ಹೆಚ್ ಸಿದ್ದಯ್ಯ ಸರ್ಕಲ್ ಬಳಿ ನಡೆದಿದ್ದೇನು? ಕಾರು ಅಂಗಾತ ಬಿದ್ದಿದ್ದೇಗೆ ? ಆತನ ಸಾವಿಗೆ ಏನು ಕಾರಣ CC TV ದೃಶ್ಯ!
CCTV footage of the car accident near, Siddaiah Circle Malenadu Today ,Fatal accident ,H Siddaiah Road Circle, Shimoga
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 2, 2025
ಹೊಸವರುಷವನ್ನು ಸ್ವಾಗತಿಸುವ ದಿನ ಹಳೆಯ ಶಿವಮೊಗ್ಗದ ಸಿದ್ದಯ್ಯ ಸರ್ಕಲ್ ಬಳಿ ನಡೆದ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ದೃಶ್ಯ ಮಲೆನಾಡು ಟುಡೆಗೆ ಲಭ್ಯವಾಗಿದೆ.
ಹೊಸವರುಷದ ಮೊದಲ ರಾತ್ರಿಯಲ್ಲೆ, ಸಿದ್ದಯ್ಯ ಸರ್ಕಲ್ ಬಳಿ ಭೀಕರ ಅಪಘಾತ | ಹಂಪ್ ಹಾರಿ ಉಲ್ಟಾ ಬಿದ್ದ ಕಾರು | ಓರ್ವ ಸಾವು ಎಂಬ ವರದಿಯನ್ನು ನಿನ್ನೆ ದಿನ ಮಲೆನಾಡು ಟುಡೆಯಲ್ಲಿ ಓದಿರುತ್ತೀರಿ. ಇದೇ ಘಟನೆಯ ಸಿಸಿ ಕ್ಯಾಮರಾ ದೃಶ್ಯಗಳನ್ನ ಅರಸಿಕೊಂಡು ಹೋದಾಗ ಘಟನೆಯ ದೃಶ್ಯಗಳು ಲಭ್ಯವಾಗಿದೆ.
ಈ ಅಪಘಾತದಲ್ಲಿ ಗೋಪಾಳ ನಿವಾಸಿ 20 ವರ್ಷದ ಧನುಷ್ ಎಂಬಾತ ಸಾವನ್ನಪ್ಪಿದ್ದ ಘಟನೆಯಲ್ಲಿ ಕಾರು ಪಲ್ಟಿಯಾಗಿ ಅಂಗಾತ ಬಿದ್ದಿತ್ತು. ಅದೃಷ್ಟಕ್ಕೆ ಕಾರಿನಲ್ಲಿದ್ದವರಿಗೆ ಏನಾಗಿರಲಿಲ್ಲ. ಇನ್ನೊಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಸದ್ಯ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದು, ಇದೊಂದು ಚೇಸಿಂಗ್ ಘಟನೆ ಎನ್ನಲಾಗಿದೆ.
CCTV footage of the car accident near, Siddaiah Circle #shivamogga pic.twitter.com/BBg8dbYbGm — malenadutoday.com (@malnadtoday) January 2, 2025
SUMMARY | CCTV footage of the car accident near Siddaiah Circle was shared with Malenadu Today.
KEY WORDS | CCTV footage of the car accident near, Siddaiah Circle Malenadu Today ,Fatal accident ,H Siddaiah Road Circle, Shimoga