TVS STAR ಸಿಟಿ ಬೈಕ್ ಪತ್ತೆಗೆ ಹೋದ ಪೊಲೀಸರಿಗೆ ಸಿಕ್ತು ಮತ್ತೊಂದು ಕೇಸ್
Shiralakoppa Police Station,Bike Theft Case, Sagar Town Police Station, Soraba Taluk, Shiralakoppa,
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 5, 2025
ಟಿವಿಎಸ್ ಸ್ಟಾರ್ ಸಿಟಿ ಬೈಕ್‌ವೊಂದನ್ನ ಹುಡುಕಲು ಹೋದ ಪೊಲೀಸರಿಗೆ ಹೀರೋ ಫ್ಯಾಷನ್ ಪ್ರೋ ಬೈಕ್‌ವೊಂದು ಪತ್ತೆಯಾಗಿದ್ದು ಒಂದೇ ದಿನ ಎರಡು ಪ್ರಕರಣಗಳನ್ನ ಭೇದಿಸಿ ಸೊರಬ ತಾಲ್ಲೂಕಿನ ನಿವಾಸಿ ಆರೋಪಿಯನ್ನ ಬಂಧಿಸಿದ್ದಾರೆ.
ಏನಿದು ಪ್ರಕರಣ
ಕಳೆದ ದಿನಾಂಕಃ 29-12-2024 ರಂದು ಶಿರಾಳಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಜಂಬೂರು ಗ್ರಾಮದ ವಾಸಿ ದೇವೆಂದ್ರಪ್ಪ ರವರು ಬೈಕ್ ಕಳ್ಳತನವಾಗಿತ್ತು. ಈ ಸಂಬಂದ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿತ್ತು. ಈ ಪ್ರಕರಣದ ತನಿಖೆ ನಡೆಸ್ತಿದ್ದ ಪೊಲೀಸರಿಗೆ ದಿನಾಂಕಃ 04-01-2025 ರಂದು ಆರೋಪಿ ವೀರಭದ್ರಪ್ಪ (ಹುಣವಳ್ಳಿ ಗ್ರಾಮ, ಸೊರಬ) ಸಿಕ್ಕಿಬಿದ್ದಿದ್ದ. ಆತನ ವಿಚಾರಣೆ ವೇಳೇ ಸಾಗರ ಟೌನ್‌ನಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಬಾಯಿಬಿಟ್ಟಿದ್ದ.
ಈತನಿಂದ ಶಿರಾಳಕೊಪ್ಪ ಪೊಲೀಸ್ ಠಾಣೆಯ 01 ಮತ್ತು ಸಾಗರ ಟೌನ್ ಪೊಲಿಸ್ ಠಾಣೆಯ 01 ಪ್ರಕರಣ ಸೇರಿ ಒಟ್ಟು 02 ದ್ವಿ ಚಕ್ರ ವಾಹನಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 60,000/- ರೂಗಳ ಒಂದು ಸ್ಟಾರ್ ಸಿಟಿ ಬೈಕ್ ಹಾಗೂ ಅಂದಾಜು ಮೌಲ್ಯ 35,000/- ರೂಗಳ ಒಂದು ಫ್ಯಾಷನ್ ಪ್ರೋ ಬೈಕ್ ಸೇರಿ ಒಟ್ಟು 95,000/- ರೂ ಮೌಲ್ಯದ ಎರಡು ಬೈಕ್ ಗಳನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ.
SUMMARY | Shiralakoppa Police Station Bike Theft Case, Sagar Town Police Station, Soraba Taluk, Shiralakoppa,
KEY WORDS | Shiralakoppa Police Station,Bike Theft Case, Sagar Town Police Station, Soraba Taluk, Shiralakoppa,