ಶಿವಮೊಗ್ಗದಲ್ಲಿ ಮತ್ತೆ ಸೈಬರ್ ಟಿಪ್ ಲೈನ್ ಸದ್ದು | 2 ವರುಷದ ಹಿಂದಿನ ಕ್ರೈಂಗೆ ಇದೀಗ FIR | ತಪ್ಪಿಸಿಕೊಳ್ಳಲು ಅಸಾಧ್ಯ
FIR lodged CEN Police Station, Shivamogga ,cyber tip line report

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 24, 2025
ಶಿವಮೊಗ್ಗದಲ್ಲಿ ವಿಶ್ವಮಟ್ಟದ ಸೈಬರ್ ಟಿಪ್ ಲೈನ್ ಸಂಸ್ಥೆಯ ಸಲಹೆಯಿಂದಾಗಿ ಮತ್ತೊಂದು ಕೇಸ್ ದಾಖಲಾಗಿದೆ. ಈ ಹಿಂದೆ ಮಕ್ಕಳ ಪಾರ್ನ್ ವಿಡಿಯೋ ಅಪ್‌ಲೋಡ್ ಸಂಬಂಧ ದಾಖಲಾದ ದೂರಿನನ್ವಯ ಹಲವು ಕೇಸ್‌ಗಳು ದಾಖಲಾಗಿತ್ತು. ಮುಂದುವರಿದು ಕೆಲವು ಪ್ರಕರಣಗಳಲ್ಲಿ ಶಿಕ್ಷೆಯಾಗಿತ್ತಷ್ಟೆ , ಅಂತಹ ಕೇಸ್‌ನಲ್ಲಿ ತನಿಖೆ ನಡೆಸಿದ ಅಧಿಕಾರಿಗಳು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದರು.
ಇದೀಗ ಅಂತಹುದ್ದೆ ಒಂದು ಕೇಸ್ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕರಣದ ವಿವರವನ್ನು ಗಮನಿಸುವುದಾದರೆ, ಶಿವಮೊಗ್ಗ ಜಿಲ್ಲೆಯ ಯುವಕನೊಬ್ಬ 2022 ರ ಜುಲೈ ತಿಂಗಳಿನಲ್ಲಿ ಫೇಸ್‌ಬುಕ್ ಅಕೌಂಟ್‌ವೊಂದರಲ್ಲಿ ಮಕ್ಕಳ ಅಶ್ಲೀಲ ಚಿತ್ರವನ್ನು ಅಪ್ಲೋಡ್ ಮಾಡಿದ್ದ ಎನ್ನಲಾಗಿದೆ. ಅದರ ಬಗ್ಗೆ ಮಾಹಿತಿ ಪಡೆದ ಸೈಬರ್ ಟಿಪ್ ಲೈನ್ ಸಂಸ್ಥೆಯು ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟ್ ಪೋರ್ಟಲ್ ಗೆ ವರದಿ ಮಾಡಿದೆ. ಅಲ್ಲಿಂದ ಇದರ ವರದಿ ಸಿಐಡಿ ವಿಭಾಗಕ್ಕೆ ಬಂದು, ಶಿವಮೊಗ್ಗದ ಸಿಇಎನ್ ಠಾಣೆಯನ್ನು ತಲುಪಿದೆ. ಈ ವರದಿ ಆಧರಿಸಿ ಇದೀಗ FIR ದಾಖಲಾಗಿದೆ.
SUMMARY | FIR has been lodged at the CEN Police Station in Shivamogga based on a cyber tip line report.
KEY WORDS | FIR lodged CEN Police Station, Shivamogga ,cyber tip line report.