ಫೆಬ್ರವರಿ 20, 22 ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಮಾಜದಲ್ಲಿ ಜ್ಞಾನ ಸಮಾವೇಶ
Kuvempu University, Shivamogga and Journal of Dialogues on Knowledge in Society, Chennai, have organised a conference on 'Knowledge in Society' from Feb. 20 to 22 at Basava Sabha Bhavan, Kuvempu University

SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 17, 2025
ಶಿವಮೊಗ್ಗ | ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ಜರ್ನಲ್ ಆಫ್ ಡೈಲಾಗ್ಸ್ ಆನ್ ನಾಲೆಡ್ಜ್ ಇನ್ ಸೊಸೈಟಿ ಚೆನ್ನೈ ವತಿಯಿಂದ ಫೆಬ್ರವರಿ 20 ರಿಂದ 22 ರ ವರೆಗೆ ಸಮಾಜದಲ್ಲಿ ಜ್ಞಾನ ಎಂಬ ಸಮಾವೇಶವನ್ನು ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಫ್ರೋ ಶರತ್ ಅನಂತಮೂರ್ತಿ ತಿಳಿಸಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನನಡೆಸಿ ಮಾತನಾಡಿದ ಅವರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಮಾಜದಲ್ಲಿನ ಜ್ಞಾನದ ಕುರಿತಾದ ಈ ಸಮಾವೇಶವು 75 ವರ್ಷಗಳ ರಾಷ್ಟ್ರ ನಿರ್ಮಾಣ ಹಾಗೂ ಅಭಿವೃದ್ಧಿಯ ದಾರಿಯಲ್ಲಿ ಜ್ಞಾನದ ಬಗೆಗಿನ ಪ್ರಶ್ನೆಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಶ್ನೆಗಳನ್ನು ಚರ್ಚಿಸುವ ಮುಕ್ತ ವೇದಿಕೆಯಾಗಿದೆ. ದೇಶದ ಅಭಿವೃದ್ಧಿಯಲ್ಲಿ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರದ ಬಗ್ಗೆ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಿವೆ. ಆದರೂ ಮಾನವ ಬದುಕಿನ ಇತರೆ ಜ್ಞಾನ ವಲಯಗಳಾದ ಅರ್ಥಶಾಸ್ತ್ರ, ರಾಜಕೀಯ, ಸಮಾಜ ವಿಜ್ಞಾನ, ಕಲೆ ತತ್ವಶಾಸ್ತ್ರ ಸಾಮಾಜಿಕ ಸಂಘಟನೆ ಕುಟುಂಬ ಮುಂತಾದ ವಿಷಯಗಳ ಕುರಿತು ವಿಮರ್ಶಾತ್ಮಕ ಚಿಂತನೆಗಳು ಇದುವರೆಗೆ ನಡೆದಿಲ್ಲ. ಹಾಗೆಯೇ ನ್ಯಾಯ, ಸ್ವಾತಂತ್ರ್ಯ ಹಾಗೂ ಸುಸ್ಥಿರತೆ ಅಂತಹ ವಿಷಯಗಳಿಗೆ ಸಿಕ್ಕಂತಹ ಪ್ರಾಮುಖ್ಯತೆ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಿಕ್ಕಿಲ್ಲ. ಇದರಿಂದ ಸ್ಪಷ್ಟವಾಗುವುದೇನೆಂದರೆ ನಮ್ಮ ಬಹುಪಾಲು ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಲು ಬಿಕ್ಕಟ್ಟುಗಳ ಒಡಲಲ್ಲೇ ಇರುವ ಜ್ಞಾನ ಮತ್ತು ಅದರ ಮೂಲ ತತ್ವಗಳ ಪ್ರಶ್ನೆಗಳನ್ನು ಎದುರುಗೊಳ್ಳುವುದು ಮುಖ್ಯ ಆದರೆ ಅಧಿಕಾರ ಆಸಕ್ತಿ ಆದ್ಯತೆಗಳ ಆಚೆ ಅದು ಅಂತಹ ಪ್ರಾಮುಖ್ಯತೆಯನ್ನು ಪಡೆದಿಲ್ಲ ಎಂಬುದು ನಮ್ಮ ಅಭಿಪ್ರಾಯ ಈ ಹಿನ್ನಲೆ ಇಂತಹ ಸಮವೇಶವನ್ನು ಹಮ್ಮಿಕೊಂಡಿದ್ದೇವೆ ಎಂದರು.
ನಮ್ಮ ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಾಡಲಾದ ವಿಜ್ಞಾನ ಮತ್ತು ತಂತ್ರಜ್ಞಾನಗಳ ಆಯ್ಕೆಗಳು ಸೇರಿದಂತೆ ಜ್ಞಾನದ ಆಯ್ಕೆಗಳು, ಅದರ ಕಾರಣಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಫಲಿತಾಂಶಗಳ ಮೇಲೆ ಅವುಗಳ ಪ್ರಭಾವವನ್ನು ಪರಿಶೀಲಿಸುವುದು ಸಮಾವೇಶದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಈ ಸಮಾವೇಶವನ್ನು ನಡೆಸಲು ಕಳೆದು 6 ತಿಂಗಳುಗಳಿಂದ ತಯಾರಿಯನ್ನು ನಡೆಸುತ್ತಿದ್ದೇವೆ. ದೇಶದಾದ್ಯಂತ 64 ಜನ ವಿದ್ವಾಂಸರು ಭಾಗವಹಿಸಲಿದ್ದಾರೆ. ಈ 64 ಜನರಲ್ಲಿ ಕಲಾವಿದರು, ಚಿಂತಕರು, ಸಂಗೀತ ವಿದ್ಯಾಂಸರು, ಹೋರಾಟಗಾಗರು ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. 3 ದಿನ 8 ಸುದ್ದಿಗೋಷ್ಠಿ ನಡೆಯುತ್ತಿದ್ದು, ಪ್ರತಿ ಸುದ್ದಿಗೋಷ್ಠಿಯಲ್ಲಿ 6ರಿಂದ 8 ಜನ ಭಾಗವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರೋ ಜಿ ಎನ್ ದೇವಿ ಮಾಡಲಿದ್ದು, ಅಧ್ಯಕ್ಷತೆಯನ್ನು ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಫ್ರೋ ಶರತ್ ಅನಂತಮೂರ್ತಿ ವಹಿಸಲಿದ್ದಾರೆ.
SUMMARY | Kuvempu University, Shivamogga and Journal of Dialogues on Knowledge in Society, Chennai, have organised a conference on 'Knowledge in Society' from Feb. 20 to 22 at Basava Sabha Bhavan, Kuvempu University
KEYWORDS | Kuvempu University, Shivamogga, conference,