ಶಿವಮೊಗ್ಗದಲ್ಲಿ ಕಾರ್ಗೋ ಪ್ಲೈಟ್ ಹಾರಾಟ | ಸಂಸದರು ಕೊಟ್ಟು ಐದು ಅಪ್‌ಡೇಟ್ಸ್ | ಗುಡ್ ನ್ಯೂಸ್
Cargo flights to start soon at Shivamogga airport. Night landing, visibility problem, Shivamogga airport, MP BY Raghavendra
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿವಿಧ ಕಾಮಗಾರಿಗಳ ಬಗ್ಗೆ ಸಂಸದ ಬಿವೈ ರಾಘವೇಂದ್ರ (B.Y.Raghavendra) ಮತ್ತಷ್ಟು ಅಪ್‌ಡೇಟ್ ನೀಡಿದ್ದಾರೆ ಅದರ ವಿವರಗಳನ್ನ ಗಮನಿಸುವುದಾದರೆ, ನಿನ್ನೆ ದಿನ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮುಂದಿನ ಒಂದುವರೆ ಎರಡು ತಿಂಗಳಿನಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ (Shivamogga Airport) ಕಾರ್ಗೋ ವಿಮಾನಗಳು (Cargo flight) ಹಾರಾಟ ಆರಂಭಿಸಲಿವೆ ಎಂದು ತಿಳಿಸಿದ್ದಾರೆ.
ಇದಷ್ಟೆ ಅಲ್ಲದೆ ವಿಮಾನ ನಿಲ್ದಾಣದಲ್ಲಿ ವಿಸಿಬಿಲಿಟಿ ಸಮಸ್ಯೆ ಕ್ಲಿಯರ್ ಆಗಿದೆ. ವಿಮಾನಗಳ ಹಾರಾಟ ಸುಗಮವಾಗಿದೆ. ಅಲ್ಲದೆ ಇದುವರೆಗಿನ ಒಂದು ಮಾಹಿತಿ ಪ್ರಕಾರ, ಕಳೆದ ಒಂದು ವರ್ಷದಲ್ಲಿ 8500ಕ್ಕೂ ಹೆಚ್ಚು ಪ್ರವಾಸಿಗರು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಓಡಾಡಿದ್ದಾರೆ ಎಂದು ತಿಳಿಸಿದ್ದಾರೆ. ಈ ಅವಧಿಯಲ್ಲಿ ಮೈಸೂರು ವಿಮಾನ ನಿಲ್ದಾಣದಿಂದ 7500 ಪ್ರವಾಸಿಗರು ಮಾತ್ರ ಓಡಾಡಿದ್ದು, ಶಿವಮೊಗ್ಗದಲ್ಲಿ ಹೆಚ್ಚು ಜನರು ಪ್ಲೈಟ್‌ನಲ್ಲಿ ಓಡಾಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಇನ್ನೆರಡು ತಿಂಗಳಿನಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಲಭ್ಯವಾಗಲಿದೆ ಎಂದು ತಿಳಿಸಿದ ಸಂಸದರು ಮುಂಬೈ ವಿಮಾನ ನಿಲ್ದಾಣದಲ್ಲಿ ಟ್ರಾಫಿಕ್ ಕ್ಲಿಯರೆನ್ಸ್ ಲಭಿಸಿಲ್ಲ. ಹಾಗಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ಶಿವಮೊಗ್ಗದಿಂದ ದೆಹಲಿ, ಅಹಮದಾಬಾದ್, ಪುಣೆ ಮಾರ್ಗದಲ್ಲಿ ವಿಮಾನಯಾನ ಆರಂಭಕ್ಕೆ ಅನುಮತಿ ಕೇಳಿದೆ. ಈ ಸಂಬಂಧ ವಿಮಾನಯಾನ ಸಚಿವರಿಗೆ ಪತ್ರ ಬರೆದು ಆದಷ್ಟು ಬೇಗ ಅನುಮತಿ ನೀಡುವಂತೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.
SUMMARY | Cargo flights to start soon at Shivamogga airport. Night landing, visibility problem, Shivamogga airport, MP BY Raghavendra
KEY WORDS | Cargo flights to start soon at Shivamogga airport. Night landing, visibility problem, Shivamogga airport, MP BY Raghavendra