ರಸ್ತೆ ಬದಿ ಬೈಕ್ ನಿಲ್ಲಿಸಿದ್ದ ಬೈಕ್‌ಗೆ ಬೊಲೆರೋ ಡಿಕ್ಕಿ | ಪತ್ನಿ ಸಾವು, ಪತಿ ಸ್ಥಿತಿ ಗಂಭೀರ | ಪುಟ್ಟ ಮಗು ಬಚಾವ್
woman from Soraba taluk of Shivamogga district, who was sitting on the back of the bike, was killed when a Bolero pick-up vehicle rammed into a bike parked on the roadside.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024
ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗೆ ಬೊಲೆರೊ ಪಿಕಪ್ ವಾಹನ ಡಿಕ್ಕಿಹೊಡೆದ ಪರಿಣಾಮ ಬೈಕ್‌ನ ಹಿಂಬದಿ ಕುಳಿತಿದ್ದ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಮಹಿಳೆ ಸಾವನ್ನಪ್ಪಿದ್ದಾರೆ.
ಸೊರಬ ತಾಲ್ಲೂಕಿನ ಗಡಿಭಾಗದಲ್ಲಿರುವ ಕಪಗೇರಿ ಬಳಿ ನಿನ್ನೆದಿನ ಈ ಘಟನೆ ಸಂಭವಿಸಿದೆ. ಕೆರೆಹಳ್ಳಿ ಗ್ರಾಮದ ಯಶೋಧ ಮಹೇಶ್ ಆಚಾರ್ (35) ಮೃತ ಮಹಿಳೆ. ಸೊರಬದಿಂದ ಬನವಾಸಿ ಮಾರ್ಗವಾಗಿ ತೆರಳುತ್ತಿದ್ದ ಪಿಕಪ್ ವಾಹನ ,ರಸ್ತೆ ಬದಿ ನಿಂತಿದ್ದ ಬೈಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಪರಿಣಾಮ ಬೈಕ್ ಸವಾರ ಮಹೇಶ್ ಆಚಾರ್ (45) ತೀವ್ರವಾಗಿ ಗಾಯಗೊಂಡಿದ್ದರು ಅವರನ್ನ ಬನವಾಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿರಸಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬೈಕ್‌ನ ಹಿಂಬದಿ ಕುಳಿತಿದ್ದ ಮಹೇಶ್ ಪತ್ನಿ ಯಶೋಧ ಸ್ಥಳದಲ್ಲೇ ಸಾವನ್ನಪ್ಪಿದ್ದರು. ದಂಪತಿ ಎತ್ತಿಕೊಂಡಿದ್ದ ಎರಡು ವರ್ಷದ ಪುತ್ರಿ ಸಾಹಿತ್ಯ ಬಚಾವ್ ಆಗಿದ್ದಾಳೆ
SUMMARY| woman from Soraba taluk of Shivamogga district, who was sitting on the back of the bike, was killed when a Bolero pick-up vehicle rammed into a bike parked on the roadside.
KEY WORDS | woman from Soraba taluk, Shivamogga district, Bolero pick-up vehicle rammed into a bike