ಜೇನು ಸಾಕಾಣಿಕೆಯಿಂದ ಪರಿಸರಕ್ಕೆ ಉತ್ತಮ ಕೊಡುಗೆ ನೀಡಲು ಕರೆ

The beekeeping training was conducted from February 10 to 12 for scheduled tribe farmers in the gram panchayat of Hosanagara taluk, city.

ಜೇನು ಸಾಕಾಣಿಕೆಯಿಂದ ಪರಿಸರಕ್ಕೆ ಉತ್ತಮ ಕೊಡುಗೆ ನೀಡಲು ಕರೆ
Call for better contribution to the environment from beekeeping

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 13, 2025

ಶಿವಮೊಗ್ಗ | ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ, ಗ್ರಾಮ ಪಂಚಾಯತಿ, ನಗರ ಇವರ ಸಂಯುಕ್ತ ಆಶ್ರಯದಲ್ಲಿ ಐ.ಸಿ.ಎ.ಆರ್. ಟಿ.ಎಸ್.ಪಿ. ಯೋಜನೆ “ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿ ಜೇನುಸಾಕಣಿಕೆಯ ತಂತ್ರಗಳೊಂದಿಗೆ ಪರಿಶಿಷ್ಟ ಪಂಗಡಗಳ ಸಬಲೀಕರಣ ಅಡಿಯಲ್ಲಿ ಜೇನು ಸಾಕಾಣಿಕೆ ತರಬೇತಿಯನ್ನು ಫೆ 10 ರಿಂದ 12 ರ ವರೆಗೆ ಹೊಸನಗರ ತಾಲ್ಲೂಕಿನ ಗ್ರಾಮ ಪಂಚಾಯತಿ, ನಗರದಲ್ಲಿ ಪರಿಶಿಷ್ಟ ಪಂಗಡದ ರೈತರಿಗೆ ಹಮ್ಮಿಕೊಳ್ಳಲಾಗಿತ್ತು. 

ಈ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ ಶ್ರೀಮತಿ ಸಂಗೀತ, ಅಧ್ಯಕ್ಷರು, ಗ್ರಾಮ ಪಂಚಾಯತಿ, ನಗರ ರವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಶಿಬಿರಾರ್ಥಿಗಳಿಗೆ ಜೇನು ಸಾಕಾಣಿಕೆಯನ್ನು ವೃತ್ತಿಯಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು. 

ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಗಣ್ಯರು ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರದೊಂದಿಗೆ ಜೇನು ಸಾಕಾಣಿಕೆಗೆ ಬೇಕಾದ ಪರಿಕರಗಳನ್ನು ವಿತರಣೆ ಮಾಡಿದರು. ನಗರ ಗ್ರಾ.ಪಂ. ಸದಸ್ಯ ಜಾತಪ್ಪ ಗೌಡರು ಜೇನು ಹುಳಗಳು ಬೆಳೆಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ ಅತ್ಯಮೂಲ್ಯ ಪಾತ್ರವಹಿಸುತ್ತಿದ್ದು, ಜೇನು ಸಾಕಾಣೆಯನ್ನು ವೃತ್ತಿಯಾಗಿ ಅಳವಡಿಸಿಕೊಂಡು ದೇಶದ ಆರ್ಥಿಕ ಪ್ರಗತಿಗೆ ಕೈ ಜೋಡಿಸಬೇಕೆಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು. 

ನಗರ ಗ್ರಾ.ಪಂ.ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಚಂದ್ರ ಅವರು ಜೇನು ಸಾಕಾಣೆ ತರಬೇತಿಯಲ್ಲಿ ನೀಡಿರುವ ಪರಿಕರಗಳನ್ನು ಸದುಪಯೋಗಪಡಿಸಿಕೊಂಡು ಆಸಕ್ತಿಯಿಂದ ಜೇನು ಸಾಕಾಣೆ ವೃತ್ತಿಯನ್ನು ಆರಂಭಿಸಲು ಸಲಹೆ ನೇಡಿದರು. ಹೊಸನಗರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಾಗರತ್ನ ಎಂ. ಸಿ.ಇವರು ಶಿಭಿರಾರ್ಥಿಗಳಿಗೆ ಜೇನು ಸಾಕಾಣೆಯನ್ನು ದೊಡ್ಡ ಮಟ್ಟದಲ್ಲಿ ಉದ್ಯಮವಾಗಿ ಕೈಗೊಂಡರೆ ಪಂಚಾಯತಿಯಿಂದ ಉತ್ಪಾದಿಸಿದ ಜೇನು ತುಪ್ಪಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು. 

SUMMARY | The beekeeping training was conducted from February 10 to 12 for scheduled tribe farmers in the gram panchayat of Hosanagara taluk, city.

KEYWORDS | Hosanagara taluk, beekeeping training, farmers,