ತುಂಗಾ ಚಾನಲ್‌ಗೆ ಬಿದ್ದು 3 ದಿನದಿಂದ ಸಹಾಯಕ್ಕೆ ಕಾದಿದ್ದ ಕುದುರೆ | ಸರ್ಕಸ್‌ಗಿಂತಲೂ ಹೆಚ್ಚು ಸಾಹಸ ಮಾಡಿ ಜೀವ ಉಳಿಸಿದ ಅಗ್ನಿಶಾಮಕ ದಳ

Firefighters rescue horse that fell into Tunga Channel near Alkola, horse rescue 

ತುಂಗಾ ಚಾನಲ್‌ಗೆ ಬಿದ್ದು 3 ದಿನದಿಂದ ಸಹಾಯಕ್ಕೆ ಕಾದಿದ್ದ ಕುದುರೆ | ಸರ್ಕಸ್‌ಗಿಂತಲೂ ಹೆಚ್ಚು ಸಾಹಸ ಮಾಡಿ ಜೀವ ಉಳಿಸಿದ ಅಗ್ನಿಶಾಮಕ ದಳ
Firefighters rescue horse that fell into Tunga Channel near Alkola, horse rescue 

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 10, 2025 ‌‌   ‌

ಶಿವಮೊಗ್ಗದಲ್ಲಿ ನಿನ್ನೆದಿನ ಚಾನಲ್‌ವೊಂದಕ್ಕೆ ಬಿದ್ದಿದ್ದ ಕುದುರೆಯೊಂದನ್ನ horse rescue  ರಕ್ಷಿಸಲಾಗಿದೆ. ಜನರಿಂದ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಆಲ್ಕೋಳದ ಸಮೀಪ ಸಿಗುವ ದೊಡ್ಡ ಚಾನಲ್‌ಗೆ ನಿನ್ನೆ ಕುದುರೆಯೊಂದು ಬಿದ್ದಿತ್ತು. ಗೋಲ್ಡನ್‌ ಸಿಟಿ ಲೇಔಟ್‌ ಬಳಿ ಈ ಘಟನೆ ನಡೆದಿತ್ತು.ಮೂಲಗಳ ಪ್ರಕಾರ, ಕುದುರೆ ಮೂರು ದಿನಗಳ ಹಿಂದೆಯೇ ಚಾನಲ್‌ಗೆ ಬಿದ್ದಿತ್ತು ಎನ್ನಲಾಗುತ್ತಿತ್ತು. ಅದರ ಕೂಗು ಕೇಳಿಸಿಕೊಂಡಿದ್ದ ಅಲ್ಲಿದ್ದವರು, ಈ ಬಗ್ಗೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕುದುರೆ ರಕ್ಷಣೆಗೆ ಮುಂದಾಗಿದ್ದಾರೆ. ಮೊದಲೇ ಚಾನಲ್‌ ಆಲ್ಕೋಳ ಭಾಗದಲ್ಲಿ ತುಂಬಾನೆ ಆಳವಿದೆ. ಇದದರ ನಡುವೆ ರೋಪ್‌ ಬಳಸಿ ಕೆಳಕ್ಕೆ ಇಳಿದ ಸಿಬ್ಬಂದಿ  ಆಬಳಿಕ ರೋಪ್‌ ಮೂಲಕ ಕುದುರೆಯನ್ನ ಮೇಲಕ್ಕೆ ಎತ್ತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಇಲಾಖೆ ಠಾಣಾಧಿಕಾರಿ ನರೇಂದ್ರ, ಶರತ್‌, ರಾಜೀವ್‌ ಸುಣಗಾರ, ಸಂತೋಷ್‌, ಯಶ್ವಂತ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

SUMMARY | Firefighters rescue horse that fell into Tunga Channel near Alkola

KEY WORDS |‌Firefighters rescue horse that fell into Tunga Channel near Alkola, horse rescue