ಕುಶಾಲು ಮಾತನಾಡಿದ್ದ ಗೆಳೆಯ ಎಗರಿಸಿದ್ದ ಒಂದುವರೆ ಲಕ್ಷ | ಕೋಣಂದೂರು ನಿವಾಸಿಗೆ ಮರಳಿ ಸಿಕ್ತು ದುಡ್ಡು | ನಡೆದಿದ್ದೇನು?

Doddapet police station case 

ಕುಶಾಲು ಮಾತನಾಡಿದ್ದ ಗೆಳೆಯ ಎಗರಿಸಿದ್ದ ಒಂದುವರೆ ಲಕ್ಷ | ಕೋಣಂದೂರು ನಿವಾಸಿಗೆ ಮರಳಿ ಸಿಕ್ತು ದುಡ್ಡು | ನಡೆದಿದ್ದೇನು?
Doddapet police station case 

SHIVAMOGGA | MALENADUTODAY NEWS | Jul 14, 2024  

ನಂಬಿದ ಸ್ನೇಹಿತನೇ ಒಂದುವರೆ ಲಕ್ಷ ರೂಪಾಯಿ ಕದ್ದೋಯ್ದ ಪ್ರಕರಣವನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣದ ವಿವರ ಹೀಗಿದೆ.  

ದಿನಾಂಕ: 09-05-2024 ರಂದು ತಿಮ್ಮಪ್ಪ ಟಿ ಎನ್, 41 ವರ್ಷ, ವಾಸ ಕೋಣಂದೂರು ಎಂಬವರು ಶಿವಮೊಗ್ಗದ ವಿಆರ್‌ಎಲ್‌ ಟ್ರಾನ್ಸ್‌ಪೋರ್ಟ್‌ ಕಚೇರಿಗೆ ಬಂದಿದ್ದರು. ತಮ್ಮ ಅಂಗಡಿಗೆ ವಸ್ತುಗಳನ್ನು ತರಲು ಗೂಡ್ಸ್ ವಾಹನದಲ್ಲಿ ಬಂದಿದ್ದ ಅವರು ವಿಆರ್‌ಎಲ್‌ನಲ್ಲಿ ಪಾರ್ಸಲ್‌ ತರಲು ತೆರಳಿದ್ದರು. ಈ ವೇಳೆ ಅವರಿಗೆ ಅವರ ಸ್ನೇಹಿತರೊಬ್ಬರು ಸಿಕ್ಕಿದ್ದರು. ಅವರೊಂದಿಗೆ ಮಾತನಾಡಿ ತಿಮ್ಮಪ್ಪರವರು ತಮ್ಮ ಪಾರ್ಸಲ್‌ ಬಗ್ಗೆ ವಿಚಾರಿಸಲು ತೆರಳಿದ್ದಾರೆ. ಈ ವೇಳೇ ಗೂಡ್ಸ್‌ ವಾಹನದದಲ್ಲಿಟ್ಟಿದ್ದ 1,50,000/-ರೂಪಾಯಿಯನ್ನು ಅವರ ಸ್ನೇಹಿತ ಕದ್ದೊಯ್ದಿದ್ದ. ಸಿಸಿ ಕ್ಯಾಮರಾದಲ್ಲಿ ನೋಡಿ ಅವರ ಸ್ನೇಹಿತನಿಗೆ ಕರೆ ಮಾಡಿ ದುಡ್ಡು ವಾಪಸ್‌ ಕೊಡುವಂತೆ ಕೇಳಿದ್ದರು. ಆದರೆ ಕೊಡದ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸರಿಗೆ ದೂರು ತಿಮ್ಮಪ್ಪ ದೂರು ನೀಡಿದ್ದರು. 

ಈ ಸಂಬಂಧ  379 ಐಪಿಸಿ ಅಡಿಯಲ್ಲಿ ಕೇಸ್‌ ಆಗಿ,  ದೊಡ್ಡಪೇಟೆ ಪೊಲೀಸ್ ಠಾಣೆ ಪಿಐ ರವಿ ಪಾಟೀಲ್ ರವರ ನೇತೃತ್ವದಲ್ಲಿ, ನಾಗರಾಜ್ ಎಎಸ್ಐ, ಹೆಚ್ ಸಿ ರವರಾದ ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ್, ಸಿಪಿಸಿ ಚಂದ್ರನಾಯ್ಕ, ಗುರುನಾಯ್ಕ, ನಿತಿನ್, ಪುನೀತ್ರಾವ್  ಮತ್ತು ಪ್ರಕಾಶ್ ರನ್ನ ಒಳಗೊಂಡ ಟೀಂ ತನಿಖೆ ನಡೆಸ್ತಿತ್ತು. ಇದೀಗ ಟೀಂ ದೊಡ್ಡಪೇಟೆ ಆರೋಪಿ ನರಸಿಂಹಮೂರ್ತಿಯನ್ನ ಅರೆಸ್ಟ್‌ ಮಾಡಿದ್ದು ಆತನಿಂದ  1,30,000 ಹಣವನ್ನ ಜಪ್ತಿ ಮಾಡಿದೆ.  



Doddapet police station case