ಬಸ್‌ ಮೇಲೆ ಗೂಳಿ ಡೆಡ್ಲಿ ಅಟ್ಯಾಕ್‌ | ವಿಡಿಯೋ ವೈರಲ್‌

In a video that has gone viral on social media, a bull attacked a bus on its way to a depot in Jaipur's Ajmer and smashed the window panes of the bus

ಬಸ್‌ ಮೇಲೆ ಗೂಳಿ ಡೆಡ್ಲಿ ಅಟ್ಯಾಕ್‌ | ವಿಡಿಯೋ ವೈರಲ್‌
Bull deadly attack on bus

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 11, 2025

ರಾಜಸ್ಥಾನ್‌ | ಜೈ ಪುರದ ಅಜ್ಮೀರದಲ್ಲಿ ಡಿಪೋಗೆ ತೆರಳುತ್ತಿದ್ದ ಬಸ್‌ ಮೇಲೆ ಗೂಳಿಯೊಂದು ಅಟ್ಯಾಕ್‌ ಮಾಡಿ ಬಸ್‌ನ ಕಿಟಕಿಯ ಗಾಜುಗಳನ್ನು ಪುಡಿ ಮಾಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ಹಿಂದೆಲ್ಲಾ ನಾವು ಬಸ್‌ ಹಾಗೂ ಇತರ ವಾಹನಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಹೊರಗಿನಿಂದ ನಾಯಿ ದನ ಅಥವಾ ಇನ್ನಿತರೆ ಪ್ರಾಣಿಗಳು  ಬಂದು ಗುದ್ದಿ ಇನ್ನಿಲ್ಲದ ಅಪಾಯವನ್ನು ತಂದೊಡ್ಡುತ್ತಿದ್ದವು. ಅದೇರೀತಿ ಜೈ ಪುರದ ಅಜ್ಮೀರದಲ್ಲಿ ಎರಡು ಹೋರಿಗಳು ಪರಸ್ಪರ ಗುದ್ದಾಡಿಕೊಂಡಿವೆ. ಈ ವೇಳೆ ಒಂದು ಗೂಳಿ ಸಡನ್‌ ಆಗಿ ಡಿಪೋಗೆ ತೆರಳುತ್ತಿದ್ದ ಬಸ್‌ ಒಳಗೆ ನುಗ್ಗಿದೆ. ಅಷ್ಟೇ ಅಲ್ಲದೆ ಆ ಗೂಳಿ ಬಸ್ಸಿನ ಕಿಟಕಿಯ ಗಾಜುಗಳನ್ನು ಪುಡಿಮಾಡಿದೆ. ಅದೃಷ್ಟವಶಾತ್‌ ಬಸ್ಸಿನಲ್ಲಿ ಯಾವುದೇ ಪ್ರಯಾಣಿಕರಿರದೆ  ಬಸ್‌ ಚಾಲಕ ಹಾಗು ಕಂಡಕ್ಟರ್‌ ಮಾತ್ರ ಇದ್ದಿದ್ದು ಇಬ್ಬರು ಬಸ್‌ನಿಂದ ಹೊರಗೆ ಹಾರಿ ಅನಾಹುತದಂದ ತಪ್ಪಿಸಿಕೊಂಡಿದ್ದಾರೆ.  

SUMMARY | In a video that has gone viral on social media, a bull attacked a bus on its way to a depot in Jaipur's Ajmer and smashed the window panes of the bus

KEYWORDS | Jaipur,  Ajmer, bull, attacked, viral videos,