JDS ಶಾಸಕರ ಬಗ್ಗೆ ಸಿಪಿ ಯೋಗೇಶ್ವರ್‌ ಹೇಳಿಕೆ | ಕೆರಳಿದ ಶಾಸಕಿ ಶಾರದಾ ಪೂರ್ಯನಾಯ್ಕ್‌ | ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

Madhu Bangarappa , Sharada Puryanaik , CP Yogeshwars remarks on JDS MLAs

JDS ಶಾಸಕರ ಬಗ್ಗೆ ಸಿಪಿ ಯೋಗೇಶ್ವರ್‌ ಹೇಳಿಕೆ  | ಕೆರಳಿದ ಶಾಸಕಿ ಶಾರದಾ ಪೂರ್ಯನಾಯ್ಕ್‌ | ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?
Madhu Bangarappa , Sharada Puryanaik , CP Yogeshwars remarks on JDS MLAs

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 26, 2024 ‌ 

ಸದ್ಯ ಕಾಂಗ್ರೆಸ್‌ ವಲಯದಲ್ಲಿ ಚನ್ನಪಟ್ಟಣದ ನೂತನ ಶಾಸಕ ಸಿಪಿ ಯೋಗೇಶ್ವರ್‌ರವರ ಹೇಳಿಕೆ ತುಂಬಾನೆ ಸದ್ದು ಮಾಡುತ್ತಿದೆ. ಜೆಡಿಎಸ್‌ನ ಎಲ್ಲಾ ಶಾಸಕರನ್ನ ಕಾಂಗ್ರೆಸ್‌ಗೆ ಕರೆದುಕೊಂಡು ಬರುವುದಾಗಿ ಅವರು ಹೇಳಿದ್ದಾರೆ. ಈ ಹೇಳಿಕೆ ಬಗ್ಗೆ ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಇದರ ನಡುವೆ ಜೆಡಿಎಸ್‌ ಶಾಸಕರನ್ನ ಕಾಂಗ್ರೆಸ್‌ ಗೆ  ಕರೆತರುವ ಕೆಲಸ ಶಿವಮೊಗ್ಗದಿಂದಲೇ ಏಕಾಗಬಾರದು ಎಂದು ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಮಧು ಬಂಗಾರಪ್ಪ ಮೂರು ಉಪ ಚುನಾವಣೆಯಾದ ಮೇಲೆ ಉತ್ಸಾಹ ಬಂದಿದೆ ಎಂದರು.

ಸಿಪಿ ಯೋಗೇಶ್ವರ್‌ರವರು ಗೆಲುವಿನ  ಹುಮ್ಮಸ್ಸಿನಿಂದ ಆ ಮಾತನ್ನ ಹೇಳಿದ್ದಾರೆ ಎಂದ ಮಧು ಬಂಗಾರಪ್ಪರವರು ಜೆಡಿಎಸ್ ಅಂತ ಮಾತ್ರ ಯಾಕೇ ಹೇಳ್ತಿರಾ?  ಜೆಡಿಎಸ್ ನಿಮಗೆ ಫ್ರೀಯಾಗಿ ಸಿಕ್ಕಿದೆಯಾ ? ಜೆಡಿಎಸ್ ದೊಡ್ಡ ನ್ಯಾಷನಲ್ ಪಾರ್ಟಿ ಆಮೇಲೆ ರಿಜಿನಲ್ ಪಾರ್ಟಿ ಆಗಿ ಉಳಿದುಕೊಂಡಿದೆ. ಕೇವಲ ಜೆಡಿಎಸ್ ಅಂತಾ ಯಾಕೆ ?  ಬಿಜೆಪಿಯಿಂದಲೂ ಕಾಂಗ್ರೆಸ್‌ಗೆ ಬರಲಿ ಎಂದರು. 

ಯಾರು ಬೇಕಾದರೂ ಕಾಂಗ್ರೆಸ್‌ಗೆ ಬರಬಹುದು ಎಂದ ಸಚಿವರು ನಾನು ಸಹ ಬೇರೆ ಪಕ್ಷದಲ್ಲಿ ಇದ್ದೆ ಚುನಾವಣೆ ಪೂರ್ವವಾಗಿ ಬಂದು ಸೇರಿಕೊಂಡೆ .ತತ್ವ ಸಿದ್ದಾಂತದ ಮೇಲೆ ನಡೆದುಕೊಂಡು ಹೋಗುತ್ತಿದ್ದೇನೆ, ನನಗಿಲ್ಲಿ ಗೌರವ ಕೊಟ್ಟಿದ್ದಾರೆ ಸ್ಥಾನಮಾನ ಕೊಟ್ಟಿದ್ದಾರೆ. ಕೆಟ್ಟ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯವರು ಬಂದು ಸೇರಿಕೊಳ್ಳಬೇಕು ಅಂತಾ ಸಲಹೆ ನೀಡಿದರು. 

ಇನ್ನೂ ಜೆಡಿಎಸ್ ಶಾಸಕರನ್ನ ಕಾಂಗ್ರೆಸ್ ಗೆ ಕರೆತರುತ್ತೇನೆ ಎನ್ನುವ ಶಾಸಕ ಯೋಗೇಶ್ವರ್ ಹೇಳಿಕೆ ವಿಚಾರವಾಗಿ ಖಾರವಾಗಿ ಪ್ರತಿಕ್ರಿಯಿಸಿದ  ಜೆಡಿಎಸ್ ಶಾಸಕಿ ಶಾರದಾ ಪೂರ್ಯನಾಯ್ಕ್‌  

ಅವರ್ಯಾರು ನಮ್ಮನೇನು ಕೊಂಡುಕೊಂಡಿದ್ದಾರಾ ? ಅವರನ್ನು ನಂಬಿಕೊಂಡು ನಮ್ಮ ಕ್ಷೇತ್ರದಲ್ಲಿ ಗೆದ್ದು ಬಂದಿದ್ದೀವಾ ನಾವು?  ಅವರನ್ನ ನಂಬಿಕೊಂಡು ನಾವು ರಾಜಕಾರಣ ಮಾಡುತ್ತಿದ್ದೇವಾ? ಅವರ್ಯಾರು ಎಲ್ಲರನ್ನ ಕೊಂಡುಕೊಳ್ಳುತ್ತೇನೆ ಎನ್ನುವ ರೀತಿಯಲ್ಲಿ ಮಾತನಾಡಲು ಅಂತಾ ಪ್ರಶ್ನಿಸಿದ್ದಾರೆ. 

ಶಾಸಕರಾಗಿ ಗೌರವಯುತವಾಗಿ ನಡೆದುಕೊಳ್ಳುವುದನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ನಮಗೆ ಟಾಸ್ಕ್ ಕೊಟ್ಟರೆ ಅವರನ್ನು ಸೆಳೆಯುತ್ತೇವೆ, ಇವರನ್ನು ಕರೆದುಕೊಂಡು ಬರುತ್ತೇವೆ ಎನ್ನುವುದನ್ನು ಬಿಡಬೇಕು ಎಂದರು. ಅಲ್ಲದೆ  ಅವರಿಗೆ ಇದನ್ನೇ ಮಾಡಿ ಅಭ್ಯಾಸ ಹಾಗಾಗಿ ಅವರು ಇದನ್ನೇ ಹೇಳುತ್ತಾರೆ ಎಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರು ಸಿಪಿ ಯೋಗೇಶ್ವರ್‌ರವರು ಅಹಂ ಕಾರಣಕ್ಕೆ ಈ ರೀತಿ ಹೇಳಿಕೆಯನ್ನ ನೀಡುತ್ತಿದ್ದಾರೆ. ಯೋಗೇಶ್ವರ್ ಅವರು ಅವರ ಪಾರ್ಟಿಯನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗಿ ನಿಂತು ಗೆದ್ದಿರುವರು ಅವರು ನಮ್ಮ ಬಗ್ಗೆ ಏನು ಹೇಳ್ತಾರೆ ಎಂದು ಪ್ರ‍ಶ್ನಿಸಿದರು. 

SUMMARY | Madhu Bangarappa and Sharada Puryanaik react to CP Yogeshwar's remarks on JD(S) MLAs 

KEY WORDS  | Madhu Bangarappa , Sharada Puryanaik , CP Yogeshwars remarks on JDS MLAs