ಇದೆಂತಹ ವಿದಿ | ಬಾಯ್ಲರ್ ಬಿದ್ದು ಬಾಲಕನ ಸಾವು
In Davanagere, boy died after a boiler drum collapsed on him at hostel, boiler drum collapsed on him at hostel.

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 5, 2025
ದಾವಣಗೆರೆ ಜಿಲ್ಲೆಯಲ್ಲಿ ನಡೆಯಬಾರದಂತಹ ದಾರುಣ ಘಟನೆಯೊಂದು ನಡೆದಿದೆ. ಅಲ್ಲದೆ ಈ ಘಟನೆ ಪೋಷಕ ವಲಯದಲ್ಲಿ ಆತಂಕ ಮೂಡಿಸುತ್ತಿದೆ.
ದಾವಣಗೆರೆ ಘಟನೆ
ಇಲ್ಲಿನ ಖಾಸಗಿ ವಸತಿ ಶಾಲೆಯ ಹಾಸ್ಟೆಲ್‌ನ ಮಹಡಿ ಮೇಲಿದ್ದ ಬಾಯ್ಲರ್ ಡ್ರಮ್ ಕುಸಿದು ಬಿದ್ದು ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. 11 ವರ್ಷದ ರಂಗನಾಥ್ ಮೃತ ಬಾಲಕ. ಈತನ ಐದನೇ ಕ್ಲಾಸ್ ಓದುತ್ತಿದ್ದ. ವಸತಿ ಶಾಲೆಯ ಹಾಸ್ಟೆಲ್‌ನಲ್ಲಿದ್ದ ಬಾಲಕರು ಚಳಿ ಹಿನ್ನೆಲೆಯಲ್ಲಿ ಮಹಡಿ ಮೇಲೆ ತೆರಳಿ ಬಾಯ್ಲರೆ ಒಲೆಯ ಬಳಿ ಕುಳಿತು ಬೆಂಕಿ ಕಾಯಿಸಸಿಕೊಳ್ಳುತ್ತಿದ್ದರು. ಈ ವೇಳೆ ಬಾಯ್ಲರ್ ಕುಸಿದು ಬಿದ್ದಿದೆ ಎನ್ನಲಾಗಿದೆ. ಘಟನೆ ಬೆನ್ನಲ್ಲೆ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ಸೇರಿಸದೆ ನಿರ್ಲಕ್ಷ್ಯ ವಹಿಸಲಾಗಿದೆ ಎನ್ನಲಾಗುತ್ತಿದೆ. ಗಾಯಗೊಂಡ ಬಾಲಕನನ್ನು ಮರುದಿನ ಆಸ್ಪತ್ರೆಗೆ ದಾಖಲಿಸಿದ್ದು, ಅಷ್ಟರಲ್ಲಿ ಬಾಲಕನ ಸ್ಥಿತಿ ಗಂಭೀರವಾಗಿದೆ. ಆನಂತರ ಬಾಲಕ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಕೆಟಿಜೆ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸ್ಥಳೀಯ ವರದಿ ಪ್ರಕಾರ, ಬಾಲಕನ ಪಕ್ಕೆಲುಬಿಗೆ ತೀವ್ರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಆತ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ.
SUMMARY | In Davanagere, a boy died after a boiler drum collapsed on him at hostel.
KEY WORDS | In Davanagere, boy died after a boiler drum collapsed on him at hostel, boiler drum collapsed on him at hostel.