ಆಸ್ತಿಗಾಗಿ ಅಪ್ಪ ಮಗನ ಹೊಡೆದಾಟ | ಕುಡುಗೋಲಿನಿಂದ ಚುಚ್ಚಿದ ತಂದೆ, ಮಗನ ಸಾವು
Father kills son at Ballur village in Shikaripura taluk
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಬಳ್ಳೂರು ಗ್ರಾಮದಲ್ಲಿ ತಂದೆಯಿಂದಲೇ ಮಗನ ಕೊಲೆಯಾಗಿದೆ. ಇಬ್ಬರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ. ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸ್ಥಳೀಯ ವರದಿ ಪ್ರಕಾರ, ಬಳ್ಳೂರು ಗ್ರಾಮದಲ್ಲಿ ತಂದೆ ಲಿಂಗಾನಾಯ್ಕ ಮಗ ಗಂಗ್ಯಾನಾಯ್ ನಡುವೆ ಜಗಳ ನಡಿದಿದೆ. ಆಸ್ತಿ ಕಾರಣಕ್ಕೆ ನಡೆದ ಜಗಳ ವಿಕೋಪಕ್ಕೆ ಹೋಗಿ , ಲಿಂಗಾನಾಯ್ಕ , ಮಗನ ಎದೆಗೆ ಕುಡುಗೋಲಿನಿಂದ ಚುಚ್ಚಿದ್ದಾನೆ. ಈ ವೇಳೇ ತೀವ್ರ ರಕ್ತಸ್ರಾವ ಆದ್ದರಿಂದ ಮಗ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಮಾಹಿತಿ ಪಡೆದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.
SUMMARY | Father kills son at Ballur village in Shikaripura taluk
KEY WORDS | Father kills son , Ballur village ,Shikaripura taluk