ದಿನೇಶ್ ಗುಂಡೂರಾವ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ರಾಜಿನಾಮೆ ನೀಡಬೇಕು | ಬಿವೈ ವಿಜಯೇಂದ್ರ
A series of maternal deaths are taking place in the state due to the negligence of the state government and ministers
![ದಿನೇಶ್ ಗುಂಡೂರಾವ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ರಾಜಿನಾಮೆ ನೀಡಬೇಕು | ಬಿವೈ ವಿಜಯೇಂದ್ರ](https://malenadutoday.com/uploads/images/202501/image_870x_6778e5dc86fef.webp)
SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 4, 2025
ಶಿವಮೊಗ್ಗ | ರಾಜ್ಯದಲ್ಲಿ ಸರಣಿ ಬಾಣಂತಿ ಸಾವು ಪ್ರಕರಣಗಳು ಸಂಭವಿಸುತ್ತಿದೆ ಇದಕ್ಕೆ ರಾಜ್ಯ ಸರ್ಕಾರ ಹಾಗೂ ಸಚಿವರುಗಳ ನಿರ್ಲಕ್ಷ್ಯವೇ ಕಾರಣ ಆದ್ದರಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜಿನಾಮೆ ಕೊಡಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದರು.
ಇಂದು ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ 734 ಕ್ಕೂ ಹೆಚ್ಚು ಬಾಣಂತಿಯರು ಹಾಗೂ 1000 ಕ್ಕೂ ಹೆಚ್ಚು ನವಜಾತ ಶಿಶುಗಳ ಸವಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ 2 ತಿಂಗಳ ಹಿಂದೆ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಎಷ್ಟೋ ಜನರ ಜೀವ ಉಳಿಸಬಹುದಿತ್ತು. ಮೆಡಿಕಲ್ ಮಾಫಿಯಾ ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಪ್ರಕರಣವನ್ನು ಬಿಜೆಪಿ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ. ಅಷ್ಟೇ ಅಲ್ಲದೆ ಈ ವಿಚಾರವಾಗಿ ದಿನೇಶ್ ಗುಂಡೂರಾವ್ ಹಾಗು ಲಕ್ಷ್ಮೀ ಹೆಬ್ಬಾಳ್ಕರ್ ರಾಜಿನಾಮೆ ಕೊಡಬೇಕಾಗುತ್ತದೆ ಎಂದರು. ಹಾಗೆಯೇ ಬಾಣಂತಿ ಸಾವಿನ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಆಗ್ರಹಿಸಿದರು.
ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪುರುಷರಿಗೆ ಅದರ ಬರೆ ಖಚಿತ
ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಬಸ್ ಟಿಕೆಟ್ ದರ ಶೇ 15 ರಷ್ಟು ಏರಿಕೆ ಮಾಡಿದ್ದಾರೆ.ಇದಕ್ಕೆ ರಾಜ್ಯ ಸರ್ಕಾರದ ಶಕ್ತಿಯೋಜನೆಯೇ ಕಾರಣ. ಹಣವನ್ನು ಹೊಂದಿಸಲು ಸಾಧ್ಯವಾಗದ ಕಾರಣ ಸಾರಿಗೆ ಸಂಸ್ಥೆಗಳು ಸಾವಿರಾರು ಕೋಟಿ ನಷ್ಟವನ್ನು ಎದುರಿಸುತ್ತಿವೆ. ಸಾರಿಗೆ ಸಂಸ್ಥೆಯನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಿದ್ದರಾಮಯ್ಯನವರು ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿಗಳು ಆದ್ರೆ ಅವರಿಗೆ ಈಗ ಬಜೆಟ್ ಅನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಈಗಲಾದರೂ ಸಿದ್ಧರಾಮಯ್ಯನವರು ರಾಜ್ಯದ ಜನರ ಮುಂದೆ ಹಣಕಾಸಿನ ಪರಿಸ್ಥಿತಿಯನ್ನು ತೆರೆದಿಡಬೇಕು ಎಂದರು. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸಿಗುತ್ತಿದೆ ಆದರೆ ಪುರುಷರಿಗೆ ಅದರ ಬರೆ ಖಚಿತ ವಾಗಿದೆ ಎಂದರು.
SUMMARY | | A series of maternal deaths are taking place in the state due to the negligence of the state government and ministers
KEYWORDS | maternal, deaths, negligence, ministers, karnataka,