ಯಮಸ್ವರೂಪಿಯಂತೆ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಫಾದರ್ ಪೀಟರ್ ಇದ್ದ ಕಾರಿಗೆ ಅಪ್ಪಳಿಸಿದ್ದು ಹೇಗೆ?...ಅಡ್ಡಬಂದವರು ಯಾರು?
ಶಿಕಾರಿಪುರ ಕಿರಿಯ ಪುಷ್ಪ ಸಂತ ತರೇಸಾ ಚರ್ಚ್ ನ ಗುರುಗಳಾಗಿರುವ ಫಾದರ್ ಅಂತೊಣಿ ಪೀಟರ್ ಅಪಘಾತದ ಸುದ್ದಿ ಕ್ರೈಸ್ತ ಸಮದಾಯದ ಭಕ್ತರದಲ್ಲಿ ಅತೀವ ನೋವನ್ನುಂಟು ಮಾಡಿದೆ. ದಿನಾಂಕ 23 ಜುಲೈ 2024ರ ಮಂಗಳವಾರ ಮಧ್ಯಾಹ್ನ ವಮೊಗ್ಗದಲ್ಲಿ ತಮ್ಮ ಕೆಲಸ ಮುಗಿಸಿ ಶಿಕಾರಿಪುರಕ್ಕೆ ಮರಳಿ ಹೋಗುತ್ತಿದ್ದಂತಹ ಸಂದರ್ಭಲ್ಲಿ ಸವಳಂಗ - ಶಿಕಾರಿಪುರದ ಮಧ್ಯೆ ಇರುವ ಚಿನ್ನಿಕಟ್ಟೆ ಎಂಬಲ್ಲಿ ಅವರು ಪ್ರಯಾಣಿಸುತ್ತಿದ್ದ ಹ್ಯುಂಡೈ ಕಾರು ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಮುಖಾಮುಖಿ ಡಿಕ್ಕಿಯಾಗಿದೆ.ಪರಿಣಾಮ ಫಾದರ್ ಅಂತೋಣಿ ಪೀಟರ್ ಸ್ಥಳದಲ್ಲಿಯೇ ಮೃತ ಪಟ್ಟರೇ, ಕಾರು ಚಲಾಯಿಸುತ್ತಿದ್ದ ಸಹೋದರ ಸ್ಟೀಫನ್ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟಕ್ಕೂ ಚಿನ್ನಿಕಟ್ಟೆ ಜೋಗದ ರಸ್ತೆ ಅಪಘಾತದ ವಲಯವಲ್ಲದಿದ್ದರೂ ,ರಸ್ತೆ ನೇರವಾಗಿರುವುದರಿಂದ ವಾಹನ ಸವಾರರು ಓವರ್ ಸ್ಪೀಡ್ ನಲ್ಲಿ ವಾಹನ ಚಲಾಯಿಸುವುದು ಸಾಮಾನ್ಯವಾಗಿದೆ. ಈ ರಸ್ತೆಯಲ್ಲಿ ದನ ಎಮ್ಮೆಗಳು ದುತ್ತೆಂದು ರಸ್ತೆಗೆ ಅಡ್ಡಲಾಗಿ ಬರುತ್ತವೆ. ವಾಹನ ಸವಾರರು ಓವರ್ ಸ್ಪೀಡ್ ಆಗಿ ಚಲಾಯಿಸುವಾಗ ಜಾನುವಾರುಗಳು ಅಡ್ಡ ಬಂದರೆ. ಸಾವು ಖಚಿತ ಎಂದೇ ಲೆಕ್ಕ.
ಈ ರಸ್ತೆಯಲ್ಲಿ ವಾಹನ ಸವಾರರು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಎದುರಿನ ವಾಹನ ಮುಖಾಮುಖಿಯಾದ್ರೆ, ಸಾವು ನೋವಿನ ಸಂಖ್ಯೆಯನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ.ಇತ್ತಿಚ್ಚೆಗೆ ಇದೇ ಬಿದರಳ್ಳಿ ಚಿನ್ನಿಕಟ್ಟೆ ಸನಿಹ ವಾಯುವ್ಯ ಸಾರಿಗೆ ಸರ್ಕಾರಿ ಬಸ್ ಹಾಗು ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮೂರು ಮಂದಿ ಸಾವನ್ನಪ್ಪಿದ್ದರು.
ನೆನ್ನೆ ಸಹ ಫಾದರ್ ಅಂತೊಣಿ ಪೀಟರ್ ತಮ್ಮಸಹೋದರ ನ ಜೊತೆಗೂಡಿ ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಕಾರಿನಲ್ಲಿ ತೆರಳುವ ಸಂದರ್ಭದಲ್ಲಿ ಹಾನಗಲ್ ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಎದುರಾಗಿದೆ. ಈ ಸಂದರ್ಭದಲ್ಲಿ ಬಸ್ ಗೆ ಎಮ್ಮೆ ನೇರವಾಗಿ ಅಡ್ಡ ಬಂದಿದೆ. ನಿಯಂತ್ರಣ ತಪ್ಪಿದ ಬಸ್ ಚಾಲಕ ಎದುರಿಗೆ ಬರುತ್ತಿದ್ದ ಕಾರಿಗೆ ನೇರವಾಗಿ ಅಪ್ಪಳಿಸಿದ್ದಾನೆ. ಫಾದರ್ ಪೀಟರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಜ್ಜುಗುಜ್ಜಾದ ಕಾರು ಅಪಘಾತದ ತೀವೃತೆಯನ್ನು ಸಾಕ್ಷಿಕರಿಸಿತ್ತು. ನ್ಯಾಮತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.