ಬಳ್ಳಾರಿ ಬಾಬು ನಂಬಿ, ತೀರ್ಥಹಳ್ಳಿಗೆ ಬಂದ ಆಂಧ್ರವಾಳ್ಳುಗೆ ಶಾಕ್‌ | 20 ಲಕ್ಷದ ಜೊತೆ ಮೊಬೈಲ್‌ ಕೂಡ ಇಲ್ಲ

Fake gold coin scam karnataka

ಬಳ್ಳಾರಿ ಬಾಬು ನಂಬಿ,  ತೀರ್ಥಹಳ್ಳಿಗೆ ಬಂದ ಆಂಧ್ರವಾಳ್ಳುಗೆ ಶಾಕ್‌ | 20 ಲಕ್ಷದ ಜೊತೆ ಮೊಬೈಲ್‌ ಕೂಡ ಇಲ್ಲ
Fake gold coin scam karnataka

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 25, 2025 ‌‌ 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ನಕಲಿ ಬಂಗಾರದ ನಾಣ್ಯಗಳ ಜಾಲ ಜೋರಾಗಿ ಕೆಲಸ ಮಾಡುತ್ತಿದೆ. ಶಿರಾಳಕೊಪ್ಪದ ಬಳಿ ಬನ್ನಿ ಎಂದು ದೋಖಾ ಮಾಡುತ್ತಿದ್ದ ಗ್ಯಾಂಗ್‌ವೊಂದರ ಸುದ್ದಿ ಇದೇ ಮಲೆನಾಡು ಟುಡೆಯಲ್ಲಿ ಓದೀದ್ದೀರಿ. ಇದೀಗ ಅದೇ ರೀತಿಯಲ್ಲಿ ತೀರ್ಥಹಳ್ಳಿಗೆ ಕರೆದು ದೂರದ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರಿಗೆ ಮೋಸ ಮಾಡಲಾಗಿದೆ. ಅದು ಕೂಡ ಬರೋಬ್ಬರಿ 20 ಲಕ್ಷ ರೂಪಾಯಿ. 

ಆಗುಂಬೆ, ಆಂಧ್ರಪ್ರದೇಶ 

ಆಂಧ್ರಪ್ರದೇಶದ ಕಡಪ ಜಿಲ್ಲೆ ನಿವಾಸಿ ಶ್ರೀನಿವಾಸ ಎಂಬವರಿಗೆ ಬಳ್ಳಾರಿಯ ವ್ಯಕ್ತಿಯೊಬ್ಬ ಪರಿಚಯವಾಗಿದ್ದ, ಯಥಾಪ್ರಕಾರ ಆತ ತನಗೆ ಹಳೆಕಾಲದ ಚಿನ್ನದ ನಾಣ್ಯ ಸಿಕ್ಕಿದ್ದು, ಅದನ್ನು ಕೊಡುತ್ತೇನೆ ಎಂದು ಸ್ಯಾಂಪಲ್‌ ಗೆ ಅಸಲಿಗೆ ನಾಣ್ಯಗಳನ್ನ ನೀಡಿದ್ದ. ಅದನ್ನು ಪರಿಶೀಲಿಸಿ ಆಂಧ್ರವಾಳ್ಳು, ಬಳ್ಳಾರಿಗಾರನನ್ನು ಸಂಪೂರ್ಣವಾಗಿ ನಂಬಿದ್ದ. ವಿಷಯ ಅಂದರೆ ಆಂಧ್ರ ಮತ್ತು ಬಳ್ಳಾರಿಯವನ ನಡುವಿನ ಡೀಲ್‌ ನಡೆದಿದ್ದು ತೀರ್ಥಹಳ್ಳಿಯ ಆಗುಂಬೆ ರಸ್ತೆಯಲ್ಲಿ ಹೌದು. ನಾಲ್ಕು ಕೆಜಿ ಚಿನ್ನದ ನಾಣ್ಯ ನೀಡುವುದಾಗಿ ಆಗುಂಬೆ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕಡಪ ನಿವಾಸಿಯನ್ನ ಕರೆಸಿಕೊಂಡ ಬಳ್ಳಾರಿ ಬಾಬು, ಅವರಿಗೆ ನಕಲಿ ಚಿನ್ನಕೊಟ್ಟು ವಂಚಿಸಿದ್ದಷ್ಟೆ ಅಲ್ಲದೆ ಅವರ ಮೊಬೈಲ್‌ನ್ನ ಸಹ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸದ್ಯ ಈ ಸಂಬಂಧ ಕೇಸ್‌ ದಾಖಲಾಗಿದೆ.

SUMMARY | Fake gold coin scam karnataka , Agumbe, Thirthahalli, Andhra Pradesh, Kadapa District, Bellary District

KEY WORDS | Fake gold coin scam karnataka , Agumbe, Thirthahalli, Andhra Pradesh, Kadapa District, Bellary District