ಶಿವಮೊಗ್ಗದ ಎರಡು ರೈಲ್ವೆ ನಿಲ್ದಾಣದಲ್ಲಿ ONE MINUTE STOP ವಿಸ್ತರಣೆ! ಡಿಟೇಲ್ಸ್
Continuation of temporary stoppage of trains at Arasalu & Kumsi , South Western Railway Arasalu and Kumsi stations , Train No. 16227/16228 Mysuru-Talguppa-Mysuru Daily Express, Train No. 16206/16205 Mysuru-Talguppa-Mysuru Daily Express, Kumsi stations,

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 23, 2025
ನೈರುತ್ಯ ರೈಲ್ವೆಇಲಾಖೆ ಶಿವಮೊಗ್ಗ ಜಿಲ್ಲೆಯ ಎರಡು ನಿಲ್ದಾಣಗಳಲ್ಲಿ ಒನ್ ಮಿನಿಟ್ ಸ್ಟಾಪ್ ಅಥವಾ ಒಂದು ನಿಮಿಷದ ನಿಲುಗಡೆಯನ್ನು ಇನ್ನಷ್ಟು ಮುಂದುವರಿಸಿದೆ. ಕುಂಸಿ ರೈಲ್ವೆ ನಿಲ್ದಾಣ ಹಾಗೂ ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಮೈಸೂರು ತಾಳಗುಪ್ಪ ಡೈಲಿ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆಯನ್ನು ಮುಂದಿನ ಆಗಸ್ಟ್ ತಿಂಗಳವರೆಗೂ ಮುಂದುರಿಸಲಾಗಿದೆ. ಆ ಬಗೆಗಿನ ಮಾಹಿತಿ ಇಲ್ಲಿದೆ
ಅರಸಾಳು ಮತ್ತು ಕುಂಸಿಯಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ
ನೈಋತ್ಯ ರೈಲ್ವೆಯು ಮೈಸೂರು-ತಾಳಗುಪ್ತ ಮಾರ್ಗದ ಪ್ರಯಾಣಿಕರ ಅನುಕೂಲಕ್ಕಾಗಿ, ಈ ಕೆಳಗಿನ ರೈಲುಗಳಿಗೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯ ಅವಕಾಶವನ್ನು ಮುಂದುವರಿಸಲಾಗಿದೆ.
1. ರೈಲು ಸಂಖ್ಯೆ 16227/16228 ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಈ ಹಿಂದೆ ಅರಸಾಳು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿತ್ತು, ಈ ಸೌಲಭ್ಯವನ್ನು 24.02.2025 ರಿಂದ 23.08.2025 ರವರೆಗೆ ಜಾರಿಯಾಗುವಂತೆ ಮುಂದುವರಿಸಲಾಗಿದೆ.
2. ರೈಲು ಸಂಖ್ಯೆ 16206/16205 ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಈ ಹಿಂದೆ ಅರಸಾಳು ಮತ್ತು ಕುಂಸಿ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿತ್ತು, ಈ ಸೌಲಭ್ಯವನ್ನು 24.02.2025 8 23.08.2025 ರವರೆಗೆ ಜಾರಿಯಾಗುವಂತೆ ಮುಂದುವರಿಸಲಾಗಿದೆ.
SUMMARY | Continuation of temporary stoppage of trains at Arasalu & Kumsi
KEY WORDS | Continuation of temporary stoppage of trains at Arasalu & Kumsi , South Western Railway Arasalu and Kumsi stations , Train No. 16227/16228 Mysuru-Talguppa-Mysuru Daily Express, Train No. 16206/16205 Mysuru-Talguppa-Mysuru Daily Express, Kumsi stations,