ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಗೆ ಆಘಾತ | ಹೊಟ್ಟೆಯಲ್ಲಿತ್ತು 10 ಕೆಜಿ ತೂಕದ ಗಡ್ಡೆ

Doctors at shikaripura government general hospital have successfully removed an ovarian tumour weighing approximately 10 kg from the stomach of a woman who was suffering from stomach pain. 

ಹೊಟ್ಟೆನೋವು ಎಂದು ಆಸ್ಪತ್ರೆಗೆ ಬಂದ ಮಹಿಳೆಗೆ ಆಘಾತ | ಹೊಟ್ಟೆಯಲ್ಲಿತ್ತು 10 ಕೆಜಿ ತೂಕದ ಗಡ್ಡೆ
Doctors at shikaripura government general hospital, have successfully removed an ovarian tumor,   stomach of a woman ,

 SHIVAMOGGA | MALENADUTODAY NEWS | ಮಲೆನಾಡು ಟುಡೆ 

Oct 9, 2024 |  ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯ ಹೊಟ್ಟೆಯಿಂದ ಅಂದಾಜು 10 ಕೆಜಿ ತೂಕದ ಅಂಡಾಶಯ ಗಡ್ಡೆಯನ್ನು ಶಿಕಾರಿಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. 

ಇಲ್ಲಿನ ನಿವಾಸಿ ಶಾಂತಮ್ಮ (65) ಎಂಬವರಿಗೆ ಕಳೆದ ಹಲವು ದಿನಗಳಿಂದ ಹೊಟ್ಟೆ ನೋವು ಭಾದಿಸುತ್ತಿತ್ತು. ಈ ನೋವು ಸಹಿಸಲಾಗದೆ, ಅವರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದರು. 

ಅವರನ್ನ ಪರೀಕ್ಷೆಗೆ ಒಳಪಡಿಸಿದಾಗ, ಅವರ ಹೊಟ್ಟೆಯಲ್ಲಿ ಅಂಡಾಶಯದ ಗಡ್ಡೆ ಇರುವುದು ಗೊತ್ತಾಗಿದೆ. ಈ ಸಂಬಂಧ  ಹಿರಿಯ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯ ಡಾ.ಶ್ರೀನಿವಾಸ್ ನೇತೃತ್ವದಲ್ಲಿ ಸತತ 4 ಗಂಟೆಯ ನಿರಂತರ ಶಸ್ತ್ರ ಚಿಕಿತ್ಸೆ ನಡೆಸಿ ಗಡ್ಡೆಯನ್ನು ಹೊರತೆಗೆದಿದ್ದಾರೆ. 

 

ಇದೀಗ ಮಹಿಳೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಶಸ್ತ್ರ ಚಿಕಿತ್ಸೆಯಲ್ಲಿ ಸ್ತ್ರೀರೋಗ ತಜ್ಞ ಡಾ.ಪ್ರಕಾಶ್, ಅರವಳಿಕೆ ತಜ್ಞ ಡಾ.ಸುರೇಶ್.ಎಲ್, ಪೂಜಾ, ಉಮಾ, ಭವ್ಯ ಹಾಗೂ ಸಹಾಯಕ ಯುವರಾಜ್, ದೇವರಾಜ್ ಸಹಕರಿಸಿದ್ದಾರೆ. 

SUMMARY  |   Doctors at shikaripura government general hospital have successfully removed an ovarian tumour weighing approximately 10 kg from the stomach of a woman who was suffering from stomach pain. 



KEYWORDS  |   Doctors at shikaripura government general hospital, have successfully removed an ovarian tumor,   stomach of a woman ,