ಸೊರಬ ತಾಲೂಕಿನಲ್ಲಿ ನೀರಾವರಿ ಬ್ಯಾರೇಜ್‌ಗಳ ನಿರ್ಮಾಣ | ಸಚಿವರ ಮಹತ್ವದ ಮಾತು

These projects, taken up for the development of Varada river, will help in providing clean drinking water to the residents of 39 villages in the taluk and filling up tanks, bunds and canals. District in-charge minister Madhu Bangarappa said that the ground water level should increase.

ಸೊರಬ ತಾಲೂಕಿನಲ್ಲಿ ನೀರಾವರಿ ಬ್ಯಾರೇಜ್‌ಗಳ ನಿರ್ಮಾಣ | ಸಚಿವರ ಮಹತ್ವದ ಮಾತು
Construction of irrigation barrages in Soraba taluk launched

SHIVAMOGGA | MALENADUTODAY NEWS | ಮಲೆನಾಡು ಟುಡೆ

ಶಿವಮೊಗ್ಗ | ವರದಾನದಿಯ ಅಭಿವೃದ್ಧಿಗಾಗಿ ಕೈಗೆತ್ತಿ ಕೊಂಡಿರುವ ಈ ಯೋಜನೆಗಳಿಂದಾಗಿ ತಾಲೂಕಿನ 39 ಗ್ರಾಮಗಳ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು, ಕೆರೆ-ಕಟ್ಟೆ-ಕಾಲುವೆಗಳ ಭರ್ತಿ ಮಾಡಲು ಸಹಕಾರಿಯಾಗಲಿದೆ. ಅಲ್ಲದೆ ಅಂತರ್ಜಲ ಮಟ್ಟ ಹೆಚ್ಚಳವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಅವರು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಸೊರಬ ತಾಲೂಕಿನ ಕಡಸೂರು ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಕಾಗೋಡು, ತಡಗಳಲೆ, ಶುಂಠಿಕೊಪ್ಪ, ಕಡಸೂರು, ಚಿಕ್ಕಮಾಕೊಪ್ಪ ಮತ್ತು ದುಗ್ಲಿ ಗ್ರಾಮಗಲ್ಲಿ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. 

ಸೊರಬ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ವಿವಿಧ ಗ್ರಾಮಗಳಲ್ಲಿ ಹರಿಯುವ ವರದಾ ನದಿಗೆ ಅಡ್ಡಲಾಗಿ 53 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಸರಣಿ ಬ್ಯಾರೇಜ್‌ಗಳ ನಿರ್ಮಾಣ ಕಾಮಗಾರಿಗೆ ಕಡಸೂರಿನಲ್ಲಿ ಹಾಗೂ ಲಕ್ಕವಳ್ಳಿಯ ಜೈನ ಮಠದ ಸಮೀಪದಲ್ಲಿ ಸುಮಾರು 495 ಲಕ್ಷ ರೂ. ಗಳ ವೆಚ್ಚದಲ್ಲಿ ಪ್ರವಾಹದಿಂದ ಬಾದಿತ ಪ್ರದೇಶಕ್ಕೆ ತಡೆಗೋಡೆ ನಿರ್ಮಾಣ ಮತ್ತು ಇತರೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಅವರೊಂದಿಗೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಚಾಲನೆ ನೀಡಿದರು.

ರೈತರ ಹಿತ ಕಾಯುವ ಸಲುವಾಗಿ 900ಕೋಟಿ ಅಂದಾಜು ವೆಚ್ಚದ ದಂಡಾವತಿ ಯೋಜನೆಯ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೆ 600ಕೋಟಿ ರು. ಗಳ ಅಂದಾಜು ವೆಚ್ಚದಲ್ಲಿ 3 ಪಟ್ಟಣ ಪ್ರದೇಶ ಸೇರಿದಂತೆ 354 ಹಳ್ಳಿಗಳಿಗೆ ಶರಾವತಿಯಿಂದ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ಅತೀ ಶೀಘ್ರದಲ್ಲಿ ಸಾಕಾರಗೊಳ್ಳಲಿದೆ ಎಂದರು.ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ಕೃಷಿ ಭೂಮಿ ಹಸಿರಾಗಿ ನಳನಳಿಸಲು ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪನವರ ದೂರದೃಷ್ಟಿಯ ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಯೋಜನೆ ಕಾರಣವಾಗಿದೆ. ಇಂತಹ ಯೋಜನೆಗಳು ಇಂದಿಗೂ ಮುಂದುವರೆಯುತ್ತಿವೆ. ರಾಜ್ಯದ ಪ್ರತಿಯೊಬ್ಬರೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂಬುದು ಸಂತಸದ ಸಂಗತಿಯಾಗಿದೆ ಎಂದರು.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯುತ್ತಿರುವ ಎಲ್ಲಾ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದ ಅವರು ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಸಕಾಲದಲ್ಲಿ ಪಠ್ಯಪುಸ್ತಕ, ಶೂ-ಸಾಕ್ಸ್,ಗಳನ್ನ ಒದಗಿಸಲಾಗಿದೆಯಲ್ಲದೆ ಅಜೀಮ್ ಪ್ರೇಮ್ ಜಿ ಫೌಂಡೇಶನ್ ನ ಸಹಯೋಗದಲ್ಲಿ 1591 ಕೋಟಿ ಮೊತ್ತದ ನೆರವಿನೊಂದಿಗೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೌಷ್ಟಿಕ ಆಹಾರ, ರಾಗಿ ಮಾಲ್ಟ್, ಹಾಲು, ಮೊಟ್ಟೆಯನ್ನು ವಿತರಿಸಲಾಗುತ್ತಿದೆ. ಇದರೊಂದಿಗೆ ಶಾಲಾ ಕೊಠಡಿಗಳ ದುರಸ್ಥಿಗೂ ಗಮನಹರಿಸಲಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಣ್ಣ ನೀರಾವರಿ ಸಚಿವ ಎನ್. ಎಸ್. ಬೋಸರಾಜು ಅವರು ಮಾತನಾಡಿ, ಯಾವುದೇ ಭ್ರಷ್ಟಚಾರಗಳಿಗೆ ಅವಕಾಶವಿಲ್ಲದಂತೆ ರಾಜ್ಯದಲ್ಲಿ 52000 ಕೋಟಿ ವೆಚ್ಚದ ಸಹಸ್ರಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ರಾಜ್ಯದಲ್ಲಿ ಅತೀ ಹೆಚ್ಚು ಕೆರೆಗಳನ್ನು ಹೊಂದಿರುವ ಸೊರಬ ತಾಲೂಕಿನ ನದಿ, ನಾಲೆ, ಕೆರೆ ಕಟ್ಟೆ ಕಾಲುವೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಅಗತ್ಯ ಅನುದಾನವನ್ನು ಒದಗಿಸಲಾಗುವುದು ಎಂದರು. ತಾಲೂಕಿನಲ್ಲಿ ಪ್ರಸ್ತುತ ಕೈಗೊಂಡ ನೀರಾವರಿ ಯೋಜನೆಗಳನ್ನು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಲೋಕಾರ್ಪಣೆಗೊಳಿಸಲಾಗುವುದು ಎಂದರು.

SUMMARY | These projects, taken up for the development of Varada river, will help in providing clean drinking water to the residents of 39 villages in the taluk and filling up tanks, bunds and canals. District in-charge minister Madhu Bangarappa said that the ground water level should increase.

KEYWORDS | Varada river, development,  Madhu Bangarappa, soraba,