ತುಂಗಾ ನದಿ ಭರ್ತಿ | ಆದರೂ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆ ಅನುಮಾನ | ಕಾರಣವೇನು
Drinking water supply to Shivamogga city will be disrupted |ಶಿವಮೊಗ್ಗದ ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ನೀಡಲಾಗಿದೆ. ಮಲೆನಾಡು ನ್ಯೂಸ್

SHIVAMOGGA | MALENADUTODAY NEWS | Jul 31, 2024
ತುಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ನದಿಗೆ ಇಳಿಸಿದ ನಗರದ ಕುಡಿಯುವ ನೀರಿನ ಪಂಪ್ ಸೆಂಟ್‌ಗಳನ್ನ ನಿಲ್ಲಿಸಲಾಗಿದ್ದು, ಇದರಿಂದ ನಗರದಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಏರುಪೇರಲಾಗಲಿದೆ ಅಂತಾ ಪ್ರಕಟಣೆ ನೀಡಲಾಗಿದೆ. ಅದರ ವಿವರ ಹೀಗಿದೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ನಗರದಲ್ಲಿ ನೀರು ಸರಬರಾಜು ವ್ಯತ್ಯಯ
ಶಿವಮೊಗ್ಗ : ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದ ಪಕ್ಕದಲ್ಲಿರುವ ತುಂಗಾನದಿಯ ಹೊರಹರಿವು ಹೆಚ್ಚಾಗಿದೆ.
ಸದ್ಯ ನದಿಯ ನೀರಿನ ಮಟ್ಟ 27 ಅಡಿಗಳಷ್ಟು ಇದೆ ಮತ್ತು ನೀರಿನ ಮಟ್ಟ ಹೆಚ್ಚಾಗುವ ಸಂಭವ ಇರುವುದರಿಂದ ನದಿಗೆ ಅಳವಡಿಸಿರುವ ಮೋಟಾರ್‌ಗಳನ್ನು ಸ್ಥಗಿತಗೊಳಿಲಾಗಿರುತ್ತದೆ.
ಆದ್ದರಿಂದ ನಗರದಲ್ಲಿ ನೀರು ಸರಬರಾಜು ವಿತರಣಾ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ