ಆ ಪಾಪದಲ್ಲಿ ಸಿಕ್ಕಿಕೊಂಡರಾ ಸಿಎಂ ಸಿದ್ದರಾಮಯ್ಯ? | ಚಾಮುಂಡೇಶ್ವರಿ ಕ್ಷಮಿಸಲ್ಲವೆಂದಿದ್ದೇಕೆ ಕೆಎಸ್ ಈಶ್ವರಪ್ಪ?
Cm Siddaramaiah ks eshwarappa , ಕೆಎಸ್ ಈಶ್ವರಪ್ಪ, ಸಿಎಂ ಸಿದ್ದರಾಮಯ್ಯ,
SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 28, 2024 | ಹಿಂದುತ್ವ ತುಳಿಯಬೇಡಿ, ಹಿಂದುತ್ವ ರಕ್ಷಣೆ ಮಾಡಿ, ಸಿದ್ದರಾಮಯ್ಯ ಈ ಪಾಪದಲ್ಲೇ ಸಿಕ್ಕಿ ಹಾಕಿಕೊಂಡಿರೋದು ಎಂದು ಕೆ.ಎಸ್ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಾಗಿದೆ. ಮುಖ್ಯಮಂತ್ರಿಗಳು ನೈತಿಕ ಹೊಣೆಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಗಣಪತಿ ಮೆರವಣಿಗೆಯಲ್ಲಿ ಗಲಾಟೆ ನಡೆಯುತ್ತಿವೆ. ಮಸೀದಿಯಿಂದ ತಲ್ವಾರ್, ಮಚ್ಚು ಬರುತ್ತಿವೆ. ಆದರೆ ಗಣಪತಿ ಪ್ರತಿಷ್ಠಾಪನೆ ಮಾಡಿದವರ ಮೇಲೆ ಕೇಸ್ ದಾಖಲಾಗುತ್ತಿವೆ, ಗಣಪತಿ ಕೂರಿಸಿದವರು ಎ1, ಎ2 ಆರೋಪಿಗಳಾಗುತ್ತಿದ್ದಾರೆ
ಸಿದ್ದರಾಮಯ್ಯ ಈ ಪಾಪದಲ್ಲೇ ಸಿಕ್ಕಿ ಹಾಕಿಕೊಂಡಿರೋದು ಎಂದು ಈಶ್ವರಪ್ಪ ಗಂಭೀರವಾಗಿ ಆರೋಪಿಸಿದ್ದಾರೆ.
ಹಿಂದುತ್ವ ತುಳಿಯಬೇಡಿ, ಹಿಂದುತ್ವ ರಕ್ಷಣೆ ಮಾಡಿ. ಹಿಂದುತ್ವ ತುಳಿಯುವುದು ಕಾಂಗ್ರೆಸ್ ನೀತಿ, ಸಿದ್ದರಾಮಯ್ಯ, ಡಿಕೆಶಿ ನೀತಿ ಎಂದು ಹೇಳಿದ ಈಶ್ವರಪ್ಪ, ಈ ನೀತಿ ಚಾಮುಂಡೇಶ್ವರಿ ತಾಯಿ ಒಪ್ಪಲ್ಲ ಎಂದು ಹೇಳಿದ್ದಾರೆ. ಹಿಂದುತ್ವ, ಗೋವುಗಳ ಸಂರಕ್ಷಣೆ ಮಾಡಿದರೆ ಚಾಮುಂಡೇಶ್ವರಿ ತಾಯಿ ನಿಮ್ಮ ಸಿಎಂ ಸ್ಥಾನ ಉಳಿಸಿಕೊಡುತ್ತಾಳೆ.
ಗೋವುಗಳ ಕಳವು ನಡೆಯುತ್ತಿದೆ.ಗೋವು ಕಳ್ಳರ ವಿರುದ್ದ ಕ್ರಮ ಇಲ್ಲ. ಗೋವು ಕಳ್ಳರ ಹಿಡಿದರೆ ಮುಸ್ಲಿಂರ ಓಟು ಸಿಗಲ್ಲ ಅಂತ ಒಲೈಕೆ ಮಾಡುತ್ತಿದ್ದಾರೆ. ಮುಸ್ಲಿಂರು ಹಿಂದುಗಳು ಅಣ್ಣ ತಮ್ಮಂದಿರ ರೀತಿ ಇದ್ದೇವೆ. ನೀವೇ ಎತ್ತಿ ಕಟ್ಟುತ್ತಿರೋದು.ದೇಶದ್ರೊಹಿ ಮುಸ್ಲಿಂಮರು ಈ ಕೃತ್ಯಗಳನ್ನು ಮಾಡತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.
ಸಿಎಂ ವಿರುದ್ಧದ ಎಫ್.ಐ.ಆರ್ ಬಗ್ಗೆ ಮಾತನಾಡಿದ ಈಶ್ವರಪ್ಪ, ಕೋರ್ಟ್ ತೀರ್ಪಿಗೆ ಯಾರು ದೊಡ್ಡವರಲ್ಲ ಸಿಎಂ ನ್ಯಾಯಾಲಯದ ಆದೇಶ ಪಾಲಿಸಬೇಕು. ಸತ್ಯ ಮೇವ ಜಯತೇ ನಮಗೆ ನ್ಯಾಯ ಸಿಗುತ್ತೆ ಅಂತಾ ಸಿದ್ದರಾಮಯ್ಯ ಬಂದ್ರು. ಕೋರ್ಟ್ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಆದೇಶ ಕೊಟ್ಡಿದ್ದಾರೆ. ಅವರು ತಪ್ಪಿತಸ್ಥರೆಂದು ಗೊತ್ತಾಗಿದೆ. ತಪ್ಪಿತಸ್ಥರಲ್ಲ ಅಂತಾ ಕ್ಲೀನ್ ಚಿಟ್ ತಗೊಂಡು ಬನ್ನಿ. ರಾಜ್ಯದ ಜನರಿಗೆ ನೀವು ತಪ್ಪಿತಸ್ಥರೆಂದು ಸ್ಪಷ್ಟವಾಗಿ ಗೊತ್ತಾಗಿದೆ. ನಿಮ್ಮ ಶ್ರೀಮತಿ ಮುಗ್ದೆ ಆ ತಾಯಿ ಎಂದು ಹೊರಗೆ ಬಂದವರಲ್ಲ. ಆ ತಾಯಿಗೆ ಅನ್ಯಾಯ ಆಗಬಾರದು. ನೀವು ಅವರ ಹತ್ತಿರ ಸಹಿ ಮಾಡಿಸಿಕೊಂಡಿದ್ದೀರಾ ಎಂದು ಈಶ್ವರಪ್ಪ ಹೇಳಿದರ
ನಾನು ಸಹ ಏನು ತಪ್ಪು ಮಾಡಿರಲಿಲ್ಲ. ನನ್ನ ಮೇಲೆ ಆಪಾದನೆ ಮಾಡಿದರು.ಡಿಕೆಶಿ ಮತ್ತು ಸಿದ್ದರಾಮಯ್ಯ ಹಗಲು ರಾತ್ರಿ ಧರಣಿ ಮಾಡಿದರು. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕ್ಲಿನ್ ಚಿಟ್ ತಗೊಂಡೆ, ನಿಮಗೊಂದು ಕಾನೊನು ನಮಗೊಂದು ಕಾನೊನು ಇದೆಯೇ ಈ ದೇಶದಲ್ಲಿ. ನಿಮಗು ಅದೇ ಕಾನೊನು, ನನಗೂ ಅದೇ ಕಾನೊನು.ನನ್ನ ವಿರುದ್ದ ತನಿಖೆ ನಡೆದು ನಾನು ತಪ್ಪಿತಸ್ಥನಲ್ಲ ಅಂತಾ ಹೊರಗೆ ಬಂದೆ, ನೀವು ಹಾಗೆಯೇ ತನಿಖೆ ಎದುರಿಸಿ. ತಪ್ಪಿತಸ್ಥರಲ್ಲದಿದ್ದರೆ ತಪ್ಪಿತಸ್ಥರಲ್ಲ ಅಂತಾ ಹೊರಗೆ ಬನ್ನಿ ಎಂದು ಈಶ್ವರಪ್ಪ ಸವಾಲು ಹಾಕಿದ್ದಾರೆ.