ದಾವಣಗೆರೆ | LOVE ಟಾರ್ಚ್‌ರ್ ಕೊಟ್ಟ ಯುವಕನಿಗೆ ಮೂರು ತಿಂಗಳು ಜೈಲು ಶಿಕ್ಷೆ | 15 ಸಾವಿರ ದಂಡ
Davangere court sentenced the man who tortured the young woman to make love

SHIVAMOGGA | MALENADUTODAY NEWS | ಮಲೆನಾಡು ಟುಡೆ Jan 23, 2025
ಮಹತ್ವದ ಪ್ರಕರಣವೊಂದರಲ್ಲಿ ದಾವಣಗೆರೆ ಕೋರ್ಟ್ ಯುವಕನೊಬ್ಬನಿಗೆ 3 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂ ದಂಡ ವಿಧಿಸಿದೆ. ಈತನ ಯುವತಿಯೊಬ್ಬಳಿಗೆ ಪ್ರೀತಿಸುವಂತೆ ಪೀಡಿಸಿದ್ದಷ್ಟೆ ಅಲ್ಲದೆ ಜೀವ ಬೆದರಿಕೆ ಹಾಕಿದ್ದ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯುವಕನಿಗೆ ದಾವಣಗೆರೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ
ಸ್ಥಳೀಯ ವರದಿಗಳ ಪ್ರಕಾರ, ನವೀನ್ ಎಂಬಾತ ಯುವತಿಯೊಬ್ಬಳನ್ನ ಪ್ರೀತಿಸುವಂತೆ ಪೀಡಿಸುತ್ತಿದ್ದ. ಅಲ್ಲದೆ ನೀನು ಲವ್ ಮಾಡದಿದ್ದರೇ, ನಿನ್ನೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಇದಕ್ಕೂ ವಿರೋದಿಸಿದಾಗ ಯುವತಿಯನ್‌ನು ಎಳದಾಡಿದ್ದ. ಮೇಲಾಗಿ ತನ್ನ ತಂದೆಯ ಜೊತೆ ಹೋಗುತ್ತಿದ್ದಾಗ ಯುವತಿಗೆ ಲಾಂಗ್ ಬೀಸಿದ್ದ. ಇಷ್ಟೆಲ್ಲಾ ಮಾಡಿದ ಯುವಕನ ವಿರುದ್ಧ ಸಂತ್ರಸ್ತೆ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ಬಳಿ ಪೊಲೀಸರು ತನಿಖೆ ನಡೆಸಿ ಕೋರ್ಟ್ಗೆ ಚಾರ್ಚ್‌ಶೀಟ್ ಸಲ್ಲಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಸಂಬಂಧ ವಿಚಾರಣೆ ನಡೆದು ಇದೀಗ ಆರೋಪ ಸಾಬೀತಾಗಿದೆ. ಇನ್ನೂ ಪ್ರಸ್ತುತ ಪ್ರಕರಣದ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಆತನಿಗೆ ವಿಧಿಸಿದ ದಂಡದಲ್ಲಿ 10 ಸಾವಿರ ರೂಪಾಯಿ ಸಂತ್ರಸ್ತೆಗೆ ನೀಡುವಂತೆ ಕೋರ್ಟ್ ಸೂಚಿಸಿದೆ.
SUMMARY | Davangere court sentenced the man who tortured the young woman to make love
KEY WORDS | Davangere court, love torture, man torture girl for live,