Bhadra dam water | ಭದ್ರಾ ಡ್ಯಾಂ ನೀರಿನ ವಿಚಾರದಲ್ಲಿ ರೈತರ ಆತಂಕ | ಅಧಿಕಾರಿಗಳಿಗೆ ಒತ್ತಾಯ |
Farmers worried over Bhadra dam water
SHIVAMOGGA | MALENADUTODAY NEWS | Aug 9, 2024
ಶಿವಮೊಗ್ಗದಲ್ಲಿರುವ ಭದ್ರಾ ಡ್ಯಾಂ ಬಹುತೇಕ ಭರ್ತಿಯಾಗಿದೆ. ಈ ನಡುವೆ ಮಳೆ ತಗ್ಗಿದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ ಡ್ಯಾಂನಿಂದ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣವನ್ನ ಕೂಡಲೇ ತಗ್ಗಿಸಬೇಕು, ನೀರನ್ನ ಬೇಸಿಗೆಯವರೆಗೂ ಕಾಪಿಟ್ಟುಕೊಳ್ಳುವುದಕ್ಕೆ ಕ್ರಮವಹಿಸಬೇಕು ಎಂದು ಭದ್ರಾ ಅಚ್ಚುಕಟ್ಟು ರೈತರು ಆಗ್ರಹಿಸಿದ್ದಾರೆ.
ಕಾಡಾ ಸಭೆಯಲ್ಲಿ
ಇತ್ತೀಚಿನ ಕಾಡಾ ಸಭೆಯಲ್ಲಿ ಮುಂಗಾರು ಹಂಗಾಮಿನಲ್ಲಿ 120 ದಿನ ನೀರು ಹರಿಸಲು ನಿರ್ಧರಿಸಲಾಗಿದೆ. ನಿನ್ನೆಯ ಮಾಹಿತಿ ಪ್ರಕಾರ, ಸುಮಾರು ಏಳು ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಬಿಡಲಾಗುತ್ತಿದೆ. ಎಡ ದಂಡೆ ನಾಲೆಗೆ 308 ಕ್ಯೂಸೆಕ್ ಮತ್ತು ಬಲ ದಂಡೆ ನಾಲೆಗೆ 2650 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಭದ್ರಾ ಡ್ಯಾಂ
ಆದರೆ ಕಳೆದ ವರ್ಷದ ಬರಗಾಲವನ್ನು ಗಮನದಲ್ಲಿಟ್ಟುಕೊಂಡು ನೀರು ಹರಿಸುವುದನ್ನ ಕಡಿಮೆಗೊಳಿಸಬೇಕು. ಬೇಸಿಗೆಗೆ ನೀರು ಕಾಪಿಟ್ಟುಕೊಳ್ಳಬೇಕು ಎಂದು ರೈತರು ನೀರಾವರಿ ಇಲಾಖೆಗೆ ಮನವಿ ಮಾಡುತ್ತಿದ್ದಾರೆ.
ಭದ್ರಾ ಡ್ಯಾಂ ನೀರಿನ ಮೇಲೆಯೆ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ಸಾವಿರಾರು ರೈತರು ಅವಲಂಭಿತರಾಗಿದ್ದಾರೆ. ಭದ್ರಾವತಿ, ಚನ್ನಗಿರಿ, ಹೊನ್ನಾಳಿ, ಹರಿಹರ, ದಾವಣಗೆರೆ ಭಾಗದ ರೈತರು ಈ ನೀರನ್ನ ಬಳಸಿ ಭತ್ತ ಬೆಳೆಯುತ್ತಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ