40 ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಹುಲಿಕಲ್ ಘಾಟಿ ಟರ್ನಿಂಗ್‌ನಲ್ಲಿ ಕಂದಕಕ್ಕೆ ಬಿತ್ತು
Durgamba bus, Hulikal Ghati, Hosanagara, Balebare Ghati
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 6, 2025
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಲಿಕಲ್‌ನಲ್ಲಿ ಬಸ್ ವೊಂದು ನಿಯಂತ್ರಣ ತಪ್ಪಿ ತಿರುವಿನಲ್ಲಿ ಕಂದಕಕ್ಕೆ ಬಿದ್ದ ಘಟನೆ ಬಗ್ಗೆ ತಡವಾಗಿ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಹುಲಿಕಲ್ ಘಾಟಿ ಟರ್ನಿಂಗ್‌ನಲ್ಲಿ ಕಳೆದ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸುಮಾರು 60 ಅಡಿ ಆಳಕ್ಕೆ ದುರ್ಗಾಂಬಾ ಬಸ್ ಬ್ರೇಕ್ ಫೇಲ್ ಆಗಿ ಕಂದಕಕ್ಕೆ ಉರುಳಿದೆ. ಬಸ್‌ನಲ್ಲಿ ಈ ವೇಳೆ ಸುಮಾರು 40 ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅದೃಷ್ಟಕ್ಕೆ ಯಾರಿಗೂ ಈ ಘಟನೆಯಲ್ಲಿ ದೊಡ್ಡ ಪೆಟ್ಟಾಗಿಲ್ಲ. ಸಣ್ಣಪುಟ್ಟ ಗಾಯಗಳಿಂದ ಬಚಾವ್ ಪ್ರಯಾಣಿಕರಿಗೆ ಕುಂದಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಸ್ ದಾವಣಗೆರೆಯಿಂದ ಮಂಗಳೂರಿಗೆ ಹೋಗುತ್ತಿತ್ತು.
SUMMARY | Durgamba bus falls into ditch at Hulikal Ghati, Hosanagar, incident at the turn of Balebar Ghati
KEY WORDS |Durgamba bus, Hulikal Ghati, Hosanagara, Balebare Ghati