ಐತಿಹಾಸಿಕ ಸಿಗಂದೂರು ಸೇತುವೆಯ ಇನ್ನೊಂದು ವಿಡಿಯೋ ವೈರಲ್

The construction work of the historic Sigandur bridge is nearing completion and now MP B Y Raghavendra has released a drone video of the bridge.

ಐತಿಹಾಸಿಕ ಸಿಗಂದೂರು ಸೇತುವೆಯ ಇನ್ನೊಂದು ವಿಡಿಯೋ ವೈರಲ್
Drone video of historic Sikandur bridge released

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 25, 2024

ಸಿಗಂದೂರು| ಐತಿಹಾಸಿಕ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯಗಳು ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದ್ದು,  ಇದೀಗ ಸಂಸದ ಬಿ ವೈ ರಾಘವೇಂದ್ರರವರು ಸೇತುವೆಯ ಡ್ರೋನ್ ವಿಡಿಯೋವನ್ನ ರಿಲೀಸ್ ಮಾಡಿದ್ದಾರೆ. ಅದರ ಕೆಲವು ಮನೋಹರ ಅದರ ದೃಶ್ಯಗಳು ನೋಡುಗರ ಕಣ್ಸಳೆಯುತ್ತಿದೆ. 

ಈ ಹಿಂದೆ ಸಂಸದ ಬಿ ವೈ ರಾಘವೇಂದ್ರರವರು ಸಿಗಂದೂರು ಸೇತುವೆಯ ಡ್ರೋನ್ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೀಗ ಆ ಸೇತುವೆಯ ಪೂರ್ಣ ಪ್ರಮಾಣದ ಡ್ರೋನ್ ವಿಡಿಯೋವನ್ನು  ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮುಕ್ತಾಯ ಹಂತಕ್ಕೆ ತಲುಪಿದ ಐತಿಹಾಸಿಕ ಸಿಗಂದೂರು ಸೇತುವೆಯ ಮನಮೋಹಕ ದೃಶ್ಯ  ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ. ಆ ವಿಡಿಯೋಗೆ ಮ್ಯೂಸಿಕ್ ಹಾಕಿ ಎಡಿಟ್ ‌ ಮಾಡಲಾಗಿದೆ. ಆ ಮ್ಯೂಸಿಕ್ನಲ್ಲಿ ಮೂಡಿಬಂದ ಡ್ರೋನ್ ವಿಡಿಯೋ ನೋಡುಗರಿಗೆ ವಿಭಿನ್ನವಾದ ಫೀಲ್ ನೀಡುತ್ತಿದೆ.

ಸುಮಾರು 2.13 ಕಿ.ಮೀ ಉದ್ದದವಿರುವ ಈ ಸೇತುವೆ, ದೇಶದ 7ನೇ ಅತಿದೊಡ್ಡ ಕೇಬಲ್ ಆಧಾರಿತ ಸೇತುವೆ  ಅಂತಾ ಕರೆಸಿಕೊಳ್ಳಲಿದೆ. ಸೇತುವೆ ಉದ್ಘಾಟನೆಯ ಬಗ್ಗೆ ಇತ್ತೀಚೆಗೆಷ್ಟೆ ಸಂಸದ ಬಿವೈ ರಾಘವೇಂದ್ರ ರವರು ಮಾತನಾಡಿದ್ದರು. ಸಿಗಂದೂರು ಸೇತುವೆ ಕಾಮಗಾರಿ 2025ರ ಮೇ ತಿಂಗಳಲ್ಲಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

SUMMARY | The construction work of the historic Sigandur bridge is nearing completion and now MP B Y Raghavendra has released a drone video of the bridge.

KEYWORDS | Sigandur bridge, B Y Raghavendra,   drone video,