ಮದುವೆ ಮಾಡಿಸದ್ದಕ್ಕೆ ಸಿಟ್ಟು, ತಂದೆಯನ್ನ ಕೊಂದ ಮಗ | ಇಂದಿರಾ ಕ್ಯಾಂಟಿನ್ ಬಳಿ ಸಿಕ್ಕ ವೃದ್ಧೆ ಸಾವು | ಹೋಟೆಲ್‌ನಲ್ಲಿ ಶಾಕ್, ಮಾಲೀಕ ಮರಣ
Chitradurga taluk, son who killed father, Shivamogga district, Shivamogga Doddapet police station, Indira canteen, Vinobanagar, electric shock,
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 27, 2024
ಚಿತ್ರದುರ್ಗದ ಕುಂದಲಗುರ ಗ್ರಾಮದಲ್ಲಿ ಕಳೆದ ಶನಿವಾರ ಪುತ್ರ ಮಹಾಶಯನೊಬ್ಬ ತನಗೆ ಮದುವೆ ಮಾಡಿಸಲಿಲ್ಲ ಎಂದು ತಂದೆಯನ್ನ ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಸಂಬಂಧ ಅಬ್ಬಿನ ಹೊಳೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ರಂಗಸ್ವಾಮಿ ಕೊಲೆಯಾದವರು ಹಾಗೂ ದೇವರಾಜ್ ಕೊಲೆ ಮಾಡಿದವರು. ಊಟದ ವೇಳೆ ಮೊಟ್ಟೆ ಕೊಡಲಿಲ್ಲ ಎಂಬ ವಿಚಾರಕ್ಕೆ ತಂದೆಯೊಡನೆ ಜಗಳವಾಡಿದ ಮಗ, ತನ್ನನ್ನ ಕಡೆಗಣಿಸ್ತಿದ್ದೀಯ, ಮದುವೆಯನ್ನು ಮಾಡಿಸಿಲ್ಲ ಎಂದು ತಂದೆಯನ್ನ ಬೀಳಿಸಿ ಕುತ್ತಿಗೆ ಮೇಲೆ ಕಾಲಿಟ್ಟಿದ್ದಾನೆ. ಮಗನ ಪೆಟ್ಟು ತಾಳಲಾರದೇ ತಂದೆ ಸಾವನ್ನಪ್ಪಿದ್ದಾನೆ.
ಇಂದಿರ ಕ್ಯಾಂಟಿನ್ ಬಳಿ ಅಸ್ವಸ್ಥರಾದವರು ಸಾವು
ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದ ಇಂದಿರಾ ಕ್ಯಾಂಟಿನ್ ಬಳಿ ಪ್ರಜ್ಞಾಹೀನ ಸ್ಥತಿಯಲ್ಲಿದ್ದ ಸುಮಾರು 70 ವರ್ಷದ ಅನಾಮದೇಯ ವ್ಯಕ್ತಿಯನ್ನು ಸ್ಥಳೀಯರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಸಲಾಗಿದ್ದು ವೈದ್ಯರು ಪರೀಕ್ಷಿಸಿ ನೋಡಿ ವ್ಯಕ್ತಿ ಮೃತಪಟ್ಟಿರುತ್ತಾರೆ. ಅವರ ಗುರುತು ಹೀಗಿದೆ. ಮೃತನು ಸುಮಾರು 5.6 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈ ಬಣ್ಣ, ಸಾಧಾರಣ ಮೈಕಟ್ಟು, 4 ಇಂಚು ಉದ್ದದ ಬಿಳಿ ಗಡ್ಡ ಮೀಸೆ ಇರುತ್ತದೆ. 4 ಇಂಚು ತಲೆಯಲ್ಲಿ ಬಿಳಿ ಕೂದಲು ಇರುತ್ತದೆ, ಮುಂದಲೆ ಭಾಗ ಬೋಳಾಗಿರುತ್ತದೆ ಮತ್ತು ತಲೆಯ ಭಾಗದಲ್ಲಿ ರಾಗಿ ಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ ಹಾಗೂ ಅರ್ಧ ತೋಳಿನ ಬನಿಯನ್ ಧರಿಸಿರುತ್ತಾರೆ. ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಮೃತನ ವಾರಸುದಾರರು ಯಾರದರೂ ಇದ್ದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೋಲೀಸ್ ಠಾಣೆ ದೂ.ಸಂ: 08182-261414 ಮತ್ತು ಮೊ.ನಂ 9916882544 ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
ಕರೆಂಟ್ ಶಾಕ್ ಹೋಟೆಲ್ ಮಾಲೀಕ ಸಾವು
ಲೈಟ್ ಸ್ವಿಚ್ ಹಾಕಲು ಹೋದ ಸಂದರ್ಭದಲ್ಲಿ ಕರೆಂಟ್ ಶಾಕ್‌ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ವಿನೋಬನಗರ ಹೋಟೆಲ್ ಒಂದರಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ ಇಲ್ಲಿನ ಹೋಟೆಲ್ ಮಾಲೀಕರು ಹೋಟೆಲ್ ಸ್ವಚ್ಚಗೊಳಿಸಿದ ಬಳಿಕ ಲೈಟ್ ಹಾಕಲು ಸ್ವಿಚ್ ಬೋರ್ಡ್ ಮುಟ್ಟಿದಾಗ ಕುಸಿದು ಬಿದ್ದಿದ್ದಾರೆ. ಅವರನ್ನ ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿಯೇ ಸಾವನ್ನಪ್ಪಿದ್ದಾರೆ. ಮೂಲತಃ ಇವರು ಕುಂದಾಪುರದವರು ಎಂದು ತಿಳಿದುಬಂದಿದೆ.
SUMMARY | Chitradurga taluk, son who killed father, Shivamogga district, Shivamogga Doddapet police station, Indira canteen, Vinobanagar, electric shock,
KEYWORDS | Chitradurga taluk, son who killed father, Shivamogga district, Shivamogga Doddapet police station, Indira canteen, Vinobanagar, electric shock,