Festival Special train List | ಗಣೇಶೋತ್ಸವ, ನವರಾತ್ರಿ, ದೀಪಾವಳಿ | 22 ಹೆಚ್ಚುವರಿ ರೈಲುಗಳ ಸಂಚಾರ
Festival Special train List, ಬೆಂಗಳೂರು, ವಿಜಯಪುರ, ಬೆಳಗಾವಿ, ಚಾಮರಾಜನಗರ , ಮೈಸೂರು ವಿಶೇಷ ರೈಲುಗಳು ಸಂಚಾರ ಮಾಡಲಿವೆ
SHIVAMOGGA | MALENADUTODAY NEWS | Sep 5, 2024
ಗಣೇಶೋತ್ಸವ 2024 ರ ಹಿನ್ನಲೆಯಲ್ಲಿ ಈಗಾಗಲೇ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್ ಸೌಲಭ್ಯವನ್ನ ಒದಗಿಸಿದೆ. ಇನ್ನೊಂದೆಡೆ ರೈಲ್ವೆ ಇಲಾಖೆಯು ದೀಪಾವಳಿ, ದಸರಾ ಹಾಗೂ ಗಣೇಶೋತ್ಸವ 2024 ಹಿನ್ನೆಲೆಯಲ್ಲಿ 22 ವಿಶೇಷ ರೈಲುಗಳನ್ನ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಸಂಚಾರಕ್ಕೆ ಅನುಮತಿ ನೀಡಿದೆ.
ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆ
ಗೌರಿ–ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರು ಎಸ್‌ಎಂವಿಟಿಯಿಂದ ಕಲಬುರಗಿಗೆ ಸೆಪ್ಟೆಂಬರ್ 5, 6 ಮತ್ತು 7ರಂದು ರಾತ್ರಿ 9.15ಕ್ಕೆ ವಿಶೇಷ ರೈಲು
ಸೆ.6, 7 ಮತ್ತು 8ರಂದು ರಾತ್ರಿ 9.35ಕ್ಕೆ ಕಲಬುರಗಿಯಿಂದ ಎಸ್‌ಎಂವಿಟಿಗೆ ರೈಲು ಹೊರಡಲಿದೆ.
ವಿಜಯಪುರ
ಬೆಂಗಳೂರು ಎಸ್‌ಎಂವಿಟಿಯಿಂದ ವಿಜಯಪುರಕ್ಕೆ ಅಕ್ಟೋಬರ್ 9 ಮತ್ತು 12ರಂದು ಸಂಜೆ 7ಕ್ಕೆ ಹಾಗೂ ವಿಜಯಪುರದಿಂದ ಬೆಂಗಳೂರಿಗೆ ಅ.10 ಮತ್ತು 13ರಂದು ಸಂಜೆ 7ಕ್ಕೆ ವಿಶೇಷ ರೈಲುಗಳು ಹೊರಡಲಿವೆ.
ಬೆಳಗಾವಿ
ಯಶವಂತಪುರದಿಂದ ಬೆಳಗಾವಿಗೆ ಅ.9 ಮತ್ತು ಅ.12ರಂದು ಸಂಜೆ 6.15ಕ್ಕೆ, ಬೆಳಗಾವಿಯಿಂದ ಯಶವಂತಪುರಕ್ಕೆ ಅ.10 ಮತ್ತು ಅ.13ರಂದು ಸಂಜೆ 5.30ಕ್ಕೆ ವಿಶೇಷ ರೈಲುಗಳು ಹೊರಡಲಿವೆ.
ಮೈಸೂರು
ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ನಿಲ್ದಾಣದಿಂದ ಮೈಸೂರಿಗೆ ಅ.9ರಿಂದ 13ರವರೆಗೆ ಮಧ್ಯಾಹ್ನ 12.15ಕ್ಕೆ ಹಾಗೂ ಅ.10ರಿಂದ 14ರವರೆಗೆ ರಾತ್ರಿ 3ಕ್ಕೆ ವಿಶೇಷ ರೈಲುಗಳು ಇರಲಿವೆ.
ಮೈಸೂರಿನಿಂದ ಕೆಎಸ್‌ಆರ್ ಬೆಂಗಳೂರಿಗೆ ಅ.9ರಿಂದ 13ರವರೆಗೆ ರಾತ್ರಿ 11.15 ಮತ್ತು ರಾತ್ರಿ 3.30ಕ್ಕೆ ವಿಶೇಷ ರೈಲುಗಳು ಇರಲಿವೆ.
ಮೈಸೂರಿನಿಂದ ಚಾಮರಾಜನಗರಕ್ಕೆ ಅ.9ರಿಂದ 13ರವರೆಗೆ ರಾತ್ರಿ 11.30ಕ್ಕೆ ಹಾಗೂ ಅ.12ರಂದು ರಾತ್ರಿ 9.15ಕ್ಕೆ ವಿಶೇಷ ರೈಲುಗಳು ಸಂಚರಿಸಲಿವೆ.
ಚಾಮರಾಜನಗರದಿಂದ ಮೈಸೂರಿಗೆ ಆ.10ರಿಂದ 14ರವರೆಗೆ ಬೆಳಿಗ್ಗೆ 5ಕ್ಕೆ ಹಾಗೂ ಅ.12ರಂದು ರಾತ್ರಿ 11.30ಕ್ಕೆ ವಿಶೇಷ ರೈಲುಗಳು ಇರಲಿವೆ.
ಮೈಸೂರು ವಿಜಯಪುರ
ದೀಪಾವಳಿ ಹಬ್ಬದ ಸಮಯದಲ್ಲಿ ಅಕ್ಟೋಬರ್ 30 ಮತ್ತು ನವೆಂಬರ್ 2ರಂದು ಸಂಜೆ 6ಕ್ಕೆ ಮೈಸೂರಿನಿಂದ ವಿಜಯಪುರಕ್ಕೆ ವಿಶೇಷ ರೈಲು ಹೊರಡಲಿದೆ.
ಅಕ್ಟೋಬರ್ 31 ಮತ್ತು ನವೆಂಬರ್ 3ರಂದು ಮಧ್ಯಾಹ್ನ 2.20ಕ್ಕೆ ವಿಜಯಪುರದಿಂದ ಮೈಸೂರಿಗೆ ವಿಶೇಷ ರೈಲು ಹೊರಡಲಿದೆ.
ಯಶವಂತಪುರ ದಿಂದ ಬೆಳಗಾವಿಗೆ ಅ.30 ಮತ್ತು ನ.1ರಂದು ರಾತ್ರಿ 7.30ಕ್ಕೆ ಹಾಗೂ ಅ.31 ಮತ್ತು ನ.3ರಂದು ಸಂಜೆ 5.30ಕ್ಕೆ ಬೆಳಗಾವಿಯಿಂದ ಯಶವಂತಪುರಕ್ಕೆ ವಿಶೇಷ ರೈಲುಗಳು ಹೊರಡಲಿವೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಮನಿ ಟ್ರೇಡಿಂಗ್ ದಂಧೆಗೆ ಸಿಲುಕಿ ಆತ್ಮಹತ್ಯೆಗೆ ಶರಣಾದನೇ ತೀರ್ಥಹಳ್ಳಿಯ ರ್ಯಾಂಕ್ ವಿದ್ಯಾರ್ಥಿ,ಕಿಚ್ಚ ?
ಅಗ್ನಿವೀರ್ | ಒಂದೇ ಕಾರಣಕ್ಕೆ ನೂರಾರು ವಿದ್ಯಾರ್ಥಿಗಳು ಕೆಲಸ ಕಳೆದುಕೊಳ್ಳಬೇಕಾಯಿತು | ನಡೆದಿದ್ದೇನು?
Bhadra dam | ಮತ್ತೆ ಬರುತ್ತಿದೆ ಮಳೆ | ತುಂಗಾ ಡ್ಯಾಂ ಭರ್ತಿ, ಭದ್ರಾ ಡ್ಯಾಂನಲ್ಲಿ ಎಷ್ಟಿದೆ ನೀರಿನ ಮಟ್ಟ!?
ಇದನ್ನು ಸಹ ಓದಿ :ಹಾರು ಬೆಕ್ಕಿನ ಬೇಟೆ | ಹುಂಚಾ ಹೋಬಳಿಯಲ್ಲಿ ಸಿಕ್ಕಿಬಿದ್ದ ಆರೋಪಿ | ಅರಣ್ಯ ಇಲಾಖೆ ಕಾರ್ಯಾಚರಣೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ