ಸಿಗಂದೂರು ಕಳಸವಳ್ಳಿಯಲ್ಲಿ ಮೂವರು ನೀರುಪಾಲು | ಸ್ಥಳಕ್ಕೆ ದೌಡಾಯಿಸಿದ ಈಶ್ವರ್ ಮಲ್ಪೆ | ಹುಡುಕಾಟ
Eshwar Malpe searches for those who drowned in backwaters near Sigandur Kalasavalli
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಕಳಸವಳ್ಳಿ ಬಳಿ ಹಿನ್ನೀರಿನ ನಡುಗಡ್ಡೆಗೆ ಊಟಕ್ಕೆ ತೆರಳಿದ್ದವರು ನೀರುಪಾಲಾದ ಘಟನೆ ನಿನ್ನೆ ಸಂಜೆ ನಡೆದಿತ್ತು. ಇದೀಗ ನೀರು ಪಾಲಾದವರ ಹುಡುಕಾಟಕ್ಕಾಗಿ ಪ್ರಸಿದ್ದ ಮುಳುಗು ತಜ್ಞ ಈಶ್ವರ್ ಮಲ್ಪೆಯವರು ತುಮರಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ದಿನ ಹೊಳೆ ಊಟಕ್ಕೆ ಐದು ಜನ ಇಲ್ಲಿ ಕ್ಯಾಂಪ್‌ನವರು ಬಿಟ್ಟಿದ್ದ ಉಕ್ಕುಡ ತೆಗೆದುಕೊಂಡು ಹೋಗಿದ್ದಾರೆ. ಹೊಳೆ ಊಟ ಮುಗಿಸಿ ಆಚೆಯ ದಡದಿಂದ ಈಚೆಗೆ ಉಕ್ಕುಡದಲ್ಲಿ ಬರುವಾಗ ತೆಪ್ಪ ಸಮತೋಲನ ಕಳೆದುಕೊಂಡಿದೆ. ಪರಿಣಾಮ ಉಕ್ಕುಡ ಭಾಗಶಃ ಮುಳುಗಿದೆ.
ಈ ವೇಳೆ ಚೇತನ್ ಜೈನ (28) ಸಿಗಂದೂರು, ಸಂದೀಪ (30) ಹುಲಿದೇವರಬನ, ರಾಜು ಗಿನಿವಾರ (28) ಮುಳುಗಿದ್ದಾರೆ .ಈ ಮೂವರಿಗೂ ಈಜು ಬರುತ್ತಾ ಇರಲಿಲ್ಲ. ಇನ್ನಿಬ್ಬರು ವಿನಯ ಮತ್ತು ಯಶವಂತ ಈಜಿ ದಡ ಸೇರಿದ್ದಾರೆ.
ನಿನ್ನೆ ಸಂಜೆ ಕತ್ತಲಾದ್ದರಿಂದ ಮುಳುಗಿದವರಿಗಾಗಿ ಹುಡುಕಾಟ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಅವರಿಗಾಗಿ ಹುಡುಕಾಟ ಆರಂಭವಾಗಿದ್ದು ಜಿಟಿ ಸತ್ಯನಾರಾಯಣ್‌ರವರು ತಿಳಿಸಿದಂತೆ ಸ್ಥಳದಲ್ಲಿ ಈಶ್ವರ್ ಮಲ್ಪೆ ಬೀಡುಬಿಟ್ಟಿದ್ದು, ಹುಡುಕಾಟ ಆರಂಭಿಸಿದ್ದಾರೆ.
SUMMARY | Eshwar Malpe searches for those who drowned in backwaters near Sigandur Kalasavalli
KEYWORDS | Eshwar Malpe , drowned in backwaters ,Sigandur Kalasavalli