ಸಿಎಂ ಎಲ್ಲರಿಗೂ ಸಮಾನತೆಯ ಅವಕಾಶ ನೀಡಲು ಶ್ರಮಿಸಿದ್ದಾರೆ | ಮಧು ಬಂಗಾರಪ್ಪ
CM Siddaramaiah has presented an experienced state budget and has worked hard to provide equal opportunity to all.

SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 8, 2025
ಸಿ ಎಂ ಸಿದ್ದರಾಮಯ್ಯನವರು ಅನುಭವಯುತ ರಾಜ್ಯ ಬಜೆಟ್‌ನ್ನು ಮಂಡಿಸಿದ್ದು, ಎಲ್ಲರಿಗೂ ಸಮಾನತೆಯ ಅವಕಾಶ ನೀಡಲು ಶ್ರಮಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಇಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಶಿಕ್ಷಣ ಇಲಾಖೆ ಹೆಚ್ಚು ಒತ್ತು ನೀಡಿರುವುದು ಎದ್ದು ಕಾಣುತ್ತಿದೆ. ಅವರ ಬಳಿ ನಾವು ಮನವಿ ಮಾಡಿದ ಎಲ್ಲಾ ಬೇಡಿಕೆಗಳಿಗೂ ಅನುದಾನ ನೀಡಿದ್ದಾರೆ. ನಮ್ಮ ಶಿಕ್ಷಣ ಇಲಾಕೆಯಲ್ಲಿ ಪರೀಕ್ಷೆಗೆ ಸಂಬಂಧಿಸಿದಂತೆ ಅನೇಕ ಮಾರ್ಪಾಡುಗಳನ್ನು ತಂದು ಪರೀಕ್ಷೆಯ ಪಾವಿತ್ರೈತೆಯನ್ನು ಕಾಪಾಡಿದ್ದೇವೆ. ಇನ್ಮುಂದೆ ಫೇಶಿಯಲ್ ಹಾಜರಾತಿಯನ್ನು ಜಾರಿಗೆ ತರುತ್ತಿದ್ದೇವೆ. ಈ ಬಾರಿ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಲು ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಲಾಗುವುದು. ಎಲ್‌ಕೆಜಿಯಿಂದ ಪಿಯುವರೆಗೆ ಕೆಪಿಎಸ್ ಶಾಲೆಗಳಲ್ಲಿ ಪ್ರಾರಂಭಿಸಲಾಗುವುದು. ಕಲ್ಯಾಣ ಕರ್ನಾಟಕದಲ್ಲಿ ಐದು ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗುವುದು. ನಾಲ್ಕು ಸಾವಿರ ಕೊಠಡಿ ನಿರ್ಮಾಣಕ್ಕೆ ಅನುದಾನ ದೊರೆತಿದೆ. ಶಾಲೆಗಳಲ್ಲಿ ಅಲ್ಯೂಮಿನಿಯಂ ಪಾತ್ರೆ ಬದಲಾಗಿ ಬೇರೆ ಪಾತ್ರೆಗಳನ್ನು ನೀಡಲಾಗುವುದು. ಅಭಿವೃದ್ಧಿಗೆ 80 ಸಾವಿರ ಕೋಟಿ ಮೀಸಲಿಟ್ಟ ಸಿಎಂಗೆ ಧನ್ಯವಾದ ಹೇಳುತ್ತೇನೆ ಎಂದರು.
8ನೇ ತರಗತಿಯಿಂದ ಸ್ಕಿಲ್ ಅಟ್ ಸ್ಕೂಲ್ ಪ್ರಾರಂಭಿಸಲಾಗುವುದು. ಕಡಿಮೆ ಮಕ್ಕಳಿರುವ ಶಾಲೆಗಳಿಗೆ ಸುತ್ತಲಿನ ಮಕ್ಕಳನ್ನು ಸಾರಿಗೆ ಸೌಕರ್ಯ ನೀಡಿ ಕರೆ ತರಲಾಗುವುದು. ಗ್ರೇಸ್ ಮಾರ್ಕ್ ನೀಡಿದ್ದು ನನ್ನಿಂದ ತಪ್ಪಾಗಿದೆ. ಗ್ರೇಸ್ ಮಾರ್ಕ್ಸ್ ಇರುವುದಿಲ್ಲ ಎಂದರು.
SUMMARY | CM Siddaramaiah has presented an experienced state budget and has worked hard to provide equal opportunity to all.
KEYWORDS | CM Siddaramaiah, state budget, equal opportunity, madhu bangarappa,