ಚಾವ ಓಟಿಟಿ ರಿಲೀಸ್ ಡೇಟ್ ಫಿಕ್ಸ್ | ಕನ್ನಡದಲ್ಲೂ ರಿಲೀಸ್ ಆಗುತ್ತಾ
Vicky Kaushal and Rashmika Mandanna starrer Chava is all set to hit the ott on April 11.

SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 13, 2025
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಚಾವ ಚಿತ್ರ ಇದೇ ಏಪ್ರಿಲ್ 11 ರಂದು ಓಟಿಟಿ ಯಲ್ಲಿ ಬಿಡುಗಡೆಗೆ ಸಿದ್ದವಾಗಿದೆ.
ಈ ಚಿತ್ರದ ಪ್ರಸಾರದ ಹಕ್ಕನ್ನು ಪ್ರಸಿದ್ಧ ಓಟಿಟಿ ಪ್ಲಾಟ್ಫಾರ್ಮ್ ಗಳಲ್ಲಿ ಒಂದಾದ ನೆಟ್ಪ್ಲಿಕ್ಸ್ ಹೊಂದಿದ್ದು, ಈ ಚಿತ್ರ ತಮಿಳ್ ತೆಲುಗು ಹಿಂದಿ ಭಾಷೆಯಲ್ಲಿ ರಿಲೀಸ್ ಆಗಲಿದೆ. ಸಂಬಾಜಿ ಮಹಾರಾಜರ ಜೀವನಾದರಿತ ಚಿತ್ರದಲ್ಲಿ ವಿಕ್ಕಿ ಕೌಶಲ್ ಸಂಭಾಬಜಿ ಮಹಾರಾಜರಾಗಿ ಹಾಗೂ ರಶ್ಮಿಕ ಮಂದಣ್ಣ ಯೇಸುಬಾಯಿ ಭೋಸ್ಸಾಲೆ ಪಾತ್ರದಲ್ಲಿ ಅಭಿನಯಿಸಿದ್ದರು. ಇವರಿಬ್ಬರ ನಟನೆಗೆ ಪ್ರೇಕ್ಷಕ ವರ್ಗ ಬಹುಪರಾಕ್ ಎಂದಿತ್ತು. ಅಷ್ಟು ನೈಜ್ಯವಾಗಿ ಇಬ್ಬರು ಸಹ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದರು. ಸುಮಾರು 130 ಕೋಟಿ ವೆಚ್ಚದಲ್ಲಿ ತಯಾರದ ಈ ಚಿತ್ರ ವಿಶ್ವದಾದ್ಯಂತ ಬರೊಬ್ಬರಿ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದೀಗ 2 ತಿಂಗಳ ಬಳಿಕ ಏಪ್ರಿಲ್ 11 ರಂದು ಈ ಚಿತ್ರ ಓಟಿಟಿಯಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು. ಚಿತಮಂದಿರಗಳಲ್ಲಿ ಈ ಚಿತ್ರವನ್ನು ಮಿಸ್ ಮಾಡಿಕೊಂಡವರು ಮನೆಯಲ್ಲೇ ಕೂತು ಚಿತ್ರವನ್ನು ವೀಕ್ಷಿಸಬಹುದು. ಈ ಚಿತ್ರ ಇದೀಗ ಮೂರು ಭಾಷೆಯಲ್ಲಿ ಮಾತ್ರ ಬಿಡುಗಡೆಗೆ ಸಿದ್ದವಾಗಿದ್ದು, ಕನ್ನಡ ಹಾಗು ಮಲಯಾಳಂ ಭಾಷೆಯಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ನೋಡಬೇಕಿದೆ.
SUMMARY | Vicky Kaushal and Rashmika Mandanna starrer Chava is all set to hit the ott on April 11.
KEYWORDS | ott, netflix, Vicky Kaushal, Rashmika Mandanna, Chava,