ಶಿವಮೊಗ್ಗ, ಚಿಕ್ಕಮಗಳೂರು | ಎರಡು ದಿನ ಭಾರೀ ಮಳೆ | ಯಲ್ಲೋ ಅಲರ್ಟ್‌

ellow alert has been sounded for Chikkamagaluru, Shivamogga, Mysuru and Mandya districts

ಶಿವಮೊಗ್ಗ, ಚಿಕ್ಕಮಗಳೂರು | ಎರಡು ದಿನ ಭಾರೀ ಮಳೆ | ಯಲ್ಲೋ ಅಲರ್ಟ್‌
  IMD Bangalore ,yellow alert, Chikkamagaluru, Shivamogga, Mysuru and Mandya districts

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 14, 2024 

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಎರಡು ದಿನ ಯಲ್ಲೋ ಅಲರ್ಟ್‌ ನೀಡಲಾಗಿದೆ. ಇವತ್ತು ಈ ಎರಡು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ನಾಳೆ ಹಾಗೂ ನಾಡಿದ್ದು ಶುಕ್ರವಾರ, ಶನಿವಾರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತ ಸಾಗಿಬರುತ್ತಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಮಳೆಯಾಗಲಿದೆ  ಎಂದು ಹವಾಮಾನ ಇಲಾಖೆ ಹೇಳಿದೆ. 

 

ಇವತ್ತು ಚಾಮರಾಜನಗರ, ಮೈಸೂರು, ಮಂಡ್ಯ, ಕೊಡಗು, ರಾಮನಗರ ಧಾರವಾಡ, ಗದಗ, ಕೊಪ್ಪಳ, ಬೆಳಗಾವಿಯಲ್ಲೂ ಹಾಗೂ ಕರಾವಳಿ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗಲಿದೆ. 

ನಾಳೆದಿನ  ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಮತ್ತು ಮಂಡ್ಯ, ಧಾರವಾಡ, ಗದಗ, ಕೊಪ್ಪಳ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಭಾರೀ ಮಳೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ

SUMMARY | A yellow alert has been sounded for Chikkamagaluru, Shivamogga, Mysuru and Mandya districts





KEYWORDS |   IMD Bangalore ,yellow alert, Chikkamagaluru, Shivamogga, Mysuru and Mandya districts