ನಾಲೆಗಳಿಗೆ ಯಾವಾಗಿನಿಂದ ಭದ್ರಾ ಡ್ಯಾಮ್‌ ನೀರು | ದಾವಣಗೆರೆ ರೈತರ ಡಿಮ್ಯಾಂಡ್‌ ಏನು?

Davangere farmers demand, water from Bhadra Dam

ನಾಲೆಗಳಿಗೆ ಯಾವಾಗಿನಿಂದ ಭದ್ರಾ ಡ್ಯಾಮ್‌ ನೀರು | ದಾವಣಗೆರೆ ರೈತರ ಡಿಮ್ಯಾಂಡ್‌ ಏನು?
Davangere farmers demand, water from Bhadra Dam

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 2, 2025 ‌‌ 

ಬೇಸಿಗೆ ಬೆಳೆಗೆ ಭದ್ರಾ ಅಣೆಕಟ್ಟೆಯಿಂದ ಭದ್ರಾ ನಾಲೆಗಳಿಗೆ ಇದೇ ಜನವರಿ 5ರಂದಲೇ ನೀರು ಹರಿಸುವಂತೆ ದಾವಣಗೆರೆ ಜಿಲ್ಲಾ ರೈತರ ಒಕ್ಕೂಟ ಒತ್ತಾಯಿಸಿದೆ. ಈ ಸಂಬಂಧ ಜಿಲ್ಲಾಡಳಿತ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ನೀಡಿದೆ.  

ಭದ್ರಾ ಜಲಾಶಯದಲ್ಲಿ ನೀರಿನ ಲಭ್ಯತೆಯಿಂದಾಗಿ ದಾವಣಗೆರೆ ಜಿಲ್ಲೆಯಲ್ಲಿ .60 ಲಕ್ಷ ಎಕರೆ ಪ್ರದೇಶದಲ್ಲಿ ಬತ್ತ ಬೆಳೆಯಲಾಗುತ್ತದೆ. ಭದ್ರಾ ಅಣೆಕಟ್ಟೆಯು ಜೀವನಾಡಿಯಾಗಿದೆ. ಜಿಲ್ಲೆಯ ಪ್ರಸ್ತುತ ರೈತರ ಬೇಸಿಗೆ ಹಂಗಾಮಿನಲ್ಲಿ ಬತ್ತ ಬೆಳೆಯುವ ಸಲುವಾಗಿ ಕೊಳವೆಬಾವಿ ಮತ್ತಿತರೆ ನೀರಿನ ಸೌಲಭ್ಯವಿರುವ ರೈತರು ಈಗಾಗಲೇ ಸಸಿ ಮಡಿ ತಯಾರಿಸಿ, ಬೀಜ ಚೆಲ್ಲಿದ್ದಾರೆ. ಉಳಿದ ರೈತರು ಸಸಿ ಮಡಿಗೆ ಬೀಜ ಚೆಲ್ಲಲು ನೀರಿನ ನೀರಿಕ್ಷೆಯಲ್ಲಿದ್ದಾರೆ. ಅಲ್ಲದೆ ಬೀಜ ಉಗ್ಗುವ ಮೂಲಕ ನೇರ ಬಿತ್ತನೆ ಮಾಡುವ ಚೆಲ್ಲುವ ಪದ್ಧತಿ ಅನುಸರಿಸಿಕೊಂಡು ಬಂದವರೂ ಸಹ ಕಾಲುವೆ ನೀರಿಗಾಗಿ ಕಾಯುತ್ತಿದ್ದಾರೆ. ಈ ಕಾರಣಕ್ಕೆ ಭದ್ರಾ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ.

SUMMARY |  Davangere farmers demand release of water from Bhadra Dam

KEY WORDS |  Davangere farmers demand, water from Bhadra Dam