮದ್ ಜಾಫರ್ ಬಳಗಾರ, ಸಂಜೀವ ಕೆ.ಆರ್. ರಾಮಣ್ಣ ಕೊರಚರ ಹಾಗೂ ಶಿಕಾರಿಪುರ ಮಲೇನಹಳ್ಳಿ ತಾಂಡಾದ ಕೃಷ್ಣಪ್ಪ ನಾಯ್ಕ ಅವರನ್ನು ಬಂಧಿಸಿದ್ದಾರೆ. 

ಬಂಧಿತರಿಂದ  ₹7,63,000 ಹಣ ಹಾಗೂ 3 ಮೋಟಾರ್ ಸೈಕಲ್ ವಾಹನವನ್ನು ಜಪ್ತು ಮಾಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ತಿಳಿಸಿದ್ದಾರೆ