ಜಿಂಕೆ ಬೇಟೆಯಾಡಿ, ಕಾರಲ್ಲಿ ಸಾಗಿಸ್ತಿದ್ದವರಿಗೆ ಶಾಕ್‌ | ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಐವರು ಅರೆಸ್ಟ್

Chikkamagaluru forest staff arrests deer poachers

ಜಿಂಕೆ ಬೇಟೆಯಾಡಿ, ಕಾರಲ್ಲಿ ಸಾಗಿಸ್ತಿದ್ದವರಿಗೆ  ಶಾಕ್‌ | ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಐವರು ಅರೆಸ್ಟ್
Chikkamagaluru forest ,deer poachers , ಜಿಂಕೆ ಬೇಟೆ, ಚಿಕ್ಕಮಗಳೂರು, ಅರಣ್ಯ ಇಲಾಖೆ

SHIVAMOGGA | MALENADUTODAY NEWS | Aug 13, 2024  ಮಲೆನಾಡು ಟುಡೆ  

ಖಾಸಗಿ ಎಸ್ಟೇಟ್‌ ಒಂದರಲ್ಲಿ ಜಿಂಕೆಯನ್ನ ಶಿಕಾರಿ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ತಂಡವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳು (Bhadra Wildlife Division) ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ. 

ಹೆಬ್ಬೆ ಅರಣ್ಯ ವಲಯದ ಲಿಮಿಟ್‌ನಲ್ಲಿ ಬರುವ ಚಿಕ್ಕಮಗಳೂರು (Chikkamagaluru) ತಾಲ್ಲೂಕು ಕೋಡಿ ಗ್ರಾಮದಲ್ಲಿ ಆಗಸ್ಟ್‌ 10 ರಂದು ಚುಕ್ಕಿ ಜಿಂಕೆ (Spotted deer)ಯನ್ನ ಬೇಟೆಯಾಡಲಾಗಿತ್ತು. ಈ ಬಳಿಕ ಅದನ್ನು ಕಾರಿನಲ್ಲಿ ಸಾಗಿಸಲು ಆರೋಪಿಗಳು ಯತ್ನಿಸಿದ್ದಾರೆ. ಈ ವೇಳೆ ಭದ್ರಾ ವನ್ಯಜೀವಿ ವಿಭಾಗದ ಬೇಟೆ ತಡೆ ಶಿಬಿರದ ಸಿಬ್ಬಂದಿಗಳು ( anti-poaching camp of the Bhadra Wildlife Division) ಇದನ್ನ ಗಮನಿಸಿದ್ದಾರೆ. 

ಅರಣ್ಯ ಇಲಾಖೆ

ಅನುಮಾನಗೊಂಡು ವಾಹನವನ್ನು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅದರಲ್ಲಿ ಸಿಂಗಲ್ ಬ್ಯಾರೆಲ್‌ ಗನ್‌ ಹಾಗು ಜಿಂಕೆಯ ಅವಶೇಷ ಇರುವುದು ಗೊತ್ತಾಗಿದೆ. ತಕ್ಷಣವೇ ವಾಹನದಲ್ಲಿದ್ದ ಐವರನ್ನ ಅರೆಸ್ಟ್‌ ಮಾಡಿದ್ದಾರೆ. ಐವರನ್ನ ಭಾನುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ನಿನ್ನೆ ದಿನ ಈ ಬಗ್ಗೆ ಅರಣ್ಯ ಇಲಾಖೆಯಿಂದ ಮಾಹಿತಿ ಹೊರಬಿದ್ದಿದೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ