EV ಶೋರೂಮ್‌ನಲ್ಲಿ ಬೆಂಕಿ , ಯುವತಿಯ ದುರಂತ
Bengaluru A fire broke out at an electric showroom in Bengaluru on Sunday, killing a sales girl
SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 20, 2024
ಬೆಂಗಳೂರು | ಎಲೆಕ್ಟ್ರಿಕ್ ಶೋರೂಂ ಒಂದರಲ್ಲಿ ಕಾಣಿಸಿಕೊಂಡ ಅಗ್ನಿಆಕಸ್ಮಿಕ ಘಟನೆಯಲ್ಲಿ ಸೇಲ್ಸ್ ಗರ್ಲ್ ಒಬ್ಬರು ಸಜೀವವಾಗಿ ದಹನವಾಗಿದ್ದಾರೆ. ಪ್ರಿಯಾ (25) ಬೆಂಕಿಗೆ ಆಹುತಿಯಾದ ದುರ್ದೈವಿ
ಬೆಂಗಳೂರಿನ ರಾಜ್‌ಕುಮಾರ್ ರಸ್ತೆಯಲ್ಲಿರುವ ಮೈ ಇವಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ಈ ಅಗ್ನಿ ದುರಂತ ಸಂಭವಿಸಿದೆ.
ಘಟನೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಅಗ್ನಿಗೆ ಆಹುತಿಯಾಗಿದ್ದು, ಇಡೀ ಶೋರೂಂ ಧಗಧಗಿಸಿ ಉರಿದಿದೆ. ಈ ವೇಳೆ ಶೋರೂಂನಲ್ಲಿದ್ದ ಯುವತಿ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೇ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಶೋರೂಂನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ವಾಹನಗಳನ್ನು ಅಲ್ಲಿ ಇರಿಸಲಾಗಿತ್ತು ಹಾಗೂ ಯಾವುದೇ ಫೈರ್ ಸೇಫ್ಟಿಯನ್ನ ಕೈಗೊಂಡಿರಲಿಲ್ಲ. ಇರದ ಪರಿಣಾಮವೇ ಯುವತಿ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.
SUMMARY | Bengaluru , A fire broke out at an electric showroom, in Bengaluru,
KEY WORDS | Bengaluru, fireaccident, electric showroom,