ಮಂಡ್ಲಿ ಪಂಪ್‌ಹೌಸ್‌ ಬಳಿ ಉಡುಪಿ ಮಂಗಳೂರು ಬಸ್‌ ಡಿಕ್ಕಿ | ಹೊಂಡಕ್ಕೆ ಬಿದ್ದ ಸ್ಕೂಟಿ | ಬಾಲಕಿಗೆ ಗಂಭೀರ ಗಾಯ | ಸವಾರರೇ ಎಚ್ಚರ

Shimoga Mangalore Udupi Route Bus,  Bus and scooty collide , pump house Mandli, Shimoga NT ROAD

ಮಂಡ್ಲಿ ಪಂಪ್‌ಹೌಸ್‌ ಬಳಿ ಉಡುಪಿ ಮಂಗಳೂರು ಬಸ್‌ ಡಿಕ್ಕಿ | ಹೊಂಡಕ್ಕೆ ಬಿದ್ದ ಸ್ಕೂಟಿ | ಬಾಲಕಿಗೆ ಗಂಭೀರ ಗಾಯ | ಸವಾರರೇ ಎಚ್ಚರ
Shimoga Mangalore Udupi Route Bus,  Bus and scooty collide , pump house Mandli, Shimoga NT ROAD

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 18, 2025 ‌‌ 

ಶಿವಮೊಗ್ಗ NT ROAD ಮಂಡ್ಲಿ ಸಮೀಪ ಸಿಗುವ ಪಂಪ್‌ ಹೌಸ್‌ ಬಳಿ ಬಸ್‌ ಹಾಗೂ ಸ್ಕೂಟಿ ಡಿಕ್ಕಿಯಾಗಿ ಆಕ್ಸಿಡೆಂಟ್‌ ಆಗಿದೆ. ಘಟನೆಯಲ್ಲಿ ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.  ತಂದೆಯೊಂದಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಹೇಗಾಯ್ತು ಘಟನೆ 

ಗೊಂದಿಚಟ್ನಹಳ್ಳಿ ನಿವಾಸಿಯೊಬ್ಬರು ತಮ್ಮ ಮಗಳನ್ನು ಕರೆದಕೊಂಡು ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಶಿವಮೊಗ್ಗ ಮಂಗಳೂರು ಉಡುಪಿ ರೂಟ್‌ ಬಸ್‌ (Shimoga Mangalore Udupi Route Bus) ಮಂಗಳೂರಿಗೆ ಹೊರಟಿತ್ತು. ಮಂಡ್ಲಿ ಸಮೀಪ ಸ್ಕೂಟಿ ಮತ್ತು ಬಸ್‌ ಪರಸ್ಪರ ಡಿಕ್ಕಿಯಾಗಿದೆ. ಪರಿಣಾಮ ಸ್ಕೂಟಿ ಸವಾರನ ನಿಯಂತ್ರಣ ತಪ್ಪಿ ಫೋರ್‌ವೇ ಕಾಮಗಾರಿ ನಡೆಯುತ್ತಿದ್ದ ಡ್ರೈನ್‌ಗೆ ಬಿದ್ದಿದೆ. ಬಾಲಕಿಯು ಕೆಳಕ್ಕೆ ಬಿದ್ದಿದ್ದು, ಆಕೆಗೆ ಗಂಭೀರವಾದ ಪೆಟ್ಟು ಬಿದ್ದಿದೆ. ಘಟನೆಯ ಸಂಬಂಧ ಪ‍ಶ್ಚಿಮ ಸಂಚಾರಿ ಪೊಲೀಸ್‌ ಠಾಣೆಯವರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

SUMMARY |   Bus and scooty collide near pump house near Mandli, Shimoga NT ROAD

KEY WORDS | Shimoga Mangalore Udupi Route Bus,  Bus and scooty collide , pump house Mandli, Shimoga NT ROAD