ಹೀಗೆ ಮೋಸ ಹೋಗುವುದಿಕ್ಕಿಂತ ಮದುವೆಯಾಗದಿದ್ದರೇ ಉತ್ತಮ | ಶಿವಮೊಗ್ಗ ಮಹಿಳೆ ಸೇರಿ 7 ಮಂದಿ ಕೇಸ್‌ | 4 ಲಕ್ಷ ವಂಚನೆ

woman from Shivamogga and a broker gang duped a young man from Bagalkot. Cheating in the name of marriage, FIR filed at Mudola police station

ಹೀಗೆ ಮೋಸ ಹೋಗುವುದಿಕ್ಕಿಂತ ಮದುವೆಯಾಗದಿದ್ದರೇ ಉತ್ತಮ | ಶಿವಮೊಗ್ಗ ಮಹಿಳೆ ಸೇರಿ 7 ಮಂದಿ ಕೇಸ್‌ | 4 ಲಕ್ಷ ವಂಚನೆ
woman from Shivamogga , broker gang duped a young man, Bagalkot Cheating in the name of marriage, FIR filed at Mudhol police station

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 5, 2025 ‌‌ 

ಶಿವಮೊಗ್ಗ ಜಿಲ್ಲೆಯ ಮಹಿಳೆಯ ವಿರುದ್ಧ ಮದುವೆಯಾಗಿ ಮೋಸ ಮಾಡಿದ ಆರೋಪದ ಅಡಿಯಲ್ಲಿ ಬಾಗಲಕೋಟೆಯ ಮುದೋಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ಪ್ರಕರಣದ ವಿವರ

ಮುಧೋಳದ ಸೋಮಶೇಖ‌ರ್ ಎಂಬವರಿಗೆ ವಿವಾಹವಾಗಿರಲಿಲ್ಲ. ಇವರು ಬ್ರೋಕರ್‌ ಒಬ್ಬರ ಸಂಪರ್ಕ ಮಾಡಿದ್ದರು. ಅವರು, ಶಿವಮೊಗ್ಗ ಜಿಲ್ಲೆಯ ಮಹಿಳೆಯೊಬ್ಬರನ್ನ ಕರೆತೆಂದು ಇಲ್ಲಿನ ಕಾಳಿಕಾದೇವಿ ದೇವಸ್ಥಾನದಲ್ಲಿ ಮದುವೆ ಮಾಡಿಸಿದ್ದರು. ಮದುವೆ ಮಾಡಿಸಿದ್ದಕ್ಕೆ ಪ್ರತಿಯಾಗಿ ₹4 ಲಕ್ಷ ವನ್ನು ಮದುವೆ ಮರುದಿನವೇ ಬ್ರೋಕರ್‌ಗಳು ಪಡೆದಿದ್ದರು. ಆನಂತರ ಮದುವೆ ನಡೆದು ಒಂದು ತಿಂಗಳಿನಲ್ಲಿ ಶಿವಮೊಗ್ಗ ಜಿಲ್ಲೆಯ ಮಹಿಳೆ ಎಸ್ಕೇಪ್‌ ಆಗಿದ್ದಾಳೆ. ಹೀಗಾಗಿ ಅನುಮಾನಗೊಂಡು ಸೋಮಶೇಖರ್‌ ವಿಚಾರಿಸಿದಾಗ, ಆತ ಮೋಸ ಹೋಗಿರುವುದು ಗೊತ್ತಾಗಿದೆ. ಆದಾಗ್ಯು ತಾವು ಕೊಟ್ಟ ಹಣವನ್ನ ವಾಪಸ್‌ ಕೊಡುವಂತೆ ಕೇಳಿದ್ದಾನೆ. ಅದಕ್ಕೂ ನಿರಾಕರಿಸಿದಾಗ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ನಡುವೆ ಶಿವಮೊಗ್ಗ ಜಿಲ್ಲೆಯ ಮಹಿಳೆಗೆ ಈಗಾಗಲೇ ಎರಡು ಮದುವೆಯಾಗಿರುವುದು ಗೊತ್ತಾಗಿದೆ. 

ಸದ್ಯ ಮಹಿಳೆ ಸೇರಿ ಎಳು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಡುತ್ತಿದ್ದಾರೆ. ವಿಚಾರದ ಬಗ್ಗೆ ಮಾತನಾಡಿರುವ ಬಾಗಲಕೋಟೆ ಎಸ್‌ಪಿ ಅಮರನಾಥ ರೆಡ್ಡಿ, ಮದುವೆ ಮಾಡಿಸಿ ಹಣ ಹೊಡೆಯುವ ಗ್ಯಾಂಗ್‌ ಇದ್ದು,  ಬೆಳಗಾವಿ, ರಾಮದುರ್ಗ, ಶಿವಮೊಗ್ಗ, ಧಾರವಾಡ ಮೂಲದ ಆರೋಪಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಈ ಸಂಬಂಧ ತನಿಖೆ ನಡೆಸ್ತಿದ್ದು, ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ. 

SUMMARY |  A woman from Shivamogga and a broker gang duped a young man from Bagalkot. Cheating in the name of marriage, FIR filed at Mudola police station

KEY WORDS | woman from Shivamogga , broker gang duped a young man, Bagalkot Cheating in the name of marriage, FIR filed at Mudhol police station