ಶಿವಮೊಗ್ಗ ಮೆಗ್ಗಾನ್‌ನ ಟಾಯ್ಲೆಟ್‌ನಲ್ಲಿ ಭ್ರೂಣ ಪತ್ತೆ | ನಡೆದಿದ್ದೇನು? | JP ಬರೆಯುತ್ತಾರೆ

Fetus found in Megan toilet trash, Shimoga McGann Hospital, Shimoga District Hospital

ಶಿವಮೊಗ್ಗ ಮೆಗ್ಗಾನ್‌ನ ಟಾಯ್ಲೆಟ್‌ನಲ್ಲಿ ಭ್ರೂಣ ಪತ್ತೆ | ನಡೆದಿದ್ದೇನು? | JP ಬರೆಯುತ್ತಾರೆ
Fetus found in Megan toilet trash, Shimoga McGann Hospital, Shimoga District Hospital

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024 ‌‌  

ಶಿವಮೊಗ್ಗದ ಜಿಲ್ಲಾಸ್ಪತ್ರೆಯು ಆಗಿರುವ ಮೆಗ್ಗಾನ್‌ ಆಸ್ಪತ್ರೆಯ ಶೌಚಾಲಯದಲ್ಲಿ ಬ್ರೂಣವೊಂದು ಪತ್ತೆಯಾಗಿದೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯೊಬ್ಬರು ಈ ಕೃತ್ಯವೆಸಗಿರಬಹುದಾದ ಶಂಕೆ ಮೂಡಿದೆ. 

ನಡೆದಿದ್ದೇನು?

ಮಲೆನಾಡು ಟುಡೆಗೆ ಲಭ್ಯವಾಗಿರುವ ವಿಚಾರ ಹೀಗಿದೆ. ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬರು ತಮ್ಮ ಪತಿಯು ಯಾವುದೋ ಮಾತ್ರೆ ಕೊಟ್ಟಿದ್ದು, ಇದರಿಂದಾಗಿ ಹೊಟ್ಟೆ ನೋವು ಬರುತ್ತಿದೆ ಎಂದಿದ್ದಾಳೆ. ಈ ವೇಳೆ ತಜ್ಞ ವೈದ್ಯರು, ಆಕೆಯನ್ನು ತಪಾಸಣೆ ನಡೆಸಿದ್ದಾರಷ್ಟೆ ಅಲ್ಲದೆ ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ತನಗೆ ಮೂರು ತಿಂಗಳು ಆಗಿದೆ, ಪತಿ ಕೊಟ್ಟ ಯಾವುದೋ ಮಾತ್ರೆ ತಿಂದಿದ್ದಕ್ಕೆ ವಿಪರೀತ ನೋವಾಗುತ್ತಿದೆ ಎಂದಿದ್ದಾಳೆ. ಇದರಿಂದ ವೈದ್ಯರಿಗೆ ಮಹಿಳೆಗೆ ಅಬಾರ್ಷನ್‌ ಆಗುತ್ತಿದೆ ಎಂಬುದು ಗೊತ್ತಾಗಿದೆ. ಆ ಬಳಿಕ ಲೇಬರ್‌ ರೂಮ್‌ಗೆ ದಾಖಲಿಸಿಕೊಂಡ ವೈದ್ಯರು, ಆಕೆಗೆ ಟ್ರೀಟ್ಮೆಂಟ್‌ ಸಹ ನೀಡಿದ್ದರು. ಇದರ ನಡುವೆ, ತನ್ನ ಮಗುವಿನ ಬ್ರೂಣವನ್ನು ಅಲ್ಲಿಯೇ ಶೌಚಾಲಯದ ಬಳಿ ಕದ್ದ ಕಸದ ಡಬ್ಬಿಗೆ ಎಸೆದು ಮಹಿಳೆಯು ಅಲ್ಲಿಂದ ಎಸ್ಕೇಪ್‌ ಆಗಿದ್ದಾಳೆ. 

ಆನಂತರ ಆಸ್ಪತ್ರೆಯ ಸಿಬ್ಬಂದಿ ಕಸದಬುಟ್ಟಿ ಗಮನಿಸಿದಾಗ ಅದರಲ್ಲಿ ಬ್ರೂಣ ಪತ್ತೆಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಸ್ಪತ್ರೆ ಆಡಳಿತ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಅರ್ಬಾಷನ್‌ ನೋವು ಎಂದು ಬಂದ ಮಹಿಳೆಯೇ ಕೃತ್ಯವೆಸಗಿರುವುದು ಕಂಡುಬಂದಿದೆ. ಮೂಲಗಳ ಪ್ರಕಾರ, ಆರು ತಿಂಗಳ ಬ್ರೂಣ ಇದಾಗಿದ್ದು, ಸದ್ಯ ಶವಾಗಾರದಲ್ಲಿ ಬ್ರೂಣವನ್ನು ಇರಿಸಿ, ದೊಡ್ಡಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ತತ್ಸಂಬಂಧ ಎಫ್‌ಐಆರ್‌ ಸಹ ದಾಖಲಾಗಿದೆ. 

ಬುರ್ಖಾ ದರಿಸಿಕೊಂಡು ಬಂದಿದ್ದ ಮಹಿಳೆ ನೀಡಿದ ಹೆಸರು ಹಾಗೂ ವಿಳಾಸವು ಸಹ ನಕಲಿ ಆಗಿರುವ ಸಾಧ್ಯತೆ ಬಗ್ಗೆ ಪೊಲೀಸರು ಹಾಗೂ ಆಡಳಿತ ಸಿಬ್ಬಂದಿಗೆ ಅನುಮಾನ ಮೂಡಿಸಿದೆ. ಮೇಲಾಗಿ ಆಕೆ ದಾಖಲಾದ ಕೇಸ್‌ ಶೀಟ್‌ ಕೂಡ ಆಕೆಯೆ ತೆಗೆದುಕೊಂಡು ಹೋಗಿದ್ದಾಳೆ. ವೈದ್ಯ ಹಾಗೂ ಸಿಬ್ಬಂದಿಯ ಕಣ್ತಪ್ಪಿಸಿ ಹೋದ ಮಹಿಳೆ ಹಾಗೂ ಆಕೆಯ ಪತಿಗಾಗಿ ಶೋದ ಕಾರ್ಯ ನಡೆಯುತ್ತಿದೆ. ಈ ನಡುವೆ ಆಕೆಗೆ ಸರಿಯಾದ ರೀತಿಯಲ್ಲಿ ಅರ್ಬಾಷನ್‌ ಆಗಿಲ್ಲ. ಚಿಕಿತ್ಸೆಗೂ ಮೊದಲೇ ಆಕೆಯ ತನ್ನ ಮಗುವಿನ ಬ್ರೂಣ ತೆಗೆದು ಬಿಸಾಡಿದ್ದಾಳೆ. ಇದರಿಂದ ಆಕೆಗೆ ನಂಜಾಗುವ ಅಪಾಯವಿದೆ. ಹಾಗಾಗಿ ಆಕೆಯನ್ನು ಹಿಡಿಯುವ ವಿಚಾರಕ್ಕಿಂತಲೂ ಆಕೆಗೆ  ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ತಜ್ಞ ಅನುಭವಿ ವೈದ್ಯರು ಹೇಳುತ್ತಿದ್ದಾರೆ.

SUMMARY |  Fetus found in Megan's toilet trash. Shimoga McGann Hospital. Shimoga District Hospital

KEY WORDS | Fetus found in Megan toilet trash, Shimoga McGann Hospital, Shimoga District Hospital